ಇಲ್ಲೊಬ್ಬ ಭೂಪ ತನಗಿದ್ದ ಕಾಯಿಲೆ ವಿಷಯ ಮುಚ್ಚಿಟ್ಟು ನಕಲಿ ದಾಖಲೆ ಸಲ್ಲಿಸಿ ವಿಮಾ ಪಾಲಿಸಿ ಪಡೆದಿದ್ದು!

 

ಬೆಂಗಳೂರು: ಇಲ್ಲೊಬ್ಬ ಭೂಪ ತನಗಿದ್ದ ಕಾಯಿಲೆ ವಿಷಯ ಮುಚ್ಚಿಟ್ಟು ನಕಲಿ ದಾಖಲೆ ಸಲ್ಲಿಸಿ ವಿಮಾ ಪಾಲಿಸಿ ಪಡೆದಿದ್ದು ಮಾತ್ರವಲ್ಲ, ಆತ ಬತ್ತ ಬಳಿಕ ಸುಳ್ಳು ದಾಖಲೆ ಕೊಟ್ಟ ಪತ್ನಿ ಬರೋಬ್ಬರಿ 3 ಕೋಟಿ ರೂಪಾಯಿ ವಿಮಾ ಹಣ ಪಡೆದಿರುವ ಪ್ರಕರಣದ ತಡವಾಗಿ ಬೆಳಕಿಗೆ ಬಂದಿದೆ.ಖಾಸಗಿ ವಿಮಾ ಕಂಪನಿ ಕಾನೂನು ವಿಭಾಗ ವ್ಯವಸ್ಥಾಪಕ ಪಿ.ಎಸ್​. ಗಣಪತಿ ಎಂಬುವರು ಕೋರಮಂಗಲ ಠಾಣೆಗೆ ದೂರು ನೀಡಿದ್ದು, ಆರೋಪಿ ಸುಪ್ರಿಯಾ ಲಕಕುಲಾ ಎಂಬಾಕೆ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ವಿಟ್ಟಸಂದ್ರದ ಅಪಾರ್ಟ್​ಮೆಂಟ್​ನಲ್ಲಿ ನೆಲೆಸಿದ್ದ ಕೃಷ್ಣಪ್ರಸಾದ್​ ಗಾರಲಟ್ಟಿ(31) ಎಂಬಾತ ಆಂಧ್ರ ಪ್ರದೇಶದ ಪ್ರತಿಷ್ಠಿತ ಸಾಪ್ಟ್​​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ವಿಮೆ ಕಂಪನಿಗೆ ತಿಳಿಸಿದ್ದ. ಕಳೆದ ವರ್ಷ ಮಾ.3ರಂದು ಆನ್​ಲೈನ್​ನಲ್ಲಿ ‘ಮಹಾ ರಕ್ಷ ಸುಪ್ರೀಂ’ ಪಾಲಿಸಿಗೆ ಅರ್ಜಿ ಸಲ್ಲಿಸಿ ಫೋಟೋ, ಪಾನ್​, ಆಧಾರ್​, 3 ತಿಂಗಳ ವೇತನ ಪ್ರಮಾಣ ಪತ್ರವನ್ನೂ ಸಲ್ಲಿಸಿದ್ದ. 3ನೇ ದಿನ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿದ್ದ. ದಾಖಲೆ ಪರಿಶೀಲನೆ ನಡೆಸಿದ ವಿಮಾ ಕಂಪನಿ, 2021ರ ಮಾ. 5ರಂದು ಕೃಷ್ಣಪ್ರಸಾದ್​ಗೆ ಪಾಲಿಸಿ ನೀಡಿತ್ತು. ಅದರಂತೆ ವಾರ್ಷಿಕ ಪ್ರೀಮಿಯಂ 51,777 ರೂ., ಪಾಲಿಸಿ ಮೊತ್ತ 3 ಕೋಟಿ ರೂ., ಅವಧಿ 28 ವರ್ಷ ಇತ್ತು. 