ಎನ್ ಪಿ ಎ ಲಿಸ್ಟ್ ನಲ್ಲಿರುವ ಬ್ಯಾಂಕ್ ಖಾತೆಗಳನ್ನು ಟಾರ್ಗೆಟ್ ಮಾಡಿ ವಂಚನೆ !

 

ಬೆಂಗಳೂರು: ಎನ್ ಪಿ ಎ ಲಿಸ್ಟ್ ನಲ್ಲಿರುವ ಬ್ಯಾಂಕ್ ಖಾತೆಗಳನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ರಾಘವ್ ಲಾಲ್ ಹಾಗೂ ಪಿಳ್ಳೆ ಬಂಧಿತ ಆರೋಪಿಗಳು. ತಮ್ಮದೇ ಬ್ಯಾಂಕ್ ನ ಕೆಲ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿದ್ದ ಆರೋಪಿಗಳು ಎನ್ ಪಿ ಲಿಸ್ಟ್ ನಲ್ಲಿರುವ ಅಕೌಂಟ್ ಗಳನ್ನು ಪತ್ತೆ ಮಾಡಿ, 5 ಕೋಟಿ ರೂಪಾಯಿಗೂ ಹೆಚ್ಚು ಲೋನ್ ಪಡೆದ ಖಾತೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು.

ಬಳಿಕ ಖಾತೆ ಹೋಲ್ಡರ್ ಗೆ ಕರೆ ಮಾಡಿ ಕಡಿಮೆ ಹಣಕ್ಕೆ ಲೋನ್ ಕ್ಲೀಯರ್ ಮಾಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದರು.

ಸತೀಶನ್ ಎಂಬುವವರಿಗೆ ಆರೋಪಿಗಳು 82 ಲಕ್ಷ ವಂಚಿಸಿದ್ದರು. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿ‌ನ ಉತ್ತರ ಭಾಗದ ಹೆಬ್ಬಾಳ ಫ್ಲೈ ಓವರ್ ಅತಿ ಹೆಚ್ಚಿನದಾಗಿ ವಾಹನ ದಟ್ಟಣೆ ಕಂಡು ಬರುತ್ತಿದೆ.

Wed Jul 6 , 2022
  ಸಂಚಾರಿ ತಜ್ಞರ ತಂಡ ಬೆಂಗಳೂರಿನ ಕನಿಷ್ಠ 10 ಟ್ರಾಫಿಕ್ ಜಂಕ್ಷನ್ ಗಳ ಅಧ್ಯಯನ ಮಾಡಲಾಗಿದೆ. ಬೆಂಗಳೂರಿ‌ನ ಉತ್ತರ ಭಾಗದ ಹೆಬ್ಬಾಳ ಫ್ಲೈ ಓವರ್ ಅತಿ ಹೆಚ್ಚಿನದಾಗಿ ವಾಹನ ದಟ್ಟಣೆ ಕಂಡು ಬರುತ್ತಿದೆ.ಈವರೆಗೆ ಎರಡು ಅಧ್ಯಯನ ಮಾಡಲಾಗಿದೆ. ವಾಹನ ದಟ್ಟಣೆ ಎಷ್ಟು, ಪೀಕ್ ಅವರ್ ಎಷ್ಟು, ಹೊರ ರಾಜ್ಯದಿಂದ ಎಷ್ಟು ವೆಹಿಕಲ್ ಬರುತ್ತೆ ಅನ್ನೋದರ ಬಗ್ಗೆಯೂ ಸಂಚಾರಿ ತಜ್ಞರು ಅಧ್ಯಯನ ಮಾಡಲಾಗಿದೆ.ಫ್ಲೈ ಓವರ್ ಮೇಲೆ 45000 ವೆಹಿಕಲ್ ಗಳು ಸಂಚಾರ […]

Advertisement

Wordpress Social Share Plugin powered by Ultimatelysocial