ಜನ ತಲೆ ತಗ್ಗಿಸುವ ಯಾವ ಕೆಲಸವನ್ನು ನಾನು ಮಾಡಿಲ್ಲ :

ರಾಜ್‍ಕೋಟ್, ಮೇ 28- ಕಳೆದ ಎಂಟು ವರ್ಷಗಳಲ್ಲಿ ದೇಶದ ಒಬ್ಬನೇ ಒಬ್ಬ ನಾಗರೀಕ ನಾಚಿಕೆಯಿಂದ ತಲೆ ತಗ್ಗಿಸುವ ಯಾವುದೇ ತಪ್ಪನ್ನು ತಾವು ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್‍ನ ರಾಜ್‍ಕೋಟ್ ಜಿಲ್ಲೆಯ ಅತ್ಕೋಟ್ ಪಟ್ಟಣದಲ್ಲಿ 200 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದ ನಂತರ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ದೇಶ ಸೇವೆಗಾಗಿ ನಾನು ಯಾವುದೇ ಪ್ರತ್ಯೇಕ ಪ್ರಯತ್ನ ಮಾಡಿಲ್ಲ.

ಗುಜರಾತ್‍ನ ಜನ ಸೇರಿದಂತೆ, ಭಾರತದ ಒಬ್ಬ ವ್ಯಕ್ತಿಯೂ ನಾಚಿಕೆಯಿಂದ ತಲೆ ತಗ್ಗಿಸುವಂತಹ ಯಾವುದೇ ಕೆಲಸವನ್ನು ನಾನು ಅನುಮತಿಸಿಲ್ಲ ಅಥವಾ ವೈಯಕ್ತಿಕವಾಗಿ ಮಾಡಿಲ್ಲ ಎಂದು ಅವರು ಹೇಳಿದರು.

ಕಳೆದ ಎಂಟು ವರ್ಷಗಳಲ್ಲಿ, ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಕನಸು ಕಂಡಂತಹ ಭಾರತವನ್ನು ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಈ ಅವಧಿಯಲ್ಲಿ ಸರ್ಕಾರ ಬಡವರ ಉನ್ನತಿಗಾಗಿ ಶ್ರಮಿಸಿದೆ ಎಂದು ಪ್ರಧಾನಿ ಹೇಳಿದರು.

ನಾವು ಬಡವರ ಪರವಾದ ವಿವಿಧ ಯೋಜನೆಗಳ ಮೂಲಕ ದೇಶದ ಬಡವರಿಗೆ ಸೇವೆ ಸಲ್ಲಿಸಿದ್ದೇವೆ ಮತ್ತು ಅವರ ಜೀವನವನ್ನು ಉತ್ತಮಗೊಳಿಸಲು ಪ್ರಯತ್ನಿಸಿದ್ದೇವೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬಡವರಿಗೆ ಆಹಾರ ಧಾನ್ಯ ಉಚಿತವಾಗಿ ಹಂಚಲಾಗಿದೆ, ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ಹಾಕಲಾಗಿದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಪ್ಯಾನ್‌ ಇಂಡಿಯಾʼ ಪರಿಕಲ್ಪನೆ ಹೊಸತಲ್ಲ, ಅದು ಹಿಂದೆಯೇ ಇತ್ತು:

Sat May 28 , 2022
  ಮುಂಬೈ: ಪುಷ್ಪ – ದಿ ರೈಸ್, RRR ಮತ್ತು KGF 2 ನಂತಹ ದಕ್ಷಿಣ ಭಾರತೀಯ ಚಲನಚಿತ್ರಗಳು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯನ್ನು ಸೃಷ್ಟಿಸುತ್ತಿದ್ದಂತೆ, ಪ್ಯಾನ್‌ ಇಂಡಿಯಾ ಚಿತ್ರಗಳು, ಉತ್ತರ ಭಾರತ ಚಿತ್ರ vs ದಕ್ಷಿಣ ಭಾರತದ ಚಿತ್ರಗಳು ಎಂಬಂತ ವಿಷಯಗಳು ಚರ್ಚೆಯ ಮುನ್ನೆಲೆಗೆ ಬರತೊಡಗಿದೆ. ಸದ್ಯ, ತನ್ನ ಬಹುನಿರೀಕ್ಷಿತ ʼವಿಕ್ರಮ್‌ʼ ಚಿತ್ರದ ಬಿಡುಗಡೆ ತಯಾರಿಯಲ್ಲಿರುವ ಕಮಲ್‌ ಹಾಸನ್‌ ಇವೆರಡೂ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿಕ್ರಮ್ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ […]

Advertisement

Wordpress Social Share Plugin powered by Ultimatelysocial