‘ಮೈಕಲ್ ಅಂಡ್ ಮಾರ್ಕೊನಿ’ಗೆ ನಟರಾಕ್ಷಸ ಡಾಲಿ ಧನಂಜಯ್ ಮತ್ತು ಲೂಸ್ ಮಾದ ಯೋಗಿ ಸಾಥ್

 

 

ಸಿನಿಮಾ ಎಂಬ ಸಮುದ್ರದಲ್ಲಿ ಈಜಿ ದಡ ಸೇರುವುದು ಅಂದ್ರೆ ಸಾಮಾನ್ಯದ ಮಾತಲ್ಲ. ಈ ಬಣ್ಣದ ಲೋಕದ‌‌ ಕನಸು ಕಾಣುತ್ತಾ.. ಇಲ್ಲಿಯೇ ಬದುಕು ಕಟ್ಟಿಕೊಳ್ಳಬೇಕೆಂಬ ಇಚ್ಛೆಯಿಂದ ಬಂದ ಇಲ್ಲೊಂದು ತಂಡ ಹಲವು ಅವಮಾನ.. ಸೋಲು ಮೆಟ್ಟಿ ಮತ್ತೊಂದು ಸಿನಿಮಾಗೆ ಅಧಿಕೃತ ಮುದ್ರೆ ಒತ್ತಿದೆ. ಈ ಹಿಂದೆ ಸ್ಟಾರ್ ಕನ್ನಡಿಗ ಅನ್ನೋ ಸಿನಿಮಾ ಬಂದಿತಲ್ಲ. ಅದೇ ತಂಡ ಸೇರಿಕೊಂಡು ಈಗ ಮೈಕಲ್ ಅಂಡ್ ಮಾರ್ಕೊನಿ‌ ಎಂಬ ಸಿನಿಮಾ ಮಾಡುತ್ತಿದೆ. ಪಕ್ಕ ಗ್ಯಾಂಗ್ ಸ್ಟಾರ್ ಕಥೆಯೊಳ್ಳ, ರಾ ಥೀಮ್ ಕಾನ್ಸೆಪ್ಟ್ ನಲ್ಲಿ ತಯಾರಾಗುತ್ತಿರುವ ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದ ಟೈಟಲ್ ನ್ನು ನಟರಾಕ್ಷಸ ಡಾಲಿ ಧನಂಜಯ್ ಮೆಚ್ಚಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿ,‌ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಲೂಸ್ ಮಾದ ಯೋಗಿ ಮೆಚ್ಚುಗೆಲೂಸ್ ಮಾದ ಯೋಗಿ ಮೈಕಲ್ ಅಂಡ್ ಮಾಕೋನಿ ಸಿನಿಮಾದ ಟೈಟಲ್ ಹಾಗೂ ಬ್ಲಾಕ್ ಬಿಲ್ಲಿ ಕ್ಯಾರೆಕ್ಟರ್ ಇಂಟ್ರುಡಕ್ಷನ್ ಥ್ರಿಲ್ ಆಗಿ, ಇಡೀ ಟೀಂಗೆ ಶುಭ ಹಾರೈಸಿ, ಸಿನಿಮಾ ತಂಡದ ಗೆಲುವಿಗೆ ಸಾಥ್ ಕೊಟ್ಟಿದ್ದಾರೆ.ಮೈಕಲ್ ಅಂಡ್ ಮೊರ್ಕೊನಿ ಸಿನಿಮಾದ ಟೈಟಲ್ ಜೊತೆಗೆ ಸಿನಿಮಾದ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್ ವೊಂದನ್ನು ಚಿತ್ರತಂಡ ರಿವೀಲ್ ಮಾಡಿದೆ. ಬ್ಲಾಕ್ ಬಿಲ್ಲಿ ಎಂಬ ಪಾತ್ರವನ್ನು ಪ್ರಶಾಂತ್ ಸಿದ್ದಿ ಪೋಷಣೆ‌ ಮಾಡ್ತಿದ್ದಾರೆ. ಬ್ಲಾಕ್ ಬಿಲ್ಲಿ ಕ್ಯಾರೆಕ್ಟರ್ ನಂಬರ್ 18, ಏರಿಯಾ ನಂಬರ್-51 ಅಂತಾ ಪೋಸ್ಟರ್ ನಲ್ಲಿ ಅನೌನ್ಸ್ ಮಾಡಲಾಗಿದೆ. ಇದು ಚಿತ್ರರಸಿಕರ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ.ಸದ್ಯ ಟೈಟಲ್ ಹಾಗೂ ಬ್ಲಾಕ್ ಬಿಲ್ಲಿ ಪಾತ್ರವನ್ನಷ್ಟೇ ಪರಿಚಯಿಸಿರುವ ಚಿತ್ರತಂಡ ಸದ್ಯದಲ್ಲಿಯೇ ಇಡೀ ತಂಡದೊಟ್ಟಿಗೆ ಪ್ರೇಕ್ಷಕರ ಎದುರು ಹಾಜರಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಮಧುರವಾಗಿದೆ "ಕೌಟಿಲ್ಯ" ನ ಹಾಡುಗಳು.

Thu Mar 3 , 2022
    ಸುಪ್ರಸಿದ್ಧ “ಶನಿ” ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಗಮನ ಸೆಳೆದಿದ್ದ, “ಜಂಟಲ್ ಮ್ಯಾನ್” ಚಿತ್ರದಲ್ಲಿ ಖಳನಾಯಕನಾಗಿ ಮನೆಮಾತಾಗಿರುವ ಅರ್ಜುನ್ ರಮೇಶ್ ಹಾಗೂ “ಮನಸಾರೆ” ಧಾರಾವಾಹಿ ಖ್ಯಾತಿಯ ಪ್ರಿಯಾಂಕ ಚಿಂಚೋಳಿ ನಾಯಕ- ನಾಯಕಿಯಾಗಿ ನಟಿಸಿರುವ “ಕೌಟಿಲ್ಯ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, “ಮುಂಗಾರು ಮಳೆ” ಚಿತ್ರದ ನಿರ್ಮಾಪಕ ಇ. ಕೃಷ್ಣಪ್ಪ, ಭಾ.ಮ.ಹರೀಶ್ ಹಾಗೂ “ಪ್ರೇಮಪೂಜ್ಯಂ” ಚಿತ್ರದ ಬೃಂದಾ ಆಚಾರ್ಯ ಮುಖ್ಯ ಅತಿಥಿಗಳಾಗಿ […]

Advertisement

Wordpress Social Share Plugin powered by Ultimatelysocial