ಮೈಸೂರಿನ ವಕೀಲೆ ಸಾವು: ಗಂಡ, ಮಾವ ಅಂದರ್‌; ಅತ್ತೆ ಎಸ್ಕೇಪ್‌

 

ಮೈಸೂರು: ಇಲ್ಲಿನ ರಾಮಕೃಷ್ಣ ನಗರ ನಿವಾಸಿ ವಕೀಲೆ ಚಂದ್ರಕಲಾ (32) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಸಂಬಂಧ ಮೃತಳ ಗಂಡ ಮತ್ತು ಮಾವನನ್ನು ಕುವೆಂಪುನಗರ ಪೊಲೀಸರು ವಶಕ್ಕೆ ಪಡೆದಿದ್ದು, ಅತ್ತೆ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಚಂದ್ರಕಲಾ 2019ರಲ್ಲಿ ಪ್ರದೀಪ್‌ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರಿಗೆ ಆರು ತಿಂಗಳ ಒಂದು ಮಗು ಇದೆ ಎನ್ನಲಾಗಿದೆ. ಜೊತೆಗೆ ವರದಕ್ಷಿಣೆ ವಿಚಾರವಾಗಿ ಆಗಾಗ ಕುಟುಂಬದಲ್ಲಿ ಗಲಾಟೆಗಳು ನಡೆಯುತ್ತಿದ್ದವು ಎಂದು ಮೃತಳ ಸಂಬಂಧಿಗಳು ಆರೋಪಿಸಿದ್ದಾರೆ.

ಶನಿವಾರ ಬೆಳಗ್ಗಿನ ಜಾವ ಚಂದ್ರಕಲಾ ಪತಿ ಪ್ರದೀಪ್‌ ತನ್ನ ಮಾವನ ಮನೆಗೆ ಕರೆ ಮಾಡಿ ಆಸ್ಪತ್ರೆ ಬಳಿ ಬರುವಂತೆ ತಿಳಿಸಿದ್ದಾನೆ. ಅಷ್ಟರಲ್ಲಾಗಲೇ ಚಂದ್ರಕಲಾ ಮೃತಪಟ್ಟಿದ್ದು, ಇದು ವರದಕ್ಷಿಣೆ ಕಿರುಕುಳದಿಂದ ನಡೆದಿರುವ ಕೊಲೆ ಎಂದು ಮೃತಳ ಪೋಷಕರು ಪ್ರದೀಪ್‌ ಮತ್ತು ಆತನ ತಂದೆ, ತಾಯಿ ವಿರುದ್ಧ ಕುವೆಂಪುನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಪ್ರದೀಪ್‌ ಮತ್ತು ಆತನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರದೀಪ್‌ ತಾಯಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ವಿಶೇಷ ನ್ಯಾಯಾಲಯಗಳಿಂದ ಕೃಷಿ ಭೂಮಿಯನ್ನು ಕೈಬಿಡುವುದು' ವ್ಯಾಪ್ತಿ ಕರ್ನಾಟಕದ ಅರಣ್ಯಗಳನ್ನು ಕೊಲ್ಲುತ್ತದೆ!

Sun Mar 13 , 2022
ಅಡಿಯಲ್ಲಿ 2 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳುವ ಸವಾಲು ಇಲಾಖೆಗೆ ಎದುರಾಗಿರುವ ಸಂದರ್ಭದಲ್ಲಿ ಒತ್ತುವರಿ ತೆರವು ಮಾಡಲು ಯತ್ನಿಸುತ್ತಿರುವ ಅಧಿಕಾರಿಗಳಿಗೆ ಭೂಕಬಳಿಕೆ ನಿಷೇಧದ ವಿಶೇಷ ನ್ಯಾಯಾಲಯಗಳ ವ್ಯಾಪ್ತಿಯಿಂದ ಕೃಷಿ ಭೂಮಿಯನ್ನು ತೆಗೆದುಹಾಕುವ ಸರ್ಕಾರದ ಭರವಸೆ ಕುಂಠಿತವಾಗಿದೆ. ಅತಿಕ್ರಮಣ. ಇಲಾಖೆಯು ಭೂಕಬಳಿಕೆ ನಿಷೇಧ ಕಾಯ್ದೆಯ ನಿಬಂಧನೆಗಳನ್ನು ಅಷ್ಟೇನೂ ಬಳಸದಿರುವಾಗಲೇ ಸರ್ಕಾರದ ಇತ್ತೀಚಿನ ನಡೆ ಕೂಡ ಬಂದಿದೆ. ಈ ಕಾಯಿದೆಯು 2014 ರಲ್ಲಿ ಜಾರಿಗೆ ಬಂದಿದ್ದು, ಆರು ತಿಂಗಳವರೆಗೆ ಜೈಲು […]

Advertisement

Wordpress Social Share Plugin powered by Ultimatelysocial