‘ಪೆಂಟಗನ್’ ಚಿತ್ರದಲ್ಲಿ ಕನ್ನಡಪರ ಹೋರಾಟಗಾರನ ಪಾತ್ರದಲ್ಲಿ ನಟ ಕಿಶೋರ್ ನಟನೆ.

ಪೆಂಟಗನ್ ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಚಿತ್ರವಾಗಿದ್ದು, ಚಿತ್ರದ 5ನೇ ಟೀಸರ್ ಜನವರಿ 18 ರಂದು ಬಿಡುಗಡೆಯಾಗಲಿದೆ. ಪೆಂಟಗನ್ ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಚಿತ್ರವಾಗಿದ್ದು, ಚಿತ್ರದ 5ನೇ ಟೀಸರ್ ಜನವರಿ 18 ರಂದು ಬಿಡುಗಡೆಯಾಗಲಿದೆ.
‘ಪೆಂಟಗನ್’ ಐದು ಕಥೆಗಳುಳ್ಳ ಅಂಥಾಲಾಜಿ ಸಿನಿಮಾ ಆಗಿದ್ದು, ಒಂದೊಂದು ಕಥೆಯನ್ನು ಒಬ್ಬೊಬ್ಬರು ನಿದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಕಥೆಯಲ್ಲಿ ಮುಖ್ಯಪಾತ್ರವನ್ನು ಕಿಶೋರ್ ಮಾಡಿದ್ದಾರೆ. ಜೊತೆಗೆ ಪೃಥ್ವಿ ಅಂಬಾರ್ ಕೂಡ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ವಿಶೇಷ.

ಉಳಿದಂತೆ, ಅಶ್ವಿನಿ ಗೌಡ ಸೇರಿದಂತೆ ಹಲವು ಅನುಭವಿ ಕಲಾವಿದರು ಇದರಲ್ಲಿದ್ದಾರೆ.  ಈ ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳುವ ಗುರು ದೇಶಪಾಂಡೆ, ಈ ಕಥೆಯು ಕನ್ನಡ ಹೋರಾಟಗಾರನೊಬ್ಬನ ಕುರಿತು ಇದೆ. ಅವನ ವ್ಯಕ್ತಿತ್ವವನ್ನು ವೈಭವೀಕರಿಸದೇ ಅಥವಾ ಅವನ ಕ್ರಿಯಾಶೀಲತೆಯ ಬಗ್ಗೆ ನಕಾರಾತ್ಮಕವಾಗಿ ಹೇಳದೇ, ಹೋರಾಟಗಾರನೊಬ್ಬನ ಒಳತುಮುಲ ಹಾಗೂ ಅವನ ಜೀವನ ಸುತ್ತ ನಡೆಯುವ ಘಟನೆಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇದೊಂದು ಸೂಕ್ಷ್ಮ ರೀತಿಯ ಕಥೆಯಾಗಿದ್ದು, ಅದನ್ನು ಅಷ್ಟೇ ನಾಜೂಕಾಗಿ ಹಿಡಿದಿಡುವ ಪ್ರಯತ್ನವನ್ನು ಮಾಡಿದ್ದೇವೆ.

ಹೋರಾಟಗಾರನೊಬ್ಬನ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ಚರ್ಚಿಸುತ್ತಲೇ, ಹೋರಾಟಗಾರರ ಮೇಲಿನ ಹಲವು ಅನುಮಾನಗಳನ್ನು ನಿವಾರಿಸುವ ಪ್ರಯತ್ನವನ್ನು ಮಾಡಲಾಗಿದೆ..’ ಎಂದು ಹೇಳಿದ್ದಾರೆ. ಅಂದಹಾಗೆ, ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಈ ಕಥೆಗೆ ಅಭಿಲಾಷ್ ಕಲತ್ತಿ ಅವರ ಛಾಯಾಗ್ರಹಣ ಇದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ‘ಪೆಂಟಗನ್’ ಸಿನಿಮಾದಲ್ಲಿ ಒಟ್ಟು 5 ಕಥೆಗಳಿದ್ದು, ‘ಶಿವಾಜಿ ಸುರತ್ಕಲ್’ ಖ್ಯಾತಿಯ ಆಕಾಶ್ ಶ್ರೀವತ್ಸ, ‘ಬ್ರಹ್ಮಚಾರಿ’ ಖ್ಯಾತಿಯ ಚಂದ್ರ ಮೋಹನ್, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ಹೊಸ ಪ್ರತಿಭೆ ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇ ಶನ ಮಾಡಿದ್ದಾರೆ. ಜಿ ಸಿನಿಮಾಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ.

 
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟು ಬಂದ್.

Tue Jan 17 , 2023
ಬಸ್ ಗಳಿಲ್ಲದೆ ಬಿಕೋ ಎನ್ನುತ್ತಿರುವ ಕೇಂದ್ರ ಬಸ್ ನಿಲ್ದಾಣತೊಗರಿ ಬೆಳೆಗೆ ಪರಿಹಾರ ನೀಡುವಂತೆ ನಡೆಸುತ್ತಿರುವ ಬಂದ್ನಟೆ ರೋಗದಿಂದ ಹಾಳಾದ ತೊಗರಿಗೆ ಪರಿಹಾರಕ್ಕೆ ಆಗ್ರಹಿಸಿ ಕಲಬುರ್ಗಿ ಬಂದ್ ಗೆ ಕರೆ ನೀಡಿದ ರೈತರುಈ ಸಂದರ್ಭದಲ್ಲಿ ಮಾತನಾಡಿದ ಶರಣಬಸಪ್ಪ ಮಮಶೆಟ್ಟಿ ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷರು ಕೆಪಿಆರ್ಎಸ್ರೈತ ಸಂಘಟನೆಗಳು ದಲಿತ ಸಂಘಟನೆಗಳು ಕಾರ್ಮಿಕ ಕನ್ನಡಪರ ಸಂಘಟನೆಗಳು ವಿದ್ಯಾರ್ಥಿ ಸಂಘಟನೆಗಳು ಮಹಿಳಾ ಸಂಘಟನೆಗಳು ಅನೇಕ ಸಂಘಟನೆಗಳು ಈ ಒಂದು ಬಂದಿಗೆ ಬೆಂಬಲ ನೀಡಿರುತ್ತಾರೆಕಲಬುರ್ಗಿ ಜಿಲ್ಲೆಯಲ್ಲಿ ರೈತರು […]

Advertisement

Wordpress Social Share Plugin powered by Ultimatelysocial