ಮೈಸೂರ್ ಪಾಕ್

 

ಒಂದು ದಿನ ಅರಮನೆಯ ಮುಖ್ಯ ಅಡುಗೆಯವರಾದ ಮಾದಪ್ಪ ಅವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಭೋಜನವನ್ನು ಸಿದ್ಧಪಡಿಸಿದರು. ಆದರೆ, ಯಾವ ಸಿಹಿತಿಂಡಿ ನೀಡುವುದು ಎಂಬ ಚಿಂತೆಯಲ್ಲಿದ್ದ ಅವರು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆಯನ್ನು ಒಟ್ಟಿಗೆ ಬೇಯಿಸಲು ನಿರ್ಧರಿಸಿದರು. ಮಹಾರಾಜರು ತಿಂದು ಮುಗಿಸುವಷ್ಟರಲ್ಲಿ ಆಹಾರ ಗಟ್ಟಿಯಾಗಿದ್ದರಿಂದ ಮಾದಪ್ಪ ಅಳುತ್ತಾ ಕೊಟ್ಟರು. ಆಗ ಮಹಾರಾಜರು, “ಇದು ಹೊಸ ರುಚಿ, ತುಂಬಾ ರುಚಿಕರವಾಗಿದೆ. ಅದರ ಹೆಸರೇನು?” ಮಾದಪ್ಪ ಗೊಂದಲಕ್ಕೊಳಗಾದ ಮತ್ತು “ಮೈಸೂರು ತಿನಿಸು” ಎಂದು ಹೇಳಿದರು.ಅಂದಿನಿಂದ, ಈ ಮೈಸೂರು ಪಾಕ್ (ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆಯನ್ನು ಒಳಗೊಂಡಿರುವ ಭಕ್ಷ್ಯ) ಜಗತ್ಪ್ರಸಿದ್ಧವಾಗಿದೆ.

ಈ ಹೆಸರಿಗೆ ಇನ್ನೊಂದು ನಿಷ್ಪತ್ತಿಯೂ ಇದೆ. ಮಸೂರ್ ಎಂದರೆ ಹಿಂದಿಯಲ್ಲಿ ಕಡಲೆಬೇಳೆ ಎಂದರ್ಥ. ಅದನ್ನು ಸಕ್ಕರೆ ಪಾಕದಲ್ಲಿ ಹಾಕಿ ಮಾಡಿದ್ದು ಎಂಬರ್ಥದಲ್ಲಿ ಮೈಸೂರ್ ಪಾಕ್ ಬಂದಿರಬಹುದು” ಎಂಬುದು ಕೆಲವೊಂದು ವಿದ್ವಾಂಸರ ಅಭಿಪ್ರಾಯ. ಆದರೆ ಕಡಲೆ ಬೇಳೆಗೆ ಬಳಕೆಯಲ್ಲಿರುವ ಹೆಸರು ಚನಾ ದಾಲ್. ಭಾರತದ ಇತರ ಭಾಗಗಳಲ್ಲಿ ಸಾಕಷ್ಟು ತಿರುಗಿರುವ ಸಿಹಿತಿಂಡಿಪೋತನಾದ ನಾನು ಮಸೂರ್ ಪಾಕನ್ನು ಎಲ್ಲಿಯೂ ಕೇಳಿಲ್ಲ.
ಏನೇ ಆಗಲಿ, ಮೈಸೂರಿನ ಹೆಸರಿನೊಂದಿಗಿರುವ ಈ ಸಿಹಿ ಹೆಸರನ್ನು ಅಳಿಸುವುದು ಅಷ್ಟು ಸುಲಭ ಅಲ್ಲ.
ಅಂದ ಹಾಗೆ ಕಾಲಾನುಕ್ರಮದಲ್ಲಿ ಅಂದು ತಿನ್ನಲು ಗಟ್ಟಿಯಾಗಿ ಇಲ್ಲವೇ ಗರಿ ಗರಿಯಾಗಿದ್ದ ಮೈಸೂರು ಪಾಕು ಮುಂದೆ ಮೆದುರೂಪ ಪಡೆದು ಯಶಸ್ವಿಯಾಗಿದೆ. ಹೀಗಿದ್ದರೂ ಮೈಸೂರು ಗ್ರಾಮೀಣ ಪ್ರದೇಶಗಳಲ್ಲಿ, ಮನೆಗಳಲ್ಲಿ ಹಿಂದಿನ ಮೈಸೂರು ಪಾಕು ಕೂಡಾ ಇನ್ನೂ ಉಳಿದಿದೆ.
ಕಥೆ ಏನಾದರೂ ಆಗಿರಲಿ ಆ ಸ್ವಾದ ಇಂದ ಬಾಯಲ್ಲಿ ನೀರೂರಿಸುವುದು ಮತ್ತು ಅಂದಿನ ದಿನಗಳಲ್ಲಿ ಒಂದಷ್ಟು ಹೆಚ್ಚು ತಿಂದಾಗ ಅದರ ತುಪ್ಪದ ಜಿಡ್ಡು ಗಂಟಲಿನಲ್ಲಿ ಕರ ಕರ ಮಾಡಿದ್ದನ್ನು ಮರೆಯಲುಂಟೆ 😊.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

Leave a Reply

Your email address will not be published. Required fields are marked *

Next Post

'ಥಗ್ಸ್ ಆಫ್ ರಾಮಘಡ’ ಟ್ರೇಲರ್ ಬಿಡುಗಡೆ ಮಾಡಿ ಸಾಥ್ ನೀಡಿದ ಡಾಲಿ ಧನಂಜಯ - ಜನವರಿ 6ಕ್ಕೆ ಸಿನಿಮಾ ತೆರೆಗೆ.

Mon Dec 19 , 2022
ಫಸ್ಟ್ ಲುಕ್ ಹಾಡಿನ ಮೂಲಕ ಗಮನ ಸೆಳೆದ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಭರವಸೆ ಹೊತ್ತ ಟ್ರೇಲರ್ ಬಿಡುಗಡೆಯಾಗಿದೆ. ಕಾರ್ತಿಕ್ ಮಾರಲಭಾವಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದ ಟ್ರೇಲರ್ ನಟರಾಕ್ಷಸ ಡಾಲಿ ಧನಂಜಯ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.ನೈಜ ಘಟನೆ ಆಧಾರಿತ ಈ ಚಿತ್ರದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ರಾಘವೇಂದ್ರ, […]

Advertisement

Wordpress Social Share Plugin powered by Ultimatelysocial