MI vs RR: ಮೋಸದ ತೀರ್ಪಿಗೆ ರೋಹಿತ್ ಔಟ್; ಸತ್ಯ ಗೊತ್ತಿದ್ರೂ ಸಂಜು ಸ್ಯಾಮ್ಸನ್ ತೆಪ್ಪಗಿದ್ದಿದ್ದೇಕೆ?

ದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 42ನೇ ಪಂದ್ಯದಲ್ಲಿ ನಿನ್ನೆ ( ಏಪ್ರಿಲ್ 30 ) ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಐಪಿಎಲ್‌ನ 1000ನೇ ಪಂದ್ಯ ಎಂಬ ಖ್ಯಾತಿಯನ್ನು ಹೊಂದಿದ್ದ ಈ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗಳ ಗೆಲುವನ್ನು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 213 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ಮುಂಬೈ ಇಂಡಿಯನ್ಸ್ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು.

ಕೊನೆಯ ಓವರ್‌ನಲ್ಲಿ ಗೆಲ್ಲಲು 17 ರನ್‌ಗಳ ಅಗತ್ಯವಿದ್ದಾಗ ಟಿಮ್ ಡೇವಿಡ್ ಮೊದಲ ಮೂರು ಎಸೆತಗಳಲ್ಲಿಯೇ ಮೂರು ಸಿಕ್ಸರ್‌ಗಳನ್ನು ಬಾರಿಸಿ ಅಬ್ಬರದ ಜಯ ಸಾಧಿಸಲು ಕಾರಣರಾದರು. ಈ ಮೂಲಕ ರೋಹಿತ್ ಶರ್ಮಾ ಹುಟ್ಟುಹಬ್ಬದ ದಿನದಂದೇ ಮುಂಬೈ ಇಂಡಿಯನ್ಸ್ ಈ ಬೃಹತ್ ಗೆಲುವನ್ನು ಸಾಧಿಸಿ ಸತತ ಎರಡು ಸೋಲುಗಳ ಬಳಿಕ ಗೆಲುವಿನ ಹಾದಿಗೆ ಮರಳಿತು.

ಇನ್ನು ಜನ್ಮದಿನದ ವಿಶೇಷದ ಸಲುವಾಗಿ ನೆಚ್ಚಿನ ಕ್ರಿಕೆಟಿಗನಿಂದ ರೋಹಿತ್ ಶರ್ಮಾ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಿದ್ದರು. ಆದರೆ ರೋಹಿತ್ ಶರ್ಮಾ 5 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ಔಟ್ ಆದರು. ಸಂದೀಪ್ ಶರ್ಮಾ ಎಸೆದ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ರೋಹಿತ್ ಶರ್ಮಾ ಕ್ಲೀನ್ ಬೌಲ್ಡ್ ಎಂದು ತೀರ್ಪನ್ನು ನೀಡಲಾಯಿತು.

ಹೀಗೆ ರೋಹಿತ್ ಶರ್ಮಾ ಔಟ್ ಆದ ಬೆನ್ನಲ್ಲೇ ಇದೊಂದು ನಾಟ್ ಔಟ್ ಆಗಿದ್ದು, ರೋಹಿತ್ ಮೋಸದ ತೀರ್ಪಿಗೆ ಬಲಿಯಾಗಿದ್ದಾರೆ ಎಂದು ನೆಟ್ಟಿಗರು ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳು ಕಿಡಿಕಾರಿದ್ದಾರೆ. ಹೌದು, ಈ ಎಸೆತದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ನೆಟ್ಟಿಗರು ಇದೊಂದು ನಾಟ್ ಔಟ್ ಎಂದು ವಾದಿಸುತ್ತಿದ್ದಾರೆ.

