ಜಪಾನ್​ನಲ್ಲಿ ಸ್ವಾಮಿ ವಿವೇಕಾನಂದರನ್ನು ನೆನೆದ ನರೇಂದ್ರ ಮೋದಿ!

ಟೋಕಿಯೋ(ಜಪಾನ್): ಜಪಾನ್​ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೋದಲ್ಲಿ ಸೋಮವಾರ ಭಾರತೀಯರ ಜತೆ ಸಂವಾದ ನಡೆಸಿದರು.

ಜಪಾನ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನನ್ನ ಕೃತಜ್ಞತೆಗಳು ಎನ್ನುತ್ತಾ ಭಾಷಣ ಆರಂಭಿಸಿದ ನರೇಂದ್ರ ಮೋದಿ, ಜಪಾನ್​ ಸಂಸ್ಕೃತಿಯನ್ನು ಸ್ವಾಮಿ ವಿವೇಕಾನಂದರು ಹೊಗಳುತ್ತಿದ್ದರು.

ಜಪಾನ್​ನಿಂದ ವಿವೇಕಾನಂದರು ಸ್ಫೂರ್ತಿ ಪಡೆದಿದ್ದರು ಎಂದು ಸ್ಮರಿಸಿದರು.

ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳು ರಚನೆ ಮಾಡಿಕೊಂಡಿರುವ ಬಲಿಷ್ಠ ಕ್ವಾಟ್ ಕೂಡದ ಮಹತ್ವದ ಸಭೆ ಸೋಮವಾರ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿಯವರಿಗೆ ಆಹ್ವಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮೋದಿಯವರು ಭೇಟಿ ಕೊಟ್ಟಿದ್ದು, ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಕಳೆದ 8 ವರ್ಷಗಳಲ್ಲಿ ಜಪಾನ್‌ಗೆ 5ನೇ ಭೇಟಿ ಇದಾಗಿದೆ.

ನಾವೀನ್ಯತೆಯ ಹೂಡಿಕೆಗಳು, ತಂತ್ರಜ್ಞಾನದಿಂದ ಜವಳಿ, ಸುಧಾರಣೆಗಳು ಸ್ಟಾರ್ಟ್‌ಅಪ್‌ಗಳು ಸೇರಿ ವಿವಿಧ ವಿಷಯಗಳ ಮೇಲೆ ಈ ಸಭೆ ಕೇಂದ್ರೀಕೃತವಾಗಿದೆ. ಭಾರತದ ಕಡೆಗೆ ಹೆಚ್ಚಿನ ಉತ್ಸಾಹವಿದೆ ಮತ್ತು ಭಾರತದ ಯುವಕರ ಉದ್ಯಮಶೀಲತೆಯ ಕೌಶಲದತ್ತ ಆಕರ್ಷಣೆ ಹೆಚ್ಚುತ್ತಿದೆ ಎಂದು ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದು ಅಥವಾ ಎರಡನೇ ತರಗತಿಯಲ್ಲಿ ನೈತಿಕ ಶಿಕ್ಷಣ ಪಠ್ಯ ಅಳವಡಿಕೆಗೆ ಕ್ರಮ - ಸಚಿವ ಬಿ.ಸಿ. ನಾಗೇಶ್!

Mon May 23 , 2022
ಬೆಂಗಳೂರು : ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಅಂಶಗಳನ್ನು ಅಳವಡಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ, ಎಷ್ಟೇ ಸಮಸ್ಯೆ ಎದುರಾರೂ ರಾಷ್ಟ್ರೀಯವಾದಿ ಶಿಕ್ಷಣ ನೀಡುವ ಸರ್ಕಾರದ ನಿಲುವಿನಿಂದ ವಿಮುಖವಾಗುವುದಿಲ್ಲ. ಪ್ರಸಕ್ತ ವರ್ಷ ಒಂದು ಪಠ್ಯವಾಗಿ ನೈತಿಕ ಶಿಕ್ಷಣವನ್ನು ಜಾರಿಗೊಳಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್  ಹೇಳಿದ್ದಾರೆ. ಚಾಮರಾಜಪೇಟೆಯ ಉದಯ ಭಾನು ಪಬ್ಲಿಕ್ ಶಾಲೆಯ ಆಟದ ಮೈದಾನಲ್ಲಿ ಆಚಾರ್ಯ ನರರತ್ನ ಸುರಿಜಿ ಮಹಾರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ […]

Advertisement

Wordpress Social Share Plugin powered by Ultimatelysocial