12 ವರ್ಷ ಪ್ರೀಮಿಯಂ ಪಾವತಿ ಮಾಡಬೇಕಿತ್ತು. ನಾಮಿನಿಯಾಗಿ ತನ್ನ ಪತ್ನಿ ಸುಪ್ರಿಯಾಳ ಹೆಸರು ನಮೂದಿಸಿದ್ದ. ಪಾಲಿಸಿ ಪಡೆದು 2 ತಿಂಗಳು 9 ದಿನಕ್ಕೆ ಅಂದರೆ 2021ರ ಮೇ 14ಕ್ಕೆ ಕೃಷ್ಣಪ್ರಸಾದ್​ ಪತ್ನಿ ಸುಪ್ರಿಯಾ ವಿಮಾ ಕಂಪನಿ ಕಚೇರಿಗೆ ಬಂದು ತನ್ನ ಪತಿ ಹೃದಯಘಾತದಿಂದ ಮೃತಪಟ್ಟಿರುವುದಾಗಿ ದಾಖಲೆ ಸಲ್ಲಿಸಿದ್ದಳು. ಸುಪ್ರಿಯಾ ಅವರಿಂದ ಎಲ್ಲ ದಾಖಲೆ ಪಡೆದು ಅವರ ಬ್ಯಾಂಕ್​ ಖಾತೆಗೆ 3 ಕೋಟಿ ರೂ. ವರ್ಗಾವಣೆ ಮಾಡಿತ್ತು.ಆದರೆ, ಕೃಷ್ಣಪ್ರಸಾದ್​ ಸತ್ತದ್ದು ಕ್ಯಾನ್ಸರ್​ನಿಂದ. 2020ರ ಡಿಸೆಂಬರ್​ನಲ್ಲಿ ಕೃಷ್ಣಪ್ರಸಾದ್​ ಅವರು ಬೆಂಗಳೂರಿನ ರಿಂಗ್​ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕ್ಯಾನ್ಸರ್​ ಇರುವ ವಿಚಾರ ಮುಚ್ಚಿಟ್ಟು ಪಾಲಿಸಿ ಪಡೆದಿದ್ದು, ಮಾತ್ರವಲ್ಲ, ಕ್ಯಾನ್ಸರ್​ನಿಂದ ಮೃತಪಟ್ಟರೂ ಹೃದಯಾಘಾತ ಎಂದು ಸುಳ್ಳು ಹೇಳಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ವಿಮಾ ಕಂಪನಿ ಅಧಿಕಾರಿ ಆರೋಪಿಸಿದ್ದಾರೆ.ವೈದ್ಯಕೀಯ ಮಾಹಿತಿಗಳು ಬೋಗಸ್​ಪತಿಯ ವಿಮಾ ಹಣ ಪಡೆಯಲು ಪತ್ನಿ ಸುಪ್ರಿಯಾ ಸಲ್ಲಿಸಿದ್ದ ಕೃಷ್ಣಪ್ರಸಾದ್​ ಅವರ ಕಂಪನಿ ರಜೆ ಚೀಟಿ, ವೇತನ ಪ್ರಮಾಣ ಪತ್ರ, ವೈದ್ಯಕೀಯ ಸೇವೆಗಳ ಮಾಹಿತಿಗಳೂ ಬೋಗಸ್​ ಆಗಿವೆ. ಈ ಕುರಿತು ಸಾಫ್ಟ್​ವೇರ್​​ ಕಂಪನಿಯಲ್ಲಿ ವಿಚಾರಿಸಿದಾಗ ನಕಲಿ ದಾಖಲೆ ಎಂಬುದು ಗೊತ್ತಾಗಿದೆ. ಇದಲ್ಲದೆ, ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದಾಗ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದಿರುವ ದಾಖಲೆ ಲಭ್ಯವಾಗಿವೆ ಎಂದು ದೂರಿನಲ್ಲಿ ವಿಮಾ ಕಂಪನಿ ಅಧಿಕಾರಿಗಳು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏನ್‌ ರಚಿತಾ ರಾಮ್‌ ತೆಲುಗಿನ ಮೊದಲ ಸಿನಿಮಾ ಫ್ಲಾಪ್‌ ಅಂತೆ ಹೌದ? Rachitha Ram | Sathish Ninasam | Speed News |

Wed Feb 9 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial