ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಎಂ ಟಿ ಸಿದ್ದೇಗೌಡ ಅವರು ಆಯ್ಕೆಯಾದರು

ಕೆ ಆರ್ ಪೇಟೆ ತಾಲೂಕಿನ ಅಕ್ಕೆಹೆಬ್ಬಾಳು ಹೋಬಳಿಯ ಮಾಂಬಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಕೆ ಟಿ ಪ್ರಕಾಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಟ್ಟೆಕ್ಯಾತನಹಳ್ಳಿ ಅಂಜನಿಗೌಡ (ಪಾಪಣ್ಣ) 5 ಮತ ಪಡೆದು ಪರಾಜಿತರಾಗಿದ್ದಾರೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ,ಎಂ ಟಿ ಸಿದ್ದೇಗೌಡ 7 ಮತ ಪಡೆದು ಜಯಗಳಿಸಿ ನೂತನವಾಗಿ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಪ್ರಕಟಿಸಿದರು.ನೂತನ ಅಧ್ಯಕ್ಷ ಎಂ ಟಿ ಸಿದ್ದೇಗೌಡ ಮಾತನಾಡಿ ನನ್ನ ಆಡಳಿತ ಅವಧಿಯಲ್ಲಿ ಪಕ್ಷಬೇಧ ಮರೆತು ಪ್ರಾಮಾಣಿಕವಾಗಿ ರೈತರ ಹೇಳಿಗೆಗೆ,ಶ್ರಮಿಸಿ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ರೈತರಿಗೆ ಜೀವಾಳವಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೆಲಸ ಮಾಡುತ್ತಿವೆ ಅದಕ್ಕೆ ಪೂರಕವಾಗಿ ಎಲ್ಲ ಸಾರ್ವಜನಿಕರು ಕೂಡ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ, ಇಂತಹ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ನನ್ನೆಲ್ಲ ಸರ್ವ ಸದಸ್ಯರು ಒಗ್ಗೂಡಿ ರೈತರ ಹಿತ ಕಾಪಾಡುವ ಆಡಳಿತ ಮಂಡಳಿ ಎಂಬ ನಾಮಾಂಕಿತಕ್ಕೆ ಭಾಜನರಾಗುವ ನಿಟ್ಟಿನಲ್ಲಿ ನಮ್ಮ ಆಡಳಿತ ನೀಡಲಿದ್ದೇವೆ ಎಂದು ಭರವಸೆ ನೀಡಿದರು.ನೂತನ ಅಧ್ಯಕ್ಷ ಅಭಿನಂದಿಸಿ ಮಾತನಾಡಿದ ಬಿ ಕೆ ಪುಟ್ಟೇಗೌಡ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮ ಸಹಕಾರಿ ಕೇಂದ್ರವಗಿ ರೈತರ ಅಭಿವೃದ್ಧಿಗೆ ಕೈ ಜೋಡಿಸಿರುವ ಸಹಕಾರಿ ಕೇಂದ್ರ ವಾಗಿದೆ,ಹಿರಿಯರು ಹಾಕಿಕೊಟ್ಟ ಸಂಘದ ಸಹಾಯ ಪಡೆದು ರೈತರು ಬ್ಯಾಂಕಿನ ಸವಲತ್ತುಗಳನ್ನು ಪಡೆದುಕೊಳ್ಳಬೇಕು.ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸುವ ಬದಲು ಸ್ಥಳೀಯವಾಗಿರುವ ಕೃಷಿ ಪತ್ತಿನ ಸಹಕಾರ ಸಂಘದಲ್ಲೆ ಬ್ಯಾಂಕ್‌ ವಹಿವಾಟು ನಡೆಸಿದರೆ ಸಂಘವನ್ನು ಉಳಿಸಿಕೊಳ್ಳಬಹುದು ಗ್ರಾಮೀಣ ಪ್ರದೇಶದ ರೈತರ ಸೇವೆ ಮಾಡಲು ಉತ್ತಮ ಅವಕಾಶ ಸಿಕ್ಕಿದೆ ಪಕ್ಷ ಬೇಧ ಮರೆತು ಸರ್ವ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ರೈತರಿಗೆ ಸ್ಪಂದಿಸುವ ಉತ್ತಮ ಆಡಳಿತ ಎಂಬ ಹೆಗ್ಗಳಿಕೆಯ ಪಾತ್ರರಾಗಬೇಕು ಎಂದು ನೂತನ ಅಧ್ಯಕ್ಷರಿಗೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಎಂ ಬಿ ಅಶೋಕ್,ಉಪಾಧ್ಯಕ್ಷ ಮಹೇಶ್, ನಿರ್ದೇಶಕರಾದ ಎಂ ಎಸ್ ಕಾಂತರಾಜು, ಕೆ ಟಿ ಪ್ರಕಾಶ್, ಎಂ ಜಯರಾಮ್, ಕೆ ಆರ್ ಮಾಹೇಶ್, ಕಾಳಯ್ಯ, ಚೆಲುವರಾಜು, ಅಂಬುಜ, ಮುಖಂಡರಾದ ನಿಂಗರಾಜು,ಹರೀಶ್,ನಿಂಗರಾಜು, ಉದಯ ಕುಮಾರ್, ಕಟ್ಟೆಕ್ಯಾತನಹಳ್ಳಿ ದಿನೇಶ್, ಸುರೇಶ, ಜಗದೀಶ್, ಎಸ್ ಜಿ ಮೋಹನ್, ಕೆ ಆರ್ ರಘು, ಎಸ್ ಪಿ ಪುಟ್ಟಸ್ವಾಮಿಗೌಡ ಸೋಮನಾಥಪುರ ಗ್ರಾ,ಪಾ,ಸ, ರಾಜಣ್ಣ, ಕೆ ಜಗದೇಶ್, ಎಂ ಜಿ ರವಿ,ಸಿ ಈ ಓ ಚಂದ್ರಶೇಖರ್ ಸೇರಿದರೆ ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಂತಲ್ಲಿಯೇ ನಿಂತು ಹಾಳಾಗುತ್ತಿರುವ ಯಂತ್ರೋಪರಣಗಳು.

Thu Feb 9 , 2023
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪುರಸಭೆಯ ಕಾಮಗಾರಿಗಳು ಯಾರ ಹಿತಕ್ಕೆ ಎನ್ನುವುದೇ ತಿಳಿಯುತ್ತಿಲ್ಲ. ಸರಕಾರದ ವಿವಿಧ ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಉಪಯುಕ್ತ ಕಾಮಗಾರಿಗಳಿಗೆ ಸದ್ಬಳಕೆ ಮಾಡಿದರೆ ಅದು ಅಭಿವೃದ್ಧಿ ಎನ್ನಬಹುದು. ಆದರೆ ಮುಗಳಖೋಡ ಪುರಸಭೆಯ ಅಧಿಕಾರಿಗಳು ಸರಕಾರದ ಎಸ್ ಎಫ್ ಸಿ, 14ನೇ ಹಣಕಾಸು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಪಟ್ಟಣದ ವಿವಿಧ ಕೆಲಸ ಕಾರ್ಯಗಳ ಉಪಯೋಗಕ್ಕೆಂದು ಖರೀದಿಸಲಾಗಿರುವ ಟ್ರ್ಯಾಕ್ಟರ್, ಚರಂಡಿ ಸ್ವಚ್ಛತಾ ಮಷೀನ್, 407 ವಾಹನ, ಕೃತಕ […]

Advertisement

Wordpress Social Share Plugin powered by Ultimatelysocial