ಎಂ.ಎನ್.ಕೋಟೆ ಪಿ ಡಿ ಒ ಅಮಾನತು ಮಾಡಿ.ದಲಿತ ಮುಖಂಡರ ಆಗ್ರಹ.

ಗುಬ್ಬಿ ತಾಲ್ಲೂಕಿನ ಎಂ.ಎನ್. ಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಅಮಾನತ್ತು ಮಾಡುವಂತೆ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮತ್ತು ಮುಖಂಡರು ಆಗ್ರಹಿಸಿದ್ದಾರೆ.

ಎಂ.ಎನ್. ಕೋಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಹಾಗೂ ಇತರ ಸಹೋದ್ಯೋಗಿ ಗಳು ಮಾದಿಗ ಸಮಾಜದ ಆಹಾರ ಪದ್ಧತಿ ಮತ್ತು ಮಹಿಳಾ ಪಿ ಡಿ ಒ ಬಗ್ಗೆ ಅಗೌರವದಿಂದ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ಮಹಿಳೆಯ ಬಗ್ಗೆ ತೇಜೋವಧೆ ಮಾಡಿದ್ದಾರೆ ಜೋತೆಗೆ ತಾಲೂಕು ಮಟ್ಟದ ಅಧಿಕಾರಿಯ ಬಗ್ಗೆ ಮಾದಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿರುವ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಇದರಿಂದ ದಲಿತ ಸಮುದಾಯಕ್ಕೆ ಅವಮಾನ ಮಾಡಿರುವ ಪಂಚಾಯಿತಿ ಅಧಿಕಾರಿಗಳು ಕೂಡಲೇ ಅಮಾನತು ಮಾಡಬೇಕು ಇಲ್ಲಾವಾದರೆ ತಾಲೂಕು ಕಛೇರಿಯ ಹಾಗೂ ಜಿಲ್ಲಾ ಧಿಕಾರಿಗಳ ಕಛೇರಿ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿಯ ಪಧಾಧಿಕಾರಿಗಳು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಲಕ್ಕೇನಹಳ್ಳಿ ನರಸೀಯಪ್ಪ.ಚೇಳೂರು ಬಸವರಾಜು. ಕುಂದುರನಹಳ್ಳಿ ನಟರಾಜ್. ಮಾರಶೆಟ್ಟಿಹಳ್ಳಿ ಬಸವರಾಜು. ಇತರ ದಲಿತ ಮುಖಂಡರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನಂತ ಪೈ ಸಂಸ್ಮರಣೆ

Fri Feb 25 , 2022
ನಮ್ಮ ಪೀಳಿಗೆಯ ಹಿಂದಿನ ಕಾಲದಲ್ಲಿ ಕಥೆ ಅಂದ್ರೆ ರಾಮಾಯಣ, ಮಹಾಭಾರತ, ಭಾಗವತ ಅನ್ನೋವ್ರು. ಇಂದಿನ ಕಾಲದಲ್ಲಿ ಮಕ್ಕಳು ಸ್ಪೈಡರ್ ಮ್ಯಾನ್, ಹ್ಯಾರಿ ಪಾಟರ್, ಕ್ಯಾಪ್ಟನ್ ಅಮೆರಿಕ ಇತ್ಯಾದಿ ಹೇಳ್ತಾರೆ. ಕನ್ನಡದಲ್ಲಿ ಕಥೆಗಳು ಅನ್ನೋದನ್ನ ಮಕ್ಕಳು ಇಂದಿನ ದಿನಗಳಲ್ಲಿ ಕೇಳ್ತಾರ. ದೇವರಾಣೆ ನಂಗೊತ್ತಿಲ್ಲ. ನಮ್ಮ ಕಾಲದಲ್ಲಿ ಕಥೆಯ ದೊಡ್ಡದೊಂದು ಯುಗ ಇತ್ತು. ಅದು ‘ಅಮರ ಚಿತ್ರ ಕಥಾ ಯುಗ’. ಆ ಯುಗದ ಪ್ರವರ್ತಕರೇ ‘ಅನಂತ’ ಪೈ.ಇಂದು ಅವರ ಸಂಸ್ಮರಣಾ ದಿನ. ಅವರು […]

Advertisement

Wordpress Social Share Plugin powered by Ultimatelysocial