ಇನ್ನು ಈ ವಿಡಿಯೊದಲ್ಲಿ ಚೆಂಡು ವಿಕೆಟ್‌ಗೆ ತಾಕದೆಯೇ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೈಸೇರಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಚೆಂಡು ಸಂಜು ಸ್ಯಾಮ್ಸನ್ ಕೈಸೇರಿದ ಬಳಿಕ ಸಂಜು ಸ್ಯಾಮ್ಸನ್ ಹಾಕಿದ್ದ ಕೈನ ಗ್ಲೌಸ್ ವಿಕೆಟ್‌ಗೆ ತಾಕಿದ ಪರಿಣಾಮ ವಿಕೆಟ್ ಬೆಲ್ಸ್ ನೆಲಕ್ಕೆ ಬಿದ್ದಿದೆ ಎಂಬುದನ್ನೂ ಸಹ ಕಾಣಬಹುದಾಗಿದೆ ಎಂದು ಅನೇಕರು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಇನ್ನೂ ಕೆಲ ನೆಟ್ಟಿಗರು ವಿಕೆಟ್‌ನ ಬೆಲ್ಸ್ ಬೀಳಲು ಕಾರಣ ಸಂಜು ಸ್ಯಾಮ್ಸನ್ ಕಾಲು ವಿಕೆಟ್‌ಗೆ ತಾಕಿದ್ದು ಎಂದು ಸಾಕ್ಷಿಗೆ ಫೋಟೊಗಳನ್ನೂ ಸಹ ಹಂಚಿಕೊಂಡಿದ್ದಾರೆ.

ಹೀಗೆ ವಿಡಿಯೊ ನೋಡಿದ ಪ್ರತಿಯೊಬ್ಬರೂ ಇದೊಂದು ಕ್ಲಿಯರ್ ನಾಟ್ ಔಟ್ ಎನ್ನುತ್ತಿದ್ದು, ಮೋಸದ ತೀರ್ಪಿಗೆ ರೋಹಿತ್ ಶರ್ಮಾ ಬಲಿಯಾದರು ಎಂದು ಅಭಿಪ್ರಾಯಪಡುತ್ತಿದ್ದಾರೆ. ಅಲ್ಲದೇ ಸಂಜು ಸ್ಯಾಮ್ಸನ್ ಅವರಿಗೆ ಇದು ನಾಟ್‌ಔಟ್ ಎಂಬುದು ಖಚಿತವಾಗಿ ತಿಳಿದೇ ಇರುತ್ತದೆ, ಹಾಗಿದ್ದರೂ ಅದನ್ನು ಹೇಳದೇ ತೆಪ್ಪಗಿದ್ದದ್ದೇಕೆ ಎಂದು ನೆಟ್ಟಿಗರು ಇಂಥ ವಿಷಯಗಳಲ್ಲಿ ಕ್ರೀಡಾ ಮನೋಭಾವ ಇರಬೇಕು ಎಂದು ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಹುಟ್ಟುಹಬ್ಬದ ದಿನದಂದು ರೋಹಿತ್ ಶರ್ಮಾ ಅಬ್ಬರದ ಆಟವನ್ನು ನೋಡಬಹುದು ಎಂದುಕೊಂಡಿದ್ದ ಅಭಿಮಾನಿಗಳಿಗೆ ಈ ವಿವಾದಾತ್ಮಕ ನಿರ್ಣಯ ನಿರಾಸೆಯನ್ನುಂಟುಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Karnataka Elections 2023: ಕರ್ನಾಟಕದಲ್ಲಿ ಮೋದಿ ಅಲೆ: ಈ ಬಿಜೆಪಿ ಅಭ್ಯರ್ಥಿಗಳ ಗೆಲುವು ಫಿಕ್ಸ್? ಇಲ್ಲಿಗೆ ಮಾಹಿತಿ

Mon May 1 , 2023
    ಬೆಂಗಳೂರು,ಮೇ1: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ದಿನದಿಂದ ದಿನಕ್ಕೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಅಬ್ಬರದ ಪ್ರಚಾರವನ್ನ ಹೆಚ್ಚಿಸಿದ್ದು, ಈ ಬಾರೀ ಮತ್ತೆ ಮರಳಿ ಕ್ಷೇತ್ರವನ್ನ ಗೆಲ್ಲಲ್ಲು ಹಲವು ಪ್ರಯತ್ನಗಳನ್ನ ನಡೆಸಿದ್ದಾರೆ. ಒಂದು ಕಡೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಹೈಕಮಾಂಡ್‌ ನಾಯಕರ ಮೂಲಕ ಮತಯಾಚನೆ ಮಾಡುತ್ತಿದ್ದು, ಇತ್ತ ದಳಪತಿಗಳು ಅಬ್ಬರದ ಪ್ರಚಾರವನ್ನ ನಡೆಸಿದ್ದಾರೆ. ಇನ್ನೂ ಹಲವು ಸಮೀಕ್ಷೆಗಳಲ್ಲಿ ಬಂದ ಜನರ […]

Advertisement

Wordpress Social Share Plugin powered by Ultimatelysocial