ಮೂರು ಮದುವೆಯಾಗಿರುವ ಮಾಯಾಂಗೆ ಇವಳು..! ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಳು: ಮುಂದೇನಾಯ್ತು.?

ಮೈಸೂರು : ಒಂದಲ್ಲ, ಎರಡಲ್ಲ, ಮೂರು ಮದುವೆಯಾಗಿ ಇತರೆ ಯುವಕರೊಂದಿಗೆ ಚಾಟಿಂಗ್ ಮಾಡುತ್ತಿದ್ದ ಮಹಿಳೆಯನ್ನು ಅವಳ ಮೂರನೇ ಪತಿ ಪ್ರಶ್ನಿಸಿದ್ದಕ್ಕೆ, ಆತನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಮೈಸೂರಲ್ಲಿ ನಡೆದಿದೆ. ಮೈಸೂರಿನ ಉದಯ ಗಿರಿಯ ನಿಧಾ ಖಾನ್ ಮೂರು ಮದುವೆಯಾದ ಮಹಿಳೆ.

ಇವಳು ಎರಡು ಮದುವೆಯಾದ ಮೇಲೆ ಟಿಂಡರ್ ಆಯಪ್ ಮೂಲಕ ರಾಜೀವ್ ನಗರದ ಅಜಾಮ್ ಖಾನ್‍ನನ್ನು ಪರಿಚಯ ಮಾಡಿಕೊಂಡಳು. ನಂತರ ತಾನು ಅವಿವಾಹಿತೆ ಎಂದು ಸುಳ್ಳು ಹೇಳಿ 2020ರಲ್ಲಿ ಮೂರನೇ ಮದುವೆಯಾಗಿದ್ದಾಳೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಅಜಾಮ್ ಪತ್ನಿ ನಿಧಾ ಖಾನ್‍ನ ವರ್ತನೆಯಿಂದ ಅನುಮಾನಗೊಂಡಿದ್ದಾನೆ. ಇದರಿಂದಾಗಿ ನಿಧಾ ಖಾನ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾನೆ. ಆಗ ಆಕೆ ಹಿಂದೆ ಎರಡು ಮದುವೆ ಆಗಿರುವ ವಿಷಯ ಗೊತ್ತಾಗಿದೆ. ಅಲ್ಲದೆ ಮೂರು ಮದುವೆಯಾರೂ ಬೇರೆ ಯುವಕರ ಜೊತೆ ಚಾಟಿಂಗ್, ಮೀಟಿಂಗ್ ಕೂಡ ಮಾಡಿರುವ ವಿಷಯ ಕೇಳಿ ಶಾಕ್ ಆಗಿದ್ದಾನೆ ಕೊನೆಗೆ ಬೇರೆ ಯುವಕರೊಂದಿಗೆ ಚಾಟಿಂಗ್ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಅಜಾಮ್‍ಗೆ ಸಿಕ್ಕಿಬಿದ್ದಿದ್ದಾಳೆ. ಪತ್ನಿ ರಂಗಿನಾಟ ಕಣ್ಣಾರೆ ಕಂಡ ಪತಿ ಅಜಾಮ್ ಪತ್ನಿ ಹಾಗೂ ಆಕೆಯ ಹೊಸ ಪ್ರಿಯಕರನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಮಸ್ಯೆಗೆ ಸಿಲುಕಿದ ವಿನಾಯಕನ್, ಮೀ ಟೂ ಮೂವ್ಮೆಂಟ್ ಏನು ಎಂದು ತನಗೆ ತಿಳಿದಿಲ್ಲ!

Thu Mar 24 , 2022
ಖ್ಯಾತ ಮಲಯಾಳಂ ನಟ ವಿನಾಯಕನ್ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ವಿರುದ್ಧದ ಸಾಮಾಜಿಕ ಅಭಿಯಾನವಾದ ಮೂವ್‌ಮೆಂಟ್‌ನಲ್ಲಿ ತಮ್ಮ ರುಚಿಯಿಲ್ಲದ ಹೇಳಿಕೆಯ ನಂತರ ಸ್ವತಃ ತೊಂದರೆಗೆ ಸಿಲುಕಿದ್ದಾರೆ, ಅಲ್ಲಿ ಬದುಕುಳಿದವರು ಆರೋಪಗಳನ್ನು ಪ್ರಚಾರ ಮಾಡುತ್ತಾರೆ. ಸ್ಪಷ್ಟವಾಗಿ, ಈಗ ಬಿಡುಗಡೆಯಾದ ಅವರ ಚಿತ್ರ ಒರುತಿ ಪ್ರಚಾರದ ಸಮಯದಲ್ಲಿ, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರು ನ ಅರ್ಥದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹಂಚಿಕೊಂಡಿದ್ದಾರೆ. ಅಲ್ಲದೆ, ಈವೆಂಟ್‌ನಲ್ಲಿ ಸುದ್ದಿಗಾರರಿಗೆ ಎಂದರೇನು ಎಂದು ಪ್ರಶ್ನಿಸಿದ […]

Advertisement

Wordpress Social Share Plugin powered by Ultimatelysocial