ಕುತೂಹಲ ಭರಿತ ‘ಮೋಕ್ಷ’ ಚಿತ್ರ ನಾಳೆ ಥಿಯೇಟರ್ ಅಂಗಳಕ್ಕೆ

ಸ್ಯಾಂಡಲ್ ವುಡ್ ಅಂಗಳದಲ್ಲಿ ಟೀಸರ್, ಟ್ರೈಲರ್ ಮೂಲಕ ಕೂತೂಹಲ ಹುಟ್ಟಿಸಿರುವ ಮೋಕ್ಷ ಸಿನೆಮಾ ನಾಳೆ ತೆರೆಯ ಮೇಲೆ ಮೂಡಿ ಬರಲಿದೆ. ಆಯಡ್ ಫಿಲಂಗಳನ್ನು ಮಾಡಿ ಅನುಭವ ಇರುವ ಇಂಜಿನಿಯರ್​​ ಆಗಿ ಖಾಸಗಿ ಕಂಪನಿಯಲ್ಲಿ ವೃತ್ತಿ ನಿಭಾಯಿಸುತ್ತಿದ್ದ ಅಂಕೋಲಾ ಮೂಲದ ಸಮರ್ಥ ನಾಯ್ಕ, ತಮ್ಮ ಬ್ಯಾನರ್ ಅಡಿಯಲ್ಲಿ ಪ್ರೇಕ್ಷಕರೆದುರು ತರುತ್ತಿರುವ ಚೊಚ್ಚಲ ಸಿನೆಮಾ ಈ ‘ಮೋಕ್ಷ’.

ಮೋಕ್ಷ ಸಿನಿಮಾಕ್ಕಾಗಿ ತಮ್ಮ ಕೆಲಸ ಕಾರ್ಯವನ್ನೂ ಬದಿಗೊತ್ತಿರುವ ಅವರು, ಕಳೆದ ಮೂರ್ನಾಲ್ಕು ವರ್ಷಗಳಿಂದ ದುಡಿಯುತ್ತಿದ್ದಾರೆ. ತಮ್ಮ ಎಸ್ ​​ಜಿ ಎನ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಚೊಚ್ಚಲ ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ.

ಸಮರ್ಥ ನಾಯ್ಕ ಅವರ ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬಂದಿರುವ ಮೋಕ್ಷ ಚಿತ್ರದಲ್ಲಿ ಮೋಹನ್ ಧನರಾಜ್ ಹಾಗೂ ಆರಾಧ್ಯಾ ಲಕ್ಷ್ಮಣ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ತಾರಕ್ ಪೊನ್ನಪ್ಪ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಭೂಮಿ, ಪ್ರಶಾಂತ್‌ ಚಿತ್ರದ ತಾರಾಬಳಗದಲ್ಲಿದ್ದಾರೆ. ಮಾಸ್ಕ್‌ಮ್ಯಾನ್ ಈ ಸಿನಿಮಾದ ಮುಖ್ಯ ಆಕರ್ಷಣೆಯಾಗಿದ್ದು, ಆ ಪಾತ್ರವೇ ನಾಯಕ, ನಾಯಕಿಗೆ ತೊಂದರೆ ಕೊಡುತ್ತಾ ಹೋಗುತ್ತದೆ. ಈ ಪಾತ್ರ ಯಾರು, ಯಾಕೆ ಆತ ಎಲ್ಲರಿಗೂ ತೊಂದರೆ ಕೊಡುತ್ತಿರುತ್ತಾನೆ ಎಂಬುದಕ್ಕೆ ನಾಳೆ ಉತ್ತರ ಸಿಗಲಿದೆ.

ಉತ್ತರಕನ್ನಡ, ಬೆಂಗಳೂರು, ಹಾಸನ ಸೇರಿದಂತೆ ವಿವಿಧೆಡೆ ಚಿತ್ರೀಕರಣ ನಡೆಸಿ ಇದೀಗ ಹಿರಿ ತೆರೆಗೆ ಲಗ್ಗೆ ಇಡಲು ದಿನಾಂಕವನ್ನೂ ನಿಗಧಿಗೊಳಿಸಿ, ನಾಳೆಯೇ ಸಿನಿ ಪ್ರಿಯರೆದುರು ಬರಲು ಸಜ್ಜಾಗಿದೆ. ಜಯಂತ್ ಕಾಯ್ಕಿಣಿ, ಕುಮಾರ ದತ್ತ್ ಸಾಹಿತ್ಯ, ಕಿಶನ್ ಮೋಹನ್, ಸಚಿನ್ ಬಾಲು ಸಂಗೀತದಲ್ಲಿ ಮೂಡಿಬಂದಿರುವ ಎರಡು ಹಾಡುಗಳು ಸಿನಿಮಾದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲೂ ಸಿನಿ ರಸಿಕರಿಗೆ ರೋಮ್ಯಾಂಟಿಕ್ ಅನುಭವ ನೀಡಲು ತಯಾರಿದ್ದು, ನಾಳೆ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಅಪ್ಪುಗೆಗಾಗಿ ಕಾದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಅಸಲಿ ಆಟ ಈಗ ಶುರು" ಎಂದ ವಿಕ್ರಾಂತ್ ರೋಣ; ಇಂಗ್ಲೀಷ್ ವರ್ಷನ್ ಡಬ್ಬಿಂಗ್ ಮುಗಿಸಿದ ಕಿಚ್ಚ

Thu Mar 3 , 2022
ದೇಶವೇ ಎದುರು ನೀಡುತ್ತಿರುವ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರವು ಇಂಗ್ಲೀಷ್ ಭಾಷೆಯಲ್ಲೂ ತೆರೆಕಾಣುತ್ತಿದೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದ ಒಂದೊಂದೇ ಮಾಹಿತಿ ಹೊರಬರುತ್ತಿದೆ.ಇದೀಗ ನಿರ್ದೇಶಕ ಅನೂಪ್ ಭಂಡಾರಿ ಹೊಸ ವಿಚಾರವೊಂದನ್ನು ತಿಳಿಸಿದ್ದಾರೆ.ಅದು ವಿಕ್ರಾಂತ್ ರೋಣ ಇಂಗ್ಲೀಷ್ ವರ್ಷನ್ ಡಬ್ಬಿಂಗ್ ಬಗ್ಗೆ. ಈ ಬಗ್ಗೆ ಟ್ವೀಟ್ ಮಾಡಿರುವ ಅನೂಪ್, “ಕಿಚ್ಚ ಸುದೀಪ್ ಸರ್ ಇಂಗ್ಲಿಷ್ ಆವೃತ್ತಿಗೆ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ. ಇಂಗ್ಲೀಷ್‌ನಲ್ಲಿ ಪೂರ್ಣ ಪ್ರಮಾಣದ ಕಮರ್ಷಿಯಲ್ ಚಲನಚಿತ್ರಕ್ಕೆ […]

Advertisement

Wordpress Social Share Plugin powered by Ultimatelysocial