ಕೈವ ಶೂಟಿಂಗ್ ಕಂಪ್ಲೀಟ್.

* ಕುಂಬಳಕಾಯಿ ಹೊಡೆದ ಕೈವ ಟೀಂ
* ಶೋಕ್ದಾರ್ ಧನ್ವೀರ್ ಸಿನಿಮಾ‌ ತೆರೆಗೆ ಬರಲು ರೆಡಿ
*ಜಯತೀರ್ಥ ನಿರ್ದೇಶನದ ಕೈವ

ಸ್ಯಾಂಡಲ್ ವುಡ್ ನ ಶೋಕ್ದಾರ್ ಧನ್ವೀರ್ ಅಭಿನಯದ ಕೈವ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ…. ವಿಭಿನ್ನ ಟೈಟಲ್ ಹಾಗೂ ಫಸ್ಟ್ ಲುಕ್ ನಿಂದಲೇ ಸಾಕಷ್ಟು ಸುದ್ದಿ ಮಾಡಿದೆ ಕೈವ ಚಿತ್ರ….ಈಗಾಗಲೇ ಕಮರ್ಷಿಯಲ್ ಆಕ್ಷನ್ ಲವ್ ಸ್ಟೋರಿ ಸಿನಿಮಾಗಳ ಮೂಲಕವೇ ಪ್ರಖ್ಯಾತಿಗಳಿಸಿರುವಂತಹ ಧನ್ವೀರ್ ಕೈವ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ವಿಭಿನ್ನ ರೀತಿಯಲ್ಲಿ ಎಂಟ್ರಿ ಕೊಡ್ತಿದ್ದಾರೆ…

ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿರುವಂತಹ ಹೆಸರಾಂತ ನಿರ್ದೇಶಕ ಜಯತೀರ್ಥ ಕೈವ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ….
ಟೈಟಲ್ ಮತ್ತು ವಿಭಿನ್ನ ಫಸ್ಟ್ ಲುಕ್ ನಿಂದಲೇ ಕೈವ ಸಿನಿಮಾ ಸಿನಿಮ ಪ್ರೇಮಿಗಳ ಗಮನ ಸೆಳೆದಿತ್ತು…

ಮೊದಲ ಬಾರಿಗೆ ಧನ್ವೀರ್ ಜೋಡಿಯಾಗಿ ಮೇಘಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ…ಜಯತೀರ್ಥ ಮತ್ತು ಧನ್ವೀರ್ ಕಾಂಬಿನೇಷನ್‌ ನ ಈ ಸಿನಿಮಾವನ್ನು ಅಭುವನಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ನಿರ್ಮಿಸ್ತಿದ್ದಾರೆ. ‘ಕೈವ’ಚಿತ್ರಕ್ಕೆ 1983 ಅನ್ನೋ ಟ್ಯಾಗ್ ಲೈನ್‌ ಕೂಡ ಇದೆ. ಹಾಗಾದರೆ, ಈ ಸಿನಿಮಾದಲ್ಲಿ ರೆಟ್ರೋ ಕಾಲದ ಕಥೆ ಇರಲಿದೆ ಎನ್ನುತ್ತಿದ್ದಾರೆ ಫ್ಯಾ‌ನ್ಸ್ …

ಕೈವ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ತಿಗಳರ ಪೇಟೆಯ ಸುತ್ತಮುತ್ತ ಮಾಡಲಾಗಿದೆ ….ಈಗಾಗಲೇ ನಿರ್ದೇಶಕರು ಹೇಳಿರುವಂತೆ “ಕೈವ” ಚಿತ್ರದ ಕಥೆಗೂ ಕರಗ ಉತ್ಸವಕ್ಕೂ ನಂಟಿದೆ …ಹಾಗಾಗಿ ಬಗೆಗೆ ಇರುವ ಕಥೆಗೂ ನಂಟಿದೆ ಹಾಗಾಗಿ ಬೆಂಗಳೂರಿನಲ್ಲಿಯೇ ಚಿತ್ರೀಕರಣ ಕಂಪ್ಲೀಟ್ ಮಾಡಲಾಗಿದೆ …..ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಸಿಯಾಗಿದೆ… ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಚಿತ್ರವನ್ನ ಪ್ರೇಕ್ಷಕರ ಮುಂದೆ ಪ್ರಸೆಂಟ್ ಮಾಡಲಿದ್ದಾರೆ ನಿರ್ದೇಶಕ ಜಯತೀರ್ಥ….

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಹುಟ್ಟಿದವರು, ತಿನ್ನುವವರು ಮತ್ತು ಕುಡಿಯುವವರನ್ನು 'ಹಿಂದೂಗಳು' ಎಂದು ಕರೆಯಬೇಕು:

Sun Jan 29 , 2023
ಕೊಚ್ಚಿ: ‘ಹಿಂದೂ’ ಎಂಬ ಪದವು ಭೌಗೋಳಿಕ ಪದವಾಗಿದ್ದು, ಭಾರತದಲ್ಲಿ ಜನಿಸಿದವರು, ದೇಶದಲ್ಲಿ ತಿನ್ನುವವರು ಮತ್ತು ಕುಡಿಯುವವರನ್ನು ‘ಹಿಂದೂ’ ಎಂದು ಕರೆಯಬೇಕು ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ತಿರುವನಂತಪುರಂನಲ್ಲಿ ಶನಿವಾರ ಉತ್ತರ ಅಮೆರಿಕಾದಲ್ಲಿ ನೆಲೆಸಿರುವ ಮಲಯಾಳಿ ಹಿಂದೂಗಳು ಆಯೋಜಿಸಿದ್ದ ‘ಹಿಂದೂ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಕೇರಳ ರಾಜ್ಯಪಾಲರು ಈ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಜನಿಸಿದ ಯಾರಾದರೂ ಭಾರತದಲ್ಲಿ ಬೆಳೆದ ಆಹಾರವನ್ನು ಸೇವಿಸುತ್ತಾರೆ ಅಥವಾ ಭಾರತೀಯ ನದಿಗಳ ನೀರನ್ನು […]

Advertisement

Wordpress Social Share Plugin powered by Ultimatelysocial