ವಿಜಯೇಂದ್ರ ಗೆ ಎಂಎಲ್ಸಿ ಸ್ವಾನ ತಪ್ಪಿದ್ದು ಒಂದ್ಕಡೆ ಅಸಮಾಧಾನ ವಾದರೆ ಮತ್ತೊಂದೆಡೆ ಖುಷಿ ಆಗ್ತಿದೆ…ಶಾಸಕ ಹರ್ಷವರ್ಧನ್ ಹೀಗೆ ಹೇಳಿದ್ದು ಯಾಕೆ ಗೊತ್ತಾ…?

ವಿಧಾನಪರಿಷತ್ ನಾಮನಿರ್ದೇಶಿತ ಸ್ಥಾನ ವಿಜಯೇಂದ್ರ ಅವರ ಕೈ  ತಪ್ಪಿದೆ.ಹೈ ಕಮ್ಯಾಂಡ್ ವಿಜಯೇಂದ್ರ ಪರ ಒಲವು ತೋರಿಸಿಲ್ಲ.ವಿಜಯೇಂದ್ರ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ.ಆದ್ರೆ ನಂಜನಗೂಡು ಶಾಸಕ ಹರ್ಷವರ್ಧನ್ ತಮ್ಮದೇ ಆದ ದೃಷ್ಟಿ ಕೋನದಲ್ಲಿ ಈ ಬೆಳವಣಿಗೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಂಜನಗೂಡಿನಲ್ಲಿ ದರ್ಶನ ಪದವೀಧರ ಕ್ಷೇತ್ರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ್ದು ಒಂದು ಕಡೆ ಅಸಮಾಧಾನ ಇನ್ನೊಂದೆಡೆ ಖುಷಿಯಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.ವಿಜಯೇಂದ್ರ ಭವಿಷ್ಯದ ನಾಯಕರು.ವರುಣಾಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಬೇಡಿಕೆ ಇದೆ.ವಿಧಾನಸಭೆ ಪ್ರವೇಶಿಸಬೇಕೆನ್ನುವುದು ಅಲ್ಲಿನ ಜನರ ಆಕಾಂಕ್ಷೆ.ವರಣಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆನ್ನುವುದೂ ಸಹ ನಮ್ಮ ಅಭಿಪ್ರಾಯ.ಈ ಹಿನ್ನಲೆ ಎಂಎಲ್ಸಿ ಸ್ಥಾನ ಕೈ ತಪ್ಪಿದ್ದು ಒಂದು ಕಡೆ ಖುಷಿಯೇ ಆಗಿದೆ.ಇಂದು ಹಿನ್ನಡೆ ಆಗಿರಬಹುದು. ಆದ್ರೆ ವಿಜಯೇಂದ್ರ ಶಕ್ತಿ ಬಗ್ಗೆ ಎಲ್ಲರಿಗೂ ತಿಳಿದಿದೆ ಮುಂದೆ ಅವರಿಗೆ ಉತ್ತಮ ಭವಿಷ್ಯವಿದೆ ಯುವ ನಾಯಕರಾಗಿರುವ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದರು .ಉಪಚುನಾವಣೆಯಲ್ಲಿ ಅವರ ಪಾತ್ರ ಹೇಗಿತ್ತು ಅಂತ ಎಲ್ಲರಿಗೂ ಗೊತ್ತಿದೆ.ರಾಜ್ಯದಲ್ಲಿ ಸರ್ಕಾರ ಇದೆ ಅಂದ್ರೆ ಅದು ವಿಜಯೇಂದ್ರ ರಿಂದಲೇ.ಆದ್ರಿಂದ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಸ್ಪರ್ಧಿಸಿದ್ರೆ ಬಹಳ ಸಂತೋಷ ಎಂದು ಎಂಎಲ್ಸಿ ಸ್ಥಾನ ಕೈ ತಪ್ಪಿದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಗಲಕೋಟೆ ವಿಭಾಗೀಯ ನಿಯಂರ್ತಣಾಧಿಕಾರಿಗಳ ಕಚೇರಿಯ ಮೇಲೆ ಎಸಿಬಿ ದಾಳಿ

Tue May 24 , 2022
  ಬಾಗಲಕೋಟೆ- 24, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗೀಯ ನಿಯಂರ್ತಣಾಧಿಕಾರಿಗಳ ಕಚೇರಿಯ ಮೇಲೆ ಎಸಿಬಿ ದಾಳಿ ನಡೆದಿದೆ. ಮಂಗಳವಾರ ಕಚೇರಿಗೆ ಮೇಲೆ ದಾಳಿ ನಡೆಸಿದ ಎಸಿಬಿ ಅವರು, ಸಂಸ್ಥೆಯ ಸಿಬ್ಬಂದಿ ರಹಮಾನ ಕುರಹಟ್ಟಿ ಎಂಬುವರು ಲಂಚ ಸ್ವೀಕರಿಸುತ್ತಿದ್ದ ಎಸಿಬಿ ಬಲೆಗೆ ಬಿದ್ದಿದ್ದಾರೆಂದು ವರದಿಯಾಗಿದೆ.ಚಾಲಕ ಕಂ ನಿರ್ವಾಹಕರಾಗಿದ್ದ ಶರಣಪ್ಪ ಕಳ್ಳಿಗುಡ್ಡ ಅವರಿಂದ 35 ಸಾವಿರ ರೂ. ಲಂಚ ಪಡೆಯುವ ವೇಳೆ ಎಸಿಬಿ ದಾಳಿ ಮಾಡಿದ್ದು, ಅಮಾನತ್ತು […]

Advertisement

Wordpress Social Share Plugin powered by Ultimatelysocial