ಮೈಸೂರು ದಸರಾ ಆಚರಣೆಗೆ ಅಂತ ಕೊಟ್ಟ ಹಣದಲ್ಲಿ 25 ಲಕ್ಷ ರೂ ಉಳಿಸಿದ ರಾಜ್ಯ ಸರ್ಕಾರ…!!

ಈ ಬಾರಿ ಮೈಸೂರು ದಸರಾ ಖರ್ಚು ವೆಚ್ಚದ ವಿವರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekhar) ನೀಡಿದರು. ಕೊರೊನಾ ಹಿನ್ನೆಲೆ ಕಳೆದ ಬಾರಿಯಂತೆ ಈ ವರ್ಷವೂ ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಮೈಸೂರಿನ ಅರಮನೆ ಮಂಡಳಿಯಲ್ಲಿ ಸುದ್ದಿಗೋಷ್ಠಿ ವೇಳೆ ಸಚಿವ ಸೋಮಶೇಖರ್ ಲೆಕ್ಕ ಮಂಡನೆ ಮಾಡಿದರು.ಸರ್ಕಾರದಿಂದ ದಸರಾ ಆಚರಣೆ ಆರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಆರು ಕೋಟಿ ರೂ.ಗಳಲ್ಲಿ ಈ ಬಾರಿ 5,42,07,679 ಕೋಟಿ ಖರ್ಚು ಆಗಿದೆ. ಮೈಸೂರು, ಚಾಮರಾಜನಗರ, ಹಾಸನಕ್ಕೆ 1.20 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.ಉಳಿದಂತೆ ವಿದ್ಯುತ್, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ‌, ಸ್ತಬ್ಧ ಚಿತ್ರ, ಆನೆಗಳ ನಿರ್ವಹಣೆ ಸೇರಿದಂತೆ ದಸರೆಗೆ 4,22,07,679 ಕೋಟಿ ರೂ ಖರ್ಚು ಆಗಿದೆ ಎಂದು ಮಾಹಿತಿ ನೀಡಿದರು.ಇದೇ ವೇಳೆ ಉಪಚುನಾವಣೆ ಕುರಿತು ಮಾತನಾಡಿದ ಸಚಿವರು, ಹಾನಗಲ್ ಮತ್ತು ಸಿಂದಗಿಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಲೀಡ್ ಬಗ್ಗೆ ಹೇಳಲ್ಲ ನಾಳೆ ಹೇಳುತ್ತೇನೆ. ಈ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚನೆ ಅಂತ ಹೇಳಲ್ಲ ಎಂದರು. ಬಿಜೆಪಿ ಸೇರ್ಪಡೆಯಾದ 17 ಜನರ ಸ್ಥಿತಿ ವಿಚಾರಕ್ಕೆ  ಪ್ರತಿಕ್ರಿಯಿಸಿದರು ಅವರು, ಎಲ್ಲಾ ಕ್ಷೇತ್ರಗಳ ಪರಿಸ್ಥಿತಿ ಹೇಗಿರುತ್ತೋ ನಮ್ಮ ಪರಿಸ್ಥಿತಿ ಹಾಗೇ ಇರುತ್ತೆ. ಆದ್ರೆ ಏನನ್ನು ಬೇಕಾದರು ತಿಳಿದುಕೊಳ್ಳಿ. 2023 ರ ಚುನಾವಣೆ ಎಲ್ಲಾ ಕ್ಷೇತ್ರಗಳಲ್ಲಿ ಹೇಗೆ ನಡೆಯುತ್ತೆ ಅದೇ ರೀತಿ‌‌ ನಮ್ಮ ಕ್ಷೇತ್ರದಲ್ಲೂ  ನಡೆಯುತ್ತೆ. ನಾವು 17 ಜನರು ವಿಶೇಷ ಅಲ್ಲ ಎಂದು ಹೇಳಿದರು. ನಮ್ಮನ್ನು ಯಾರು ಸೋಲಿಸಲು ಆಗಲ್ಲ, ಗೆಲ್ಲಿಸಲೂ ಆಗುವುದಿಲ್ಲ. ಚುನಾವಣೆ ಸೋಲು ಗೆಲುವು ಸಾಮಾನ್ಯ. ಅವಾಗಿನ ಪರಿಸ್ಥಿತಿ ಹೇಗಿರುತ್ತೆ ಆ ರೀತಿ ಆಗುತ್ತೆ. ಈಗ ನಡೆದಿರುವ ಚುನಾವಣೆ ಮಾತ್ರ ವಿಶೇಷ ಅಂತ ಎಂದರು. ಈ ಬಾರಿ ವಿಶೇಷವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ 75ರ ಹಾಗೂ ಭಾರತಕ್ಕೆ ಒಲಂಪಿಕ್ ನಲ್ಲಿ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಅವರ ದೀಪಾಲಂಕಾರಕ್ಕೆ  ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಗರದ ಪ್ರಮುಖ ರಸ್ತೆಗಳೆಲ್ಲ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು.

 

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಮರ್ಷಿಯಲ್​ ಸಿಲಿಂಡರ್​​ ಬೆಲೆ 266. ರೂ ಹೆಚ್ಚಳ : ದೀಪಾವಳಿಗೂ ಮುನ್ನವೇ ಗ್ರಾಹಕರಿಗೆ ಬರೆ..!

Mon Nov 1 , 2021
ಕ್ರೂರಿ ಕೊರೋನಾ ಬಂದಮೇಲೆ ಜನರು ಅನುಭಸುತ್ತಿರುವ ಕಷ್ಟ ಒಂದೊಂದಲ್ಲ. ಎಲ್ಲ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಪೆಟ್ರೋಲ್, ಡೀಸೆಲ್ ಬೆಲೆ ಅಂತೂ ಕೇಳಲೇ ಬೇಡಿ. ಪ್ರತಿನಿತ್ಯಇಂಧನದ ಬೆಲೆ ಏರುತ್ತಲೇ ಇದೆ. ಈಗಾಗಲೇ ಬೆಲೆ ಏರಿಕೆ ಹೊಡೆತಕ್ಕೆ ಸಿಲುಕಿ ಸಾಮನ್ಯರು ನಲುಗಿಹೋಗಿದ್ದಾರೆ. ಇದೀಗ ದೀಪಾವಳಿಗೂ ಮುನ್ನ ಮತ್ತೆ ಬೆಲೆ ಏರಿಕೆ ಶಾಕ್ ಗ್ರಾಹಕರಿಗೆ ಎದುರಾಗಿದೆ. ನವೆಂಬರ್ ಮೊದಲ ದಿನವೇ ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಬೆಲೆಯನ್ನು ಏರಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಳಿಕ […]

Advertisement

Wordpress Social Share Plugin powered by Ultimatelysocial