ಮೀಟು ಆರೋಪದ ಸ್ವಾಮೀಜಿಯಿಂದ ಮತ್ತೊಂದು ಪ್ರಮಾದ! ವಿದ್ಯಭ್ಯಾಸಕ್ಕಾಗಿ ಮಠಕ್ಕೆ ಬಂದ ವಿದ್ಯಾರ್ಥಿಗಳಿಗೆ ಕಾವಲು ಕಾಯೋ ಕೆಲಸ

ನೆಲಮಂಗಲ: ಮಠ ಮಾನ್ಯಗಳು ವಿದ್ಯಾರ್ಥಿಗಳ ಪಾಲಿಕೆ ಜೀವನವನ್ನು ಕಲಿಸುವ ಗುರುಕುಲ ಇದ್ದಂತೆ, ಆದರೆ ಇಲ್ಲೊಂದು ಮಠ ಮಕ್ಕಳಿಗೆ ವಿದ್ಯೆ, ವಸತಿ, ಪ್ರಸಾದ ನೀಡುವ ಬದಲಿಗೆ ಕಾವಲು ಕಾಯುವ ಕೆಲಸದ ಶಿಕ್ಷೆ ನೀಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವನಕಲ್ಲು ಮಲ್ಲೇಶ್ವರ ಮಠದ ಶ್ರೀ ಬಸವರಮಾನಂದ ಸ್ವಾಮೀಜಿ ತಮ್ಮ ಮಠದ ಶಾಲೆಯಲ್ಲಿ ಶಿಕ್ಷಣ ಕಲಿಯಬೇಕಾಗಿದ್ದ ಮಕ್ಕಳಿಗೆ ಪ್ರತಿನಿತ್ಯ ಕಾವಲು ಕಾಯೋ ಕೆಲಸಕ್ಕೆ ನೇಮಕ ಮಾಡಿರುವ ಆರೋಪ ಕೇಳಿಬಂದಿದೆ. ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಜಾಗ ಒತ್ತುವರಿ ಮಾಡಿದ್ದ ಹಿನ್ನೆಲೆಯಲ್ಲಿ ಒತ್ತುವರಿ ಜಾಗವನ್ನು ಈ ಹಿಂದೆಯೇ ತಾಲೂಕು ಕಂದಾಯ ಅಧಿಕಾರಿಗಳು ಅಕ್ರಮ ಎಂದು ತೆರವು ಮಾಡಿದ್ದರು. ಸರ್ವೆ ನಂ 61 ರಲ್ಲಿ ಗಣಪತಿ ದೇವಾಲಯ ನಿರ್ಮಿಸಿ ವನಕಲ್ಲು ಮಠಕ್ಕೆ ಸೇರಿದ ಜಾಗ ಎಂದು ಅಕ್ರಮ ಪ್ರವೇಶ ಮಾಡಿದ್ದರಿಂದ ತಹಶೀಲ್ದಾರ್ ನೇತೃತ್ವದಲ್ಲಿ ತೆರವು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಜಾಗಕ್ಕೆ ಮತ್ತೆ ಯಾರು ಬರ್ತಾರೆ ಅನ್ನೋ ಭಯದಲ್ಲಿರುವ ಸ್ವಾಮೀಜಿ, ಜಮೀನು ಕಬಳಿಸುವ ಆರೋಪದಲ್ಲಿ ಜಾಗವನ್ನು ಕಾಯಲು ಪ್ರತಿನಿತ್ಯ ಒಬ್ಬೊಬ್ಬ ವಿದ್ಯಾರ್ಥಿಗಳನ್ನ ನೇಮಕ ಮಾಡಿದ ಶ್ರೀಗಳು ಮಕ್ಕಳನ್ನು ಸ್ವಂತ ಕೆಲಸಕ್ಕೆ ಬಳಕೆ ಮಾಡಿದ್ದಾರೆ. ಇನ್ನೂ ಈ ಮಕ್ಕಳಿಗೆ ಊಟ ತಿಂಡಿ ನೀಡದ್ದಕ್ಕೆ ಅಳಲು ತೋಡಿಕೊಂಡಿರುವ ವಿದ್ಯಾರ್ಥಿ ಪ್ರತಿದಿನ ಇಲ್ಲಿ ತಂದು ಬಿಡ್ತಾರೆ ಆದರೆ ಊಟ ಕೊಡಲ್ಲ ಎಂದಿದ್ದಾನೆ. ಈ ಮನಕಲುಕುವ ಈ ಎಲ್ಲಾ ದೃಶ್ಯಗಳನ್ನ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದು ಸ್ವಾಮೀಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರದ ಮಾಜಿ ಸಚಿವ ಆರ್.ಎಲ್. ಜಾಲಪ್ಪ ವಿಧಿವಶ

Sat Dec 18 , 2021
40 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ ಸಚಿವ ಆರ್.ಎಲ್. ಜಾಲಪ್ಪ(96) ವಿಧಿವಶರಾಗಿದ್ದಾರೆ.ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಸ್ವಗ್ರಾಮ ತೂಬಗೆರೆಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.9 ಗಂಟೆಯ ನಂತರ ಪಾರ್ಥಿವ ಶರೀರವನ್ನು ದೊಡ್ಡಬಳ್ಳಾಪುರದ ಜಾಲಪ್ಪ ಇಂಜಿನಿಯರಿಂಗ್ ಕಾಲೇಜಿಗೆ ಸ್ಥಳಾಂತರ ಮಾಡಲಾಗುವುದು. ಅಂತಿಮ ದರ್ಶನದ ನಂತರ ಇಂದು ಸಂಜೆ 5 ಗಂಟೆಯೊಳಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಈಡಿಗರ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.ಅಕ್ಟೋಬರ್ 19, 1925 […]

Advertisement

Wordpress Social Share Plugin powered by Ultimatelysocial