ನಂಜನಗೂಡು :ಶಾಸಕ ಹರ್ಷವರ್ಧನ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಂಸದ ಆರ್ .ಧ್ರುವನಾರಾಯಣ್

ಶಾಸಕ ಹರ್ಷವರ್ಧನ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಂಸದ ಆರ್ .ಧ್ರುವನಾರಾಯಣ್

ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ವೈನ್ ಸ್ಟೋರ್ ಗಳನ್ನು ಸ್ಥಾಪನೆ ಮಾಡಿರುವುದೇ ನಂಜನಗೂಡು ಶಾಸಕರ ಸಾಧನೆ

ಮೈಸೂರು ಜಿಲ್ಲೆಯಲ್ಲಿಯೇ ನಂಜನಗೂಡು ವಿಧಾನಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ವೈನ್ ಸ್ಟೋರ್ ಗಳು ಸ್ಥಾಪನೆಯಾಗಿವೆ

ತಾಲ್ಲೂಕಿನ ಹೋಬಳಿ ಕೇಂದ್ರಕ್ಕೆ 3-4ಮದ್ಯದಂಗಡಿ ಸ್ಥಾಪನೆ ಮಾಡಿರುವದೇ ಶಾಸಕ ಹರ್ಷವರ್ಧನ್ ಅವರ ಸಾಧನೆ

ತಾಲ್ಲೂಕಿನಲ್ಲಿ ಎಲ್ಲಿ ನೋಡಿದರೂ ಕೂಡ ಮದ್ಯದಂಗಡಿಗಳೇ ರಾರಾಜಿಸುತ್ತಿವೆ

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ

ಇಂತಹ ಸುಸಂದರ್ಭದಲ್ಲಿ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಮಾಡಬಹುದಿತ್ತು

ಉತ್ತಮ ಆಸ್ಪತ್ರೆ,ದೊಡ್ಡ ಮಟ್ಟದಲ್ಲಿ ಶಾಲಾ ಕಾಲೇಜುಗಳ ನಿರ್ಮಾಣ ಮಲ್ಟಿಸ್ಪೆಷಲಿಸ್ಟ್ ಸೇವೆಗಳು ಸಿಗುವ ರೀತಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬಹುದಿತ್ತು

ಕೆರೆಗಳಿಗೆ ನೀರು ತುಂಬಿಸುವ ಯೋಜನೆ,ರೈತರ ಭೂಮಿಗೆ ಕೊಳವೆಬಾವಿಗಳ ಸೌಲಭ್ಯ
ಎಸ್ಸಿ ಎಸ್ಟಿ ಹಿಂದುಳಿದ ಜನರಿಗೆ ಉತ್ತಮವಾದ ಸೇವೆಯನ್ನು ಒದಗಿಸಬಹುದಿತ್ತು

ಆದರೆ ಯಾವುದೇ ಉತ್ತಮ ಸೇವೆಗಳನ್ನು ನಂಜನಗೂಡಿನ ಜನತೆಗೆ ಶಾಸಕ ಹರ್ಷವರ್ಧನ್ ನೀಡಲಿಲ್ಲ

ತಾಲ್ಲೂಕಿನಾದ್ಯಂತ ವೈನ್ಸ್ ಸ್ಟೋರ್ ಗಳ ಸ್ಥಾಪನೆಗೆ ಮಾತ್ರ ಹೆಚ್ಚು ಮಾನ್ಯತೆ ನೀಡಿ ಎಲ್ಲಿ ನೋಡಿದರೂ ವೈನ್ ಸ್ಟೋರ್ ಗಳೇ ಕಾಣಸಿಗುತ್ತಿವೆ ಎಂದು ಅಲ್ಲಗಳೆದರು

ಶಾಸಕ ಹರ್ಷವರ್ಧನ್ ವಿರುದ್ಧ ಚಾಟಿ ಬೀಸಿದ ಮಾಜಿ ಸಂಸದ ಆರ್ ಧ್ರುವನಾರಾಯಣ್

ನಂಜನಗೂಡು ಪಟ್ಟಣದ ಮಹದೇಶ್ವರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಹಾಯ್ದ ಮಾಜಿ ಸಂಸದರು

ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿಯನ್ನು ಮುಖಂಡರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಕ್ರೋಶ ಹೊರಹಾಕಿದ ಮಾಜಿ ಸಂಸದ

