ನಮ್ಮ ಬೆರಳಿನ ಉಗುರುಗಳು ಆರೋಗ್ಯ ಮತ್ತು ಸೌಂದರ್ಯದ ಪ್ರತೀಕದಂತಿದೆ.

ನಮ್ಮ ಬೆರಳಿನ ಉಗುರುಗಳು ಆರೋಗ್ಯ ಮತ್ತು ಸೌಂದರ್ಯದ ಪ್ರತೀಕದಂತಿದೆ. ತಿಂಗಳಿಗೆ ಸರಾಸರಿ 3.47 ಮಿಲಿ ಮೀಟರ್​ನ ಹತ್ತನೇ ಒಂದು ಭಾಗದಷ್ಟು ಉಗುರ ಬೆಳೆಯುತ್ತದೆ. ಕೆರಾಟಿನ್ ಎನ್ನುವ ಗಟ್ಟಿಯಾದ ಪ್ರೊಟೀನ್​​ ನಮ್ಮ ಉಗುರಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಉಗುರಿನ ಆರೋಗ್ಯದ ಮೇಲೆ ನಮ್ಮ ದೈಹಿಕ ಆರೋಗ್ಯವೂ ನಿರ್ಧರಿತವಾಗುತ್ತದೆ.

ಉಗುರುಗಳು ಒರಟಾಗಿರದೇ ನಯವಾಗಿ ಮತ್ತು ದೃಢವಾಗಿರಬೇಕು. ಬಣ್ಣದಲ್ಲೂ ಯಾವ ವ್ಯತ್ಯಾಸಗಳಿರಬಾರದು. ಇವು ಆರೋಗ್ಯಕರ ಉಗುರಿನ ಲಕ್ಷಣವಾಗಿದೆ. ಇನ್ನೂ ನೀವು ಉಗುರು ಬೆಳೆಸಿ ಅಂದವಾಗಿಟ್ಟುಕೊಳ್ಳಬೇಕು ಎನ್ನುವ ಯೋಜನೆಯಲ್ಲಿದ್ದರೆ ಈ ಟಿಪ್ಸ್​ಗಳನ್ನು ಅನುಸರಿಸಬಹುದು.

1. ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿ ಸೆಲೆನಿಯಮ್ ಅಂಶ ಹೇರಳವಾಗಿದ್ದು ಬೇಗನೇ ಉಗುರು ಬೆಳೆಯಲು ನೆರವಾಗುತ್ತದೆ. ಆದ್ದರಿಂದ ಆಗಾಗ ಬೆಳ್ಳಿಳ್ಳಿ ಬಿಡಿಸುವುದು ನಿಮ್ಮ ಉಗುರಿಗೆ ಒಂದು ರೀತಿ ಮಸಾಜ್​ನಂತೆಯೇ ಇರುತ್ತದೆ.

2. ಕೊಬ್ಬರಿ ಎಣ್ಣೆ : ಕೊಬ್ಬರಿ ಎಣ್ಣೆಯಲ್ಲಿ ಉಗುರುಗಳನ್ನು ಮಸಾಜ್ ಮಾಡುವುದು ಬಹಳ ಮುಖ್ಯವಾಗುತ್ತದೆ. ಈ ರೀತಿ ಮಾಡುವುದರಿಂದ ವೇಗವಾಗಿ ಉಗುರು ಬೆಳೆಯುತ್ತದೆ.

3. ಗ್ರೀನ್ ಟೀ : ಗ್ರೀನ್​ ಟೀ ಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಇದು ಉಗುರು ಕೀಳುವುದನ್ನು ತಡೆಯುವುದಲ್ಲದೇ ಉಗುರಿನ ದೃಢತೆ ಹೆಚ್ಚಿಸುತ್ತದೆ. ವಾರಕ್ಕೊಮ್ಮೆ ಗ್ರೀನ್ ಟೀಯಿಂದ ಉಗುರುಗಳಿಗೆ ಮಸಾಜ್ ನೀಡುವುದು ಪ್ರಯೋಜನಕಾರಿ.

4. ಮೊಟ್ಟೆ : ಮೊಟ್ಟೆಯಲ್ಲಿ ಸಲ್ಫರ್​ ಅಂಶ ಹೇರಳವಾಗಿರುವ ಕಾರಣ ಉಗುರು ಬಹಳ ಬೇಗನೇ ಬೆಳವಣಿಗೆ ಕಾಣುತ್ತದೆ. ಈ ನಿಟ್ಟಿನಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಉಗುರಗಳ ಮಸಾಜ್​ಗೆ ಬಳಸಬಹುದು. ಇದರಿಂದ ಉಗುರಿನ ಹೊಳಪು ಕೂಡ ಹೆಚ್ಚಾಗುತ್ತದೆ.

5. ಅಲೋವೆರಾ : ಅಲೋವೆರಾ ನಿಮ್ಮ ಉಗುರುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆ ಮೂಲಕ ಉಗುರು ಅತ್ಯಂತ ವೇಗವಾಗಿ ಬೆಳೆಯುತ್ತದೆ. ಆಕರ್ಷಕ ಉಗುರು ನಿಮ್ಮದಾಗುತ್ತದೆ.

6. ಶಿಯಾ ಬಟರ್ : ವಾರದಲ್ಲಿ ಒಮ್ಮೆ ಅಥವಾ 2 ಬಾರಿ ಶಿಯಾ ಬಟರ್​ ಅನ್ನು ನಿಮ್ಮ ಉಗುರುಗಳಿಗೆ ಲೇಪಿಸಿ ಮಸಾಜ್ ಮಾಡಿಕೊಳ್ಳಿ. ಇದು ಉಗುರಿನ ಆರೋಗ್ಯಕ್ಕೆ ಪ್ರಯೋಜನಕಾರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದೇ ಪರಿಗಣಿಸಲಾಗುತ್ತದೆ.

Thu May 5 , 2022
ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದೇ ಪರಿಗಣಿಸಲಾಗುತ್ತದೆ. ಆದರೆ ಆಲೂಗಡ್ಡೆಯನ್ನು ಅತಿಯಾಗಿ ಸೇವಿಸಿದ್ರೆ ಅಪಾಯ ಗ್ಯಾರಂಟಿ. ಆಲೂಗಡ್ಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಬೊಜ್ಜಿನ ಸಮಸ್ಯೆ ಬರಬಹುದು, ಮಧುಮೇಹಕ್ಕೂ ಇದು ಕಾರಣವಾಗಬಹುದು. ಆಲೂಗಡ್ಡೆಯನ್ನು ಅತಿಯಾಗಿ ತಿಂದರೆ ಅಲರ್ಜಿ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಆಲೂಗಡ್ಡೆಯಲ್ಲಿರುವ ಕಾರ್ಬೋಹೈಡ್ರೇಟ್ ಸಂಧಿವಾತದ ನೋವನ್ನು ಸಹ ಹೆಚ್ಚಿಸುತ್ತದೆ. ಹಾಗಾಗಿ ಸಂಧಿವಾತದ ಸಮಸ್ಯೆ ಇರುವ ರೋಗಿಗಳು ಹೆಚ್ಚು ಆಲೂಗಡ್ಡೆ ಸೇವಿಸಬಾರದು. ಆಲೂಗಡ್ಡೆಯ ಅತಿಯಾದ ಸೇವನೆಯು ಮಧುಮೇಹಿಗಳ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ […]

Advertisement

Wordpress Social Share Plugin powered by Ultimatelysocial