ʼಮಾವಿನೆಲೆʼಯ ಪ್ರಯೋಜನ ಕೇಳಿದ್ರೆ ನೀವು ಬೆರಗಾಗುತ್ತೀರಿ…!

 

ಮಾವಿನಹಣ್ಣು, ಕಾಯಿ, ಎಷ್ಟು ಒಳ್ಳೆಯದೋ ಅಷ್ಟೇ ಈ ಮಾವಿನ ಎಲೆ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಾವಿನ ಎಲೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಮಾವಿನೆಲೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.

*ಮಾವಿನೆಲೆಯಲ್ಲಿ ಆಯಂಟಿಆಂಕ್ಸಿಡೆಂಟ್ ಹೇರಳವಾಗಿರುತ್ತದೆ. ಹಾಗೇ ಇದರಲ್ಲಿ ಸಿ ವಿಟಮಿನ್ ಕೂಡ ಇರುತ್ತದೆ. ಮಾವಿನೆಲೆಯ ಟೀ ಮಾಡಿಕೊಂಡು ಕುಡಿಯುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಸಿ ಅಂಶ ಸಿಗುತ್ತದೆ. ವಿಟಮಿನ್ ಸಿ ದೇಹದಲ್ಲಿರುವ ಟಾಕ್ಸಿನ್ ಅನ್ನು ಹೊರಹಾಕಲು ಸಹಾಯಮಾಡುತ್ತದೆ.

* ಮಾವಿನೆಲೆಯು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

* ಕೆಲಸದ ಒತ್ತಡ, ಯಾವುದೋ ತಲೆಬಿಸಿಯಿಂದ ಕಿರಿಕಿರಿ ಅನುಭವಿಸುತ್ತಿದ್ದರೆ 2 ಹಿಡಿ ಮಾವಿನೆಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ. ಈ ನೀರಿನಿಂದ ಸ್ನಾನ ಮಾಡಿ. ಇದು ದೇಹವನ್ನು ಉಲ್ಲಾಸಗೊಳಿಸುತ್ತದೆ.

*10 ಮಾವಿನೆಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಕ್ಲೀನ್ ಮಾಡಿ. ಇದನ್ನು 1 ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿರಿ. ಇಡೀ ರಾತ್ರಿ ಇದನ್ನು ಹಾಗೇಯೇ ಬಿಡಿ. ಬೆಳಿಗ್ಗೆ ಎಲೆಗಳನ್ನು ತೆಗೆದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

* ಬಿಕ್ಕಳಿಗೆ ಹಾಗೂ ಗಂಟಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಮಾವಿನೆಲೆ ಒಂದು ಅದ್ಭುತ ಮನೆಮದ್ದು. ಸ್ವಲ್ಪ ಮಾವಿನೆಲೆಯನ್ನು ಸುಟ್ಟು ಅದರ ಹೊಗೆಯನ್ನು ಮೂಗಿಗೆ ಎಳೆದುಕೊಳ್ಳಿ. ಇದರಿಂದ ಬಿಕ್ಕಳಿಗೆ ಕಡಿಮೆಯಾಗುತ್ತದೆ ಹಾಗೂ ಗಂಟಲಿನ ಸಮಸ್ಯೆ ನಿವಾರಣೆಯಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಜ್ಯೋತಿಷ್ಯ ಪ್ರಾರಂಭವು ಪ್ರತಿದಿನ INR 41 ಲಕ್ಷಗಳ ವ್ಯವಹಾರವನ್ನು ಮಾಡುತ್ತದೆ

Sat Feb 5 , 2022
  ನಿಮ್ಮ ಭವಿಷ್ಯದಲ್ಲಿ ಏನಾಗುತ್ತದೆ ಎಂದು ತಿಳಿಯಲು ನೀವು ಬಯಸುವಿರಾ? ಜೀವನೋಪಾಯಕ್ಕಾಗಿ ಅದನ್ನು ಮಾಡುವ ಕಂಪನಿ ಇಲ್ಲಿದೆ! ಹಚ್ಚಿನ ಭಾರತೀಯ ಸ್ಟಾರ್ಟ್‌ಅಪ್‌ಗಳು ಅನುಕೂಲವನ್ನು ನೀಡುವ ಮೂಲಕ ನಿಮ್ಮ ವರ್ತಮಾನದ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಿರುವಾಗ, ಈ ಸ್ಟಾರ್ಟ್‌ಅಪ್ ವರ್ತಮಾನದಲ್ಲಿ ಭವಿಷ್ಯವಾಣಿಯನ್ನು ನೀಡುವ ಮೂಲಕ ನಿಮ್ಮ ಭವಿಷ್ಯದ ಸಮಸ್ಯೆಗಳನ್ನು ಪರಿಹರಿಸುತ್ತಿದೆ! ಈ ದಿನಗಳಲ್ಲಿ ಜ್ಯೋತಿಷ್ಯವನ್ನು ಯಾರು ಬಳಸುತ್ತಾರೆ? Astrotalk ಕಳೆದ 4 ವರ್ಷಗಳಲ್ಲಿ 2 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಿದೆ […]

Advertisement

Wordpress Social Share Plugin powered by Ultimatelysocial