ಕೇಂದ್ರ ಹಾಗೂ ರಾಜ್ಯ ದಲ್ಲಿಯೂ ಕೂಡ ಉತ್ತಮ ಆಡಳಿತವನ್ನು ಬಿಜೆಪಿ ಸರ್ಕಾರ ಕೊಟ್ಟಿಲ್ಲ

ಈಗಾಗಲೇ ದೇಶಾದ್ಯಂತ 40%ಸರ್ಕಾರ ಎಂದು ಜನರ ಬಾಯಿ ಮಾತಾಗಿದೆ

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ದೇಶದ ಜನರು ಶಾಪಹಾಕುತ್ತಿದ್ದಾರೆ ಎಂದರು

ದೊಡ್ಡ ಮಟ್ಟದ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಮೋದಿ ಹಾಗೂ ಕೇಂದ್ರ ಸರ್ಕಾರಗಳು ಭ್ರಷ್ಟಾಚಾರದ ಕೂಪವಾಗಿದೆ

ಕೇಂದ್ರ ರಾಜ್ಯದಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ತಾಂಡವ ಆಡುತ್ತಿದೆ

ರಾಜ್ಯದ ಬೊಮ್ಮಾಯಿ ಸರ್ಕಾರ ಉತ್ತಮ ಆಡಳಿತ ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ

ಮುಂಬರುವ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ

ನಂಜನಗೂಡಿನಲ್ಲಿ ಮಾಜಿ ಸಂಸದ ಆರ್ ಧ್ರುವನಾರಾಯಣ್ ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿದರು

ಅತಿ ಹೆಚ್ಚು ಡಿಜಿಟಲ್ ನೋಂದಣಿ ಮಾಡಿದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಶಾಲು ಹೊದಿಸಿ ಸನ್ಮಾನಿಸಿದರು

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಬ್ಲಾಕ್ ಅಧ್ಯಕ್ಷರುಗಳಾದ ಶಂಕರ್ ಮಹೇಶ್ ಶ್ರೀಕಂಠ ನಾಯಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲತಾ ಸಿದ್ದಶೆಟ್ಟಿ ವಕೀಲ ನಾಗರಾಜಯ್ಯ ಸೇರಿದಂತೆ ಮತ್ತಿತರ ಮುಖಂಡರು ಹಾಜರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿ Exclusive... ಶಾಲಾ ಮಕ್ಕಳಿಗೆ ಗಣಿತ ವಿಷಯ ಅರ್ಥವಾಗುತ್ತಿಲ್ಲ ಎಂದು ಪ್ರತಿಭಟನೆ...

Mon Jul 18 , 2022
ಯಾದಗಿರಿ ಜಿಲ್ಲೆಯ ಅರಕೇರಾ ಗ್ರಾಮದಲ್ಲಿ ಘಟನೆ.. ಗಣಿತ ವಿಷಯ ಅರ್ಥವಾಗುತ್ತಿಲ್ಲ ಎಂದು ಮಕ್ಕಳು ಪ್ರಾಂಶುಪಾಲರಿಗೆ ಮನವಿ… ಶೈಲಜಾ ಎಂಬ ಗಣಿತ ತರಗತಿಯ ಟೀಚರ್ ಗೆ ಟೀಚಿಂಗ್ ಮಾಡಲು ಬರುವುದಿಲ್ಲ ಎಂದು ವಿದ್ಯಾರ್ಥಿಗಳ ಆಕ್ರೋಶ.. ವಿದ್ಯಾರ್ಥಿಗಳಿಗೆ ಶೈಲಜಾ ಆವಾಜ್ …ಯಾರಿಗೆ ಬೇಕಾದರೂ ಕಂಪ್ಲೀಟ್ ಕೊಡಿ …. ದಿನಾಪೂರ್ತಿ ವಿದ್ಯಾರ್ಥಿಗಳು ಧರಣಿ.. ಗಣಿತ ಶಾಸ್ತ್ರದ ಟೀಚರ್ ಗೆ ಗ್ರಾಮ ಪಂಚಾಯತ ಸದಸ್ಯರ ಬೆಂಬಲ ಇದೆ ಎಂದು ದರ್ಪ.. ಡಿಡಿಪಿಐ ಹಾಗೂ ಬಿಇಒ ಅಧಿಕಾರಿಗಳು […]

Advertisement

Wordpress Social Share Plugin powered by Ultimatelysocial