ಭಾರತದ ಕಡಲ ವಲಯ ಕಳೆದ ಎಂಟು ವರ್ಷಗಳಲ್ಲಿ ಉನ್ನತ ಶೃಂಗಕ್ಕೇರಿದ್ದು,

 

, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ಕಡಲ ದಿನದ ಸಂದರ್ಭದಲ್ಲಿ ಮಂಗಳವಾರ ಮಾತನಾಡಿರುವ ಅವರು, ಏಪ್ರಿಲ್ 5 ಅನ್ನು ದೇಶದಾದ್ಯಂತ ರಾಷ್ಟ್ರೀಯ ಕಡಲ ದಿನವನ್ನಾಗಿ ಆಚರಿಸಲಾಗುತ್ತದೆ ಮತ್ತು ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಕಡಲ ವ್ಯಾಪಾರದ ಪಾತ್ರ ಮಹತ್ವದ್ದಾಗಿದೆ.

ಜಾಗತಿಕ ವ್ಯವಹಿವಾಟಿನಲ್ಲಿ ಗಣನೀಯ ಕೊಡುಗೆ ನೀಡಿದೆ. ರಾಷ್ಟ್ರೀಯ ಸಮುದ್ರಯಾನ ದಿನದಂದು ನಾವು ನಮ್ಮ ವೈಭವದ ಕಡಲ ಇತಿಹಾಸವನ್ನು ಸ್ಮರಿಸಿಕೊಳ್ಳುವ ಜೊತೆಗೆ, ಭಾರತದ ಆರ್ಥಿಕ ಬೆಳವಣಿಗೆಗೆ ಕಡಲ ಕೊಡುಗೆಯನ್ನು ಶ್ಲಾಸಬೇಕು ಎಂದು ಮೋದಿ ಸರಣಿ ಟ್ವೀಟ್‍ಗಳಲ್ಲಿ ಹೇಳಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ, ಕೇಂದ್ರ ಸರ್ಕಾರ ಬಂದರು ಅಭಿವೃದ್ಧಿಯತ್ತ ಗಮನಹರಿಸಿದೆ. ಬಂದರುಗಳ ಸಾಮಥ್ರ್ಯಗಳನ್ನು ವಿಸ್ತರಿಸುವುದು, ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ.

ಭಾರತೀಯ ಉತ್ಪನ್ನಗಳು ಹೊಸ ಮಾರುಕಟ್ಟೆಗಳಿಗೆ ರಫ್ತುಗೊಳ್ಳಲು ಜಲಮಾರ್ಗಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆರ್ಥಿಕ ಪ್ರಗತಿಗಾಗಿ ಕಡಲ ವಲಯವನ್ನು ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ. ಆತ್ಮನಿರ್ಭರ ಭಾರತವನ್ನು ನಿರ್ಮಿಸುವಾಗ ನಮ್ಮ ಹೆಮ್ಮೆಯ ಸಮುದ್ರ ಪರಿಸರ ಮತ್ತು ವೈವಿಧ್ಯತೆಯನ್ನು ರಕ್ಷಿಸಲು ಆದ್ಯತೆ ನೀಡಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿವಾದ ಸೃಷ್ಟಿಸಿದ ಕೆಟಿಆರ್ ಟ್ವೀಟ್:

Tue Apr 5 , 2022
  ಬೆಂಗಳೂರು: ಗಂಟು-ಮೂಟೆಯೊಂದಿಗೆ ಹೈದರಾಬಾದ್ ಗೆ ಬನ್ನಿ ಎಂದು ತೆಲಗಾಂಣ ಮುಖ್ಯಮಂತ್ರಿ ಪುತ್ರ‌ ಕೆ.ಟಿ.ರಾಮರಾವ್ ಮಾಡಿದ ಟ್ವೀಟ್ ರಾಜ್ಯದಲ್ಲಿ ವಾದ- ವಿವಾದ ಸೃಷ್ಟಿಸುತ್ತಿದೆ. ಕೆಟಿಆರ್ ಟ್ವೀಟ್ ಹಾಸ್ಯಾಸ್ಪದ. ಇಡಿ ಜಗತ್ತಿನ ಜನರಿಗೆ ಬೆಂಗಳೂರಿನ ಬಗ್ಗೆ ಗೊತ್ತಿದೆ. ಐಟಿಬಿಟಿ, ನವೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬೆಂಗಳೂರು ಮುಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಸರಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಡಬಲ್ ಎಂಜಿನ್ ಸರಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಇದೊಂದು ಕಡು ಭ್ರಷ್ಟ ಸರಕಾರ ಎಂದು […]

Advertisement

Wordpress Social Share Plugin powered by Ultimatelysocial