ಮುಂಬೈ ಹಾಗೂ ರಾಜಸ್ಥಾನ ನಡುವೆ ಹೈವೋಲ್ಟೇಜ್ ಪಂದ್ಯ : ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆಲುವು ಯಾರಿಗೆ..?

ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆಲುವು ಯಾರಿಗೆ..?

ಸಂಜು ಸ್ಯಾಮ್ಸನ್  ಹಾಗೂ ರೋಹಿತ್ ಶರ್ಮಾ  ನೇತೃತ್ವದ ಮುಂಬೈ ಇಂಡಿಯನ್ಸ್  ತಂಡಗಳು ಮುಖಾಮುಖಿ ಆಗಲಿದ್ದು. ಉಭಯ ತಂಡಗಳಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಎರಡು ತಂಡಗಳು ಈವರೆಗೆ ಐಪಿಎಲ್‌ ನಲ್ಲಿ ಒಟ್ಟು 23 ಪಂದ್ಯಗಳು ಮುಖಾಮುಖಿ ಆಗಿದ್ದು. ಇದರಲ್ಲಿ ಮುಂಬೈ ಇಂಡಿಯನ್ಸ್ 12 ಮತ್ತು ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ  ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದ್ದು. ಈಗಾಗಲೇ ಮೂರು ತಂಡಗಳು ಕ್ವಾಲಿಫೈಯರ್ ಆಗಿದ್ದು, ಇನ್ನೊಂದು ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಕಾದಾಟ ನಡೆಯುತ್ತಿದೆ.

ರಾಜಸ್ಥಾನ್ ರಾಯಲ್ಸ್ ತಂಡ ಒಟ್ಟು 12 ಪಂದ್ಯಗಳನ್ನು ಆಡಿದ್ದು ಐದು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಏಳು ಪಂದ್ಯಗಳಲ್ಲಿ ಸೋತಿದೆ. ಒಟ್ಟು 10 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.337 ನೆಟ್​ರೇಟ್​ನೊಂದಿಗೆ ಆರನೇ ಸ್ಥಾನದಲ್ಲಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಹಾದಿ ತುಂಬಾನೇ ಕಠಿಣವಾಗಿದೆ. ಈವರೆಗೆ ಒಟ್ಟು 12 ಪಂದ್ಯಗಳನ್ನು ಆಡಿದ್ದು ಕೇವಲ 5 ಪಂದ್ಯಗಳನ್ನಷ್ಟೆ ಗೆದ್ದಿದೆ. ಏಳು ಪಂದ್ಯಗಳಲ್ಲಿ ಸೋಲುಂಡಿದೆ. ಒಟ್ಟು 10 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.453 ನೆಟ್​ರೇಟ್​ನೊಂದಿಗೆ ಏಳನೇ ಸ್ಥಾನದಲ್ಲಿದೆ

ರಾಜಸ್ಥಾನ್‌ ರಾಯಲ್ಸ್‌ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ದ ಗೆಲ್ಲುವ ಮೂಲಕ ರೇಸ್‌ನಲ್ಲಿ ಉಳಿದುಕೊಂಡಿದೆ. ಎವಿನ್ ಲೆವಿಸ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಲಯದಲ್ಲಿದ್ದು ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಸಂಜು ಸ್ಯಾಮ್ಸನ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಶಿವಂ ದುಬೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಇವರಿಗೆ ಲ್ಯಾಮ್ ಲಿವಿಂಗ್​ಸ್ಟೋನ್, ಲುಮ್ರೋರ್, ರಾಹುಲ್ ತೇವಾಟಿಯ ಸಾಥ್ ನೀಡಬೇಕಾಗಿದೆ. ಬೌಲಿಂಗ್​ನಲ್ಲಿ ಮುಸ್ತಫಿಜುರ್ ರೆಹ್ಮಾನ್, ಕಾರ್ತಿಕ್ ತ್ಯಾಗಿ ಮತ್ತು ಚೇತನ್ ಸಕರಿಯಾ ಇನ್ನಷ್ಟು ಬಲ ತುಂಬಬೇಕಿದೆ.

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಉಳಿದೆಲ್ಲ ತಂಡಗಳಿಗಿಂತ ಕೆಳ ಮಟ್ಟದಲ್ಲಿದ್ದು. ಬ್ಯಾಟಿಂಗ್ ಕಳಪೆ ಪ್ರದರ್ಶನವೇ ದೊಡ್ಡ ತಲೆನೋವಾಗಿದೆ. ಅದರಲ್ಲೂ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಯಾವೊಂದು ಪಂದ್ಯದಲ್ಲಿ ಮಿಂಚುತ್ತಿಲ್ಲ. ಓಪನರ್​ಗಳಾದ ರೋಹಿತ್ ಶರ್ಮಾ ಹಾಗೂ ಕ್ವಿಂಟರ್ ಡಿಕಾಕ್ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ. ಹಾರ್ದಿಕ್ ಪಾಂಡ್ಯ ಹಾಗೂ ಕೀರೊನ್ ಪೊಲಾರ್ಡ್ ಕೂಡ ಫಾರ್ಮ್​ನಲ್ಲಿಲ್ಲ. ಆದ್ರೆ, ಮುಂಬೈ ಬೌಲಿಂಗ್​ನಲ್ಲಿ ಬಲ ಪಡೆದುಕೊಂಡಿದೆ. ಜಸ್​ಪ್ರೀತ್ ಬುಮ್ರಾ ಹಾಗೂ ರಾಹುಲ್ ಚಹಾರ್ ವಿಕೆಟ್ ಟೇಕಿಂಗ್ ಬೌಲರ್​ಗಳಾದರೆ, ಕ್ರುನಾಲ್ ಪಾಂಡ್ಯ ಹಾಗೂ ಟ್ರೆಂಟ್ ಬೌಲ್ಟ್ ಇವರಿಗೆ ಸಾಥ್ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಇವತ್ತಿನ ಪಂದ್ಯ ರೋಚಕ ವಾಗುವುದರಲ್ಲಿ ಅನುಮಾನವೆ ಇಲ್ಲಾ.

Please follow and like us:

Leave a Reply

Your email address will not be published. Required fields are marked *

Next Post

ನಾಡ ಹಬ್ಬ ದಸರಾಗೆ ರಾಜ್ಯ ಸರ್ಕಾರ ಇಂದು ಗೈಡ್​ಲೈನ್ಸ್​​ ಬಿಡುಗಡೆ ಮಾಡಿದೆ.

Tue Oct 5 , 2021
ನಾಡ ಹಬ್ಬ ದಸರಾಗೆ ರಾಜ್ಯ ಸರ್ಕಾರ ಇಂದು ಗೈಡ್​ಲೈನ್ಸ್​​ ಬಿಡುಗಡೆ ಮಾಡಿದೆ.   ಬೆಂಗಳೂರು; ವಿಶ್ವವಿಖ್ಯಾತ ದಸರಾ ಆಚರಣೆಗೆ ರಾಜ್ಯ ಸರ್ಕಾರ ಇಂದು ಗೈಡ್​ಲೈನ್ಸ್​​ ಬಿಡುಗಡೆ ಮಾಡಿದೆ. ಕಳೆದ ಭಾರಿಯಂತೆ ಈ ಭಾರಿಯು ಸಹ ಸರಳವಾಗಿ ದಸರಾ ಆಚರಣೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಮೈಸೂರು ದಸರಾ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ದಸರಾ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಜನರು […]

Advertisement

Wordpress Social Share Plugin powered by Ultimatelysocial