ನಾಗಭೂಷಣ್ ಸೋಲೋ ಹೀರೋ ಆಗಿ ಫ್ಯಾಮಿಲಿ ಅಡಿಯನ್ಸ್ ಗೆ ಇಷ್ಟವಾಗುತ್ತಿದ್ದಾರೆ

ಬೆಂಗಳೂರು: ಹೀರೋ ಎಂದರೆ ಆಕರ್ಷಕ ವ್ಯಕ್ತಿತ್ವ ಬೇಕು, ಸಿಕ್ಸ್ ಪ್ಯಾಕ್ ಬೇಕು, ಏಕಕಾಲಕ್ಕೆ ನಾಲ್ಕು ವಿಲನ್ ಗಳನ್ನು ಹೊಡೆದು ಹಾಕಬೇಕು.. ಎಂಬಿತ್ಯಾದಿ ಸಿದ್ಧ ಸೂತ್ರಗಳನ್ನು ಮೀರಿ ಇಂದು ಸ್ಯಾಂಡಲ್ ವುಡ್ ನಲ್ಲಿ ಕೆಲವು ನಟರು ಕೇವಲ ತಮ್ಮ ಪ್ರತಿಭೆಯಿಂದ ಕ್ಲಿಕ್ಕಾಗುತ್ತಿದ್ದಾರೆ. ಅಂತಹವರಲ್ಲಿ ನಾಗಭೂಷಣ್ ಒಬ್ಬರು.
ಇಕ್ಕಟ್, ಬಡವ ರಾಸ್ಕಲ್ ಮುಂತಾದ ಸಿನಿಮಾಗಳಿಂದ ಜನರಿಗೆ ಇಷ್ಟವಾಗಿರುವ ನಾಗಭೂಷಣ್ ಈಗ ಸೋಲೋ ಹೀರೋ ಆಗಿ ಫ್ಯಾಮಿಲಿ ಅಡಿಯನ್ಸ್ ಗೆ ಇಷ್ಟವಾಗುತ್ತಿದ್ದಾರೆ. ಹೇಳಿಕೊಳ್ಳುವಷ್ಟು ಉದ್ದ-ಮೈಕಟ್ಟು ಇಲ್ಲದೇ ಇದ್ದರೂ ಈ ಸ್ಪುರದ್ರೂಪಿ ನಟ ಸಹಜ ಅಭಿನಯದಿಂದಲೇ ಮನಗೆಲ್ಲುತ್ತಿದ್ದಾರೆ.
ಇತ್ತೀಚೆಗೆ ವೂಟ್ ಆಪ್ ನಲ್ಲಿ ಪ್ರಸಾರವಾದ ಹನಿಮೂನ್ ಎಕ್ಸ್ ಪ್ರೆಸ್ ಎಂಬ ವೆಬ್ ಸರಣಿಯಲ್ಲೂ ನಟಿಸಿ ರೊಮ್ಯಾಂಟಿಕ್ ಪಾತ್ರಗಳನ್ನೂ ನಿಭಾಯಿಸಬಲ್ಲೆ ಎಂದು ಭರವಸೆ ಮೂಡಿಸಿದ್ದಾರೆ. ಮಲಯಾಳಂ ಸಿನಿಮಾಗಳಲ್ಲಿ ವ್ಯಕ್ತಿಗಿಂತ ಅಭಿನಯ ಮುಖ್ಯ ಎಂಬ ಟ್ರೆಂಡ್ ಎಷ್ಟೋ ಸಮಯದಿಂದ ಚಾಲ್ತಿಯಲ್ಲಿದೆ. ಅಲ್ಲಿ ಹೀರೋಗಳು ಆಕರ್ಷಕವಾಗಿರಲೇಬೇಕೆಂಬ ನಿಯಮವಿಲ್ಲ. ನಾಗಭೂಷಣ್ ರಂತಹ ಕಲಾವಿದರು ಕನ್ನಡದಲ್ಲಿ ಕ್ಲಿಕ್ ಆಗುತ್ತಿರುವುದು ನೋಡಿದರೆ ಆ ಮಾತು ಇಲ್ಲೂ ನಿಜವಾಗುತ್ತಿದೆ ಎನ್ನಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಖ್ಯಾತನ ನಟ ಚಿಯನ್‌ ವಿಕ್ರಂಗೆ ಹೃದಯಘಾತ!

Fri Jul 8 , 2022
ಚನ್ನೈ: ತಮಿಳಿನ ಖ್ಯಾತನ ನಟ ಚಿಯನ್‌ ವಿಕ್ರಂಗೆ ಹೃದಯಘಾತವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಅಂತ ತಿಳಿದು ಬಂದಿದೆ. ಚಿಯಾನ್ ವಿಕ್ರಮ್ ಅವರಿಗೆ ಇಂದು, ಜುಲೈ 8 ರಂದು ಹೃದಯಾಘಾತವಾಗಿದ್ದು, ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯು ಇನ್ನೂ ಹೆಚ್ಚಿನ ಮಾಹಿತಿಯನ್ನು ಕಾಯಲಾಗುತ್ತಿದೆ. ಅವರು ತಮ್ಮ ಮುಂಬರುವ ಚಿತ್ರ ಪೊನ್ನಿಯಿನ್ ಸೆಲ್ವನ್ ನ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಬೇಕಾಗಿತ್ತು, ಇದು ಇಂದು […]

Advertisement

Wordpress Social Share Plugin powered by Ultimatelysocial