RELIANCE:ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್,100 ಮಿಲಿಯನ್ ಜಿಬಿಪಿಗೆ ಖರೀದಿಸಿದೆ;

ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟನ್ ಬ್ಯಾಟರಿ ಉತ್ಪಾದಕ ಸಂಸ್ಥೆ ಫ್ಯಾರಡಿಯನ್ ಲಿಮಿಟೆಡ್ ನ್ನು 100 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳಿಗೆ ಖರೀದಿಸಿದೆ.

ಈ ಸಂಸ್ಥೆ ರಿಲಾಯನ್ಸ್ ನ ಬಹು-ಬಿಲಿಯನ್ ಡಾಲರ್ ಕ್ಲೀನ್ ಎನರ್ಜಿ ವಿಭಾಗವಾಗಿರುವ ರಿಲಾಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (ಆರ್ ಎನ್‌ಇಎಸ್‌ಎಲ್) ನ ಭಾಗವಾಗಿರಲಿದೆ.

ಫ್ಯಾರಡಿಯನ್ ಲಿಮಿಟೆಡ್ ನಲ್ಲಿ ಈ ಮೂಲಕ ಶೇ.100 ರಷ್ಟು ಪಾಲನ್ನು ಹೊಂದಿರುವ ರಿಲಾಯನ್ಸ್, ಹೆಚ್ಚುವರಿಯಾಗಿ 25 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳನ್ನು ಹೂಡಿಕೆ ಮಾಡಲಿದೆ.

ಆಕ್ಸ್ಫರ್ಡ್ ಹಾಗೂ ಶೆಫೀಲ್ಡ್ ಮೂಲದ ಸಂಸ್ಥೆಯಾಗಿರುವ ಫ್ಯಾರಡಿಯನ್ ಲಿಮಿಟೆಡ್ ಸೋಡಿಯಮ್-ಐಯಾನ್ ಬ್ಯಾಟರಿ ತಂತ್ರಜ್ಞಾನದ ಪೇಟೆಂಟ್ ನ್ನು ಹೊಂದಿದ್ದು, ಮುಂಚೂಣಿಯಲ್ಲಿರುವ ಜಾಗತಿಕ ಮಟ್ಟದ ಬ್ಯಾಟರಿ ತಂತ್ರಜ್ಞಾನಗಳ ಕಂಪನಿಗಳ ಪೈಕಿ ಒಂದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಬಂದ್ ವಾಪಸ್ ಪಡೆದ ವಾಟಾಳ್ ನಾಗರಾಜ್:CM BOMMAI;

Fri Dec 31 , 2021
ಎಂಇಎಸ್ ಸಂಘಟನೆಗಳಿಗೆ ನಿಷೇಧ ಹೇರಬೇಕೆಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ಬಂದ್ ​ಗೆ ಕರೆ ನೀಡಲಾಗಿತ್ತು. ಈಗಾಗಲೇ ಕೊವಿಡ್ ಕೇಸುಗಳು ಕೂಡ ಹೆಚ್ಚಾಗುತ್ತಿರುವುದರಿಂದ ಕರ್ನಾಟಕ ಬಂದ್​ ಹಿಂಪಡೆಯಬೇಕೆಂದು ಹಲವರು ಮನವಿ ಮಾಡಿದ್ದರೂ ವಾಟಾಳ್ ನಾಗರಾಜ್ ಬಂದ್​ ಮಾಡುವ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಆದರೆ, ಇಂದು ಫೋನ್ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಿಗೆ ತೊಂದರೆ ಯಾಗುವುದರಿಂದ ಕರ್ನಾಟಕ ಬಂದ್​ ಹಿಂಪಡೆಯಬೇಕೆಂದು ಮನವಿ ಮಾಡಿದ್ದರು. ಅಲ್ಲದೆ, ತಮ್ಮ ಕಚೇರಿಗೆ ಬಂದು ಭೇಟಿ ನೀಡುವಂತೆಯೂ […]

Advertisement

Wordpress Social Share Plugin powered by Ultimatelysocial