365 ಕೋಟಿ ದೇವತೆಗಳಲ್ಲಿ ಕ್ರೈಸ್ತಕೂಡ ಒಬ್ಬನಾಗುವ ಕಾಲ ಸನ್ನಿಹಿತ: ಸೂಲಿಬೆಲೆ

365 ಕೋಟಿ ದೇವತೆಗಳಲ್ಲಿ ಕ್ರೈಸ್ತಕೂಡ ಒಬ್ಬನಾಗುವ ಕಾಲ ಸನ್ನಿಹಿತ: ಸೂಲಿಬೆಲೆ

ಮೈಸೂರು: ದೇಶದಲ್ಲಿ ಹಿಂದು ಮುಖವಾಡ ಧರಿಸಿದ ಕ್ರಿಪ್ಟೋ-ಕ್ರಿಶ್ಚಿಯನ್ನರು ಹೆಚ್ಚಾಗುತ್ತಿದ್ದಾರೆ ಎಂದು ಯುವ ಬ್ರಿಗೇಡ್‌ ಸಂಸ್ಥಾ ಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಅನಾಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಎಂ ವೆಂಕಟಕೃಷ್ಣಯ್ಯ (ತಾತಯ್ಯ) ಜಯಂತೋತ್ಸವ ಹಾಗೂ ಎಂ. ವೆಂಕಟಕೃಷ್ಣಯ್ಯ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮದಲ್ಲಿ ಮಾತನಾಡಿ, ಕ್ರಿಪ್ಟೋ-  ಕ್ರಿಶ್ಚಿಯನ್ನರು ಹಿಂದು ಧರ್ಮದ ಆಚರಣೆ ಅಳವಡಿಸಿಕೊಂಡು ಅಮಾಯಕರನ್ನು ಮತಾಂತರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದು ಮತದಲ್ಲಿ ನೂರಾರು ದೇವರಿದ್ದಾರೆ ಎನ್ನುತ್ತಿದ್ದರು.

ಈಗ ಕ್ರಿಸ್ತನಿಗೆ ಅಷ್ಟ್ರೋತ್ತರ ನಾಮಾವಳಿ ಪಠಿಸುತ್ತಿದ್ದಾರೆ. ಚರ್ಚ್‌ ಮುಂದೆ ಗರುಡಗಂಬ ಸ್ಥಾಪಿಸಲಾಗುತ್ತಿದೆ.

ರಥೋತ್ಸವ, ಉರುಳುಸೇವೆ ಸೇರಿ ನಾನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದೆಲ್ಲ ಗಮನಿಸಿದರೆ 365 ಕೋಟಿ ಹಿಂದು ದೇವತೆಗಳಲ್ಲಿ ಕ್ರೈಸ್ತ ಕೂಡ ಒಬ್ಬನಾಗುವ ಕಾಲ ಸನ್ನಿಹಿತವಾಗಿದೆ ಎನ್ನಿಸುತ್ತಿದೆ. ಈ ಮೂಲಕ ಅಮಾಯಕರನ್ನು ಕ್ರೈಸ್ತ ಮತಕ್ಕೆ ಆಕರ್ಷಿಸಲಾಗುತ್ತಿದೆ.

ಇದರ ತಡೆಗೆ ಮತಾಂತರ ನಿಷೇಧ ಕಾಯಿದೆ ಅವಶ್ಯಕ ಎಂದರು. ಈ ನಾಡಿನಲ್ಲಿ ಕ್ರಿಪ್ಟೋ ಕ್ರಿಶ್ಚಿಯನ್‌ಗಳು ಸೇರಿಕೊಂಡಿದ್ದಾರೆ.ಅವರು ಮೇಲ್ನೋಟಕ್ಕೆ ಹಿಂದು ಗಳಾಗಿದ್ದು, ಹಿಂದು ಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ: ಡಿಕೆಶಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

Mon Dec 27 , 2021
ಬೆಂಗಳೂರು: ‘ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲಿಯೇ ನಂಬಿಕೆ ಇರಿಸಿದೆ. ಹೀಗಾಗಿ, ಮುಂದಿನ ವಿಧಾನಸಭಾ ಚುನಾವಣೆಯನ್ನೂ ಸಾಮೂಹಿಕ ನಾಯಕತ್ವದಲ್ಲಿಯೇ ಎದುರಿಸಲಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ನಗರದ ಗಾಂಧಿಭವನದಲ್ಲಿ ಭಾನುವಾರ ಲೇಖಕ ಎಸ್‌.ಜಿ.ಸಿದ್ದರಾಮಯ್ಯ ಅವರ ಆತ್ಮಕಥನ ಯರಬೇವು ಬಿಡುಗಡೆ ಸಮಾರಂಭದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಕಾಂಗ್ರೆಸ್‌ ಪಕ್ಷ ತಮ್ಮ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸಲಿದೆ ಎಂಬ ಅರ್ಥದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇತ್ತೀಚೆಗೆ […]

Advertisement

Wordpress Social Share Plugin powered by Ultimatelysocial