34 ಸಿಸಿ ಟಿವಿ ಕ್ಯಾಮರಾ ಹಾಳಾಗಿರುವ ಹಿಂದಿನ ಕಾರಣ ಹುಡುಕಿಕೊಂಡು ಹೋದ ಅಧಿಕಾರಿಗಳಿಗೆ ಶಾಕ್..!!

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ. ಫಿಲಿಭಿತ್​ನ ಚುನಾವಣಾ ನಿಯಂತ್ರಣ ಕೊಠಡಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಣ್ಗಾವಲಿಗೆಂದು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ ಬರೋಬ್ಬರಿ 34 ಸಿಸಿ ಟಿವಿ ಕ್ಯಾಮರಾಗಳನ್ನು ಧ್ವಂಸಗೊಳಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಬಹುಶಃ ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಕಾರ್ಯಕರ್ತರ ಕೆಲಸ ಎಂದು ಚುನಾವಣಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಸಾಕಷ್ಟು ತನಿಖೆಯ ಬಳಿಕ ಇದು ಮಾನವ ಕೃತ್ಯವಲ್ಲ ಎಂದು ತಿಳಿದುಬಂದಿದೆ. ಅಸಲಿಗೆ ಇದು ಕೋತಿಗಳ ಕೆಲಸ ಎಂದು ತಿಳಿಯುತ್ತಿದ್ದಂತೆಯೇ ಚುನಾವಣಾಧಿಕಾರಿಗಳು ಶಾಕ್​ ಆಗಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿ ಆರ್​ ಎಸ್​ ಗೌತಮ್​, ನಾವು 52 ಸಾವಿರ ಹೊಸ ಕ್ಯಾಮರಾಗಳನ್ನು ಅಳವಡಿಸಿದ್ದೆವು. ಪ್ರತಿಯೊಂದು ಕ್ಯಾಮರಾದ ಬೆಲೆಯು 2500 ರೂಪಾಯಿ ಆಗಿತ್ತು. ಅಲ್ಲದೇ ಸ್ಟ್ರಾಂಗ್​ ರೂಮ್​​ನಲ್ಲಿ ಎವಿಎಂ ಹಾಗೂ ವಿವಿ ಪ್ಯಾಟ್​ ಮಷಿನ್​ಗಳನ್ನು ಇರಿಸಿದ್ದೆವು. ಕನಿಷ್ಟ 34 ಕ್ಯಾಮರಾಗಳು ಹಾನಿಗೊಳಗಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಅರಣ್ಯ ಇಲಾಖೆಯು ಈಗಾಗಲೇ 9 ಮಂದಿ ಸದಸ್ಯರಿರುವ ಮೂರು ತಂಡಗಳನ್ನು ರಚಿಸಿದ್ದು ಈಗಾಗಲೇ ಏಳು ಕೋತಿಗಳನ್ನು ಸೆರೆಹಿಡಿಯಲಾಗಿದೆ. ಸೆರೆ ಹಿಡಿದ ಎಲ್ಲಾ ಕೋತಿಗಳನ್ನು ಕಾಡಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಮಾಹಿತಿ ನೀಡಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಯಮಹಾ ಟೆನೆರೆ 700 'ವರ್ಲ್ಡ್ ರೈಡ್'!!

Fri Feb 18 , 2022
ಯಮಹಾ ಟೆನೆರೆ 700 ವರ್ಲ್ಡ್ ರೈಡ್ ಇತ್ತೀಚೆಗೆ ಬಹಿರಂಗವಾಗಿದೆ. ಇದು ಟೆನೆರೆ 700 ನ ಹೊಸ ಮತ್ತು ಹೆಚ್ಚು ಹಾರ್ಡ್‌ಕೋರ್ ಆವೃತ್ತಿಯಾಗಿದ್ದು, ಇದು 2021 ರಲ್ಲಿ EICMA ನಲ್ಲಿ ಮೊದಲ ಬಾರಿಗೆ ಒಂದು ಪರಿಕಲ್ಪನೆಯಾಗಿ ಬಹಿರಂಗವಾಯಿತು. ಹೊಸ ‘ವರ್ಲ್ಡ್ ರೈಡ್’ ಮಾದರಿಯು ಸ್ಟ್ಯಾಂಡರ್ಡ್ ಮಾಡೆಲ್‌ಗಿಂತಲೂ ಉತ್ತಮ ಆಫ್-ರೋಡರ್ ಎಂದು ಭರವಸೆ ನೀಡುತ್ತದೆ. ಅದು ಪಡೆಯುತ್ತದೆ. ಆರಂಭಿಕರಿಗಾಗಿ, ಇದು ಡ್ಯುಯಲ್ ಸೈಡ್-ಮೌಂಟೆಡ್ ಇಂಧನ ಟ್ಯಾಂಕ್‌ಗಳನ್ನು ಪಡೆಯುತ್ತದೆ, ಅದು 23 ಲೀಟರ್‌ಗಳ ಸಂಯೋಜಿತ […]

Advertisement

Wordpress Social Share Plugin powered by Ultimatelysocial