ಮೋದಿ ಅವರನ್ನು ನಾನು ಸಂದರ್ಶಿಸಿದ್ದೇನೆ ಎನ್ನುವುದೇ ನನಗಿರುವ ಹೆಮ್ಮೆ: ನಟ ಅಕ್ಷಯ್ ಕುಮಾರ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂದರ್ಶನ ಮಾಡಿ ಹೊಗಳಿಕೆ ಮತ್ತು ಟೀಕೆಗೂ ಗುರಿಯಾದವರು ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್. ಪ್ರಧಾನಿ ಜೊತೆಗಿನ ಒಂದೊಂದು ಮಾತು ಕೂಡ ಭಾರೀ ಚರ್ಚೆಗೂ ಕಾರಣವಾಗಿದ್ದವು. ಈಗ ಆ ಐತಿಹಾಸಿಕ ಸಂದರ್ಶನವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ ಅಕ್ಷಯ್ ಕುಮಾರ್.

ಪ್ರಧಾನಿಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ.

ನರೇಂದ್ರ ಮೋದಿ ಅವರನ್ನು ನಾನು ಸಂದರ್ಶಿಸಿದ್ದೇನೆ ಎನ್ನುವುದೇ ನನಗಿರುವ ಹೆಮ್ಮೆ. ಕೇಳಲಾದ ಪ್ರಶ್ನೆಗಳು ಹೇಗಿದ್ದವು ಎನ್ನುವುದಕ್ಕಿಂತ, ಅವರ ಎದುರು ನಾನು ಕುಳಿತಿದ್ದೇನೆ ಎನ್ನುವುದೇ ನನಗೆ ದೊಡ್ಡ ಹೆಮ್ಮೆ ಅನಿಸಿತ್ತು. ಅವರ ಸರಳತೆ, ವ್ಯಕ್ತಿತ್ವನ್ನು ರೂಪಿಸಿಕೊಂಡ ಬಗೆಯು ನನಗೆ ತುಂಬಾ ಹಿಡಿಸಿತು ಎಂದು ಹೇಳಿದ್ದಾರೆ ಅಕ್ಷಯ್ ಕುಮಾರ್.

ಪ್ರಧಾನಿ ಮೋದಿ ಅವರ ಗುಣಗಳ ಬಗ್ಗೆಯೂ ಮಾತನಾಡಿರುವ ಅವರು, ಮೋದಿ ಅವರಲ್ಲಿ ನಾನು ಕಂಡ ಉತ್ತಮ ಗುಣವೆಂದರೆ, ಯಾರು ಹೇಗಿರುತ್ತಾರೋ ಹಾಗೆಯೇ ತಮ್ಮನ್ನು ತಾವು ರೂಪಿಸಿಕೊಳ್ಳುತ್ತಾರೆ. ಮಕ್ಕಳೊಂದಿಗೆ ಮಕ್ಕಳಾಗಿಯೇ ಅವರು ವರ್ತಿಸುತ್ತಾರೆ. ವಯಸ್ಸಿನ ಮತ್ತು ಅಧಿಕಾರದ ಅನುಗುಣವಾಗಿಯೇ ಅವರು ನಡೆದುಕೊಳ್ಳುತ್ತಾರೆ ಎಂದು ಹೊಗಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರವಿಚಂದ್ರನ್ ಮೆಚ್ಚಿನ ನಟ ಯಶ್:

Thu Jun 2 , 2022
ನಟ ರವಿಚಂದ್ರನ್ ಮಾತುಗಳು ಸಿಡಿಗುಂಡುಗಳಿದ್ದಂತೆ. ಯಾರಿಗೂ ಹೆದರಿದವರೂ ಅಲ್ಲ, ಹೆದರುವವರೂ ಅಲ್ಲ. ಯಾರೇ ಎದುರಿಗಿರಲಿ ತಮಗೆ ಸರಿ ಅನಿಸಿದ್ದನ್ನು ಹೇಳಿಯೇ ತೀರುವವರವರು. ಸಿನಿಮಾ ಅಪರಿಮಿತ ಪ್ರೇಮವುಳ್ಳ ರವಿಚಂದ್ರನ್‌ಗೆ ಚಿತ್ರರಂಗ ಕಲಿಸಿರುವ ಪಾಠಗಳು ಅನೇಕ. ಕಲಿತ ಪಾಠಗಳಿಂದಾಗಿ ದೊಡ್ಡ ಅನುಭವದ ಅಕ್ಷಯ ಪಾತ್ರೆಯೇ ಆಗಿದ್ದಾರೆ ಅವರು. ಯಾವುದೇ ಸಂದರ್ಶನಗಳಿಗೆ ಹೋದರು, ಸಿನಿಮಾ ಕಾರ್ಯಕ್ರಮಗಳಿಗೆ ಹೋದರು ಅಲ್ಲಿ ಹೈಲೇಟ್ ಆಗುವುದು ರವಿಚಂದ್ರನ್. ಹಲವು ದಶಕಗಳಿಂದ ಸಿನಿಮಾ ರಂಗವನ್ನು ನೋಡುತ್ತಾ ಬಂದಿರುವ, ಸಿನಿಮಾಗಳನ್ನು ಮಾಡುತ್ತಾ […]

Advertisement

Wordpress Social Share Plugin powered by Ultimatelysocial