ಎಲೆಕ್ಟ್ರಾ ಇವಿ ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ರತನ್ ಟಾಟಾ ಅವರಿಗೆ ನೀಡಿದೆ.

ರತನ್‌ ಟಾಟಾ ಅವರು ಭಾರತದ ಖ್ಯಾತ ಉದ್ಯಮಿ ಜೊತೆಗೆ ದೇಶ ಕಂಡ ಉದಾರಿ ಉದ್ಯಮಿ ಎಂದು ಜನಪ್ರಿಯರಾಗಿದ್ದಾರೆ. ಉದ್ಯಮಿ ಎಂದರೆ ಹಣ ಕೊಳ್ಳೆ ಹೊಡೆಯವವ ಎಂಬ ಭಾವನೆ ಮೂಡಿರುವ ಈ ಸಂದರ್ಭದಲ್ಲಿ ಭಿನ್ನವಾಗಿ ಕಾಣುತ್ತಾರೆ ರತನ್‌ ಟಾಟಾಕೊರೊನಾ ವಿರುದ್ಧ ಹೋರಾಡಲು ಸಾವಿರಾರು ಕೋಟಿ ರೂಪಾಯಿ ದೇಣಿಗೆ ನೀಡಿದ್ದ ರತನ್‌ ಟಾಟಾ ದೇಶದ ವಿಷಯದಲ್ಲಿ, ಸಾಮಾಜಿಕ ಸಮಸ್ಯೆಗಳ ವಿಚಾರದಲ್ಲಿ ಯಾವಾಗಲೂ ಉದಾರಿಯ ಆಗಿರುತ್ತಾರೆ ಹೀಗಾಗಿ ಇವರು ಕೇವಲ ಉದ್ಯಮಿ ಎಂದಷ್ಟೇ ಗುರುತಿಸದೆ, ಒಬ್ಬ ಉದಾರಿ ಸಮಾಜ ಸೇವಕನಾಗಿ ದೇಶದ ಜನಮಾನಸದಲ್ಲಿ ಉಳಿದಿದ್ದಾರೆ.ಇಷ್ಟೇ ಅಲ್ಲದ ಯುವಕರ ಸ್ಟಾರ್ಟ್‌ಅಪ್‌ಗೆ ಬೆಂಬಲವಾಗಿ ನಿಂತು ಅವರ ಕನಸನ್ನು ಸಾಕಾರಗೊಳಿಸುವಲ್ಲಿ ನೆರವಾಗಿರುವ ಅಪರೂಪದ ಉದ್ಯಮಿಯಾಗಿದ್ದಾರೆ.ಇದೀಗ ರತನ ಟಾಟಾ ಹೂಡಿಕೆ ಮಾಡಿರುವ ಎಲೆಕ್ಟ್ರಾ ಇವಿ ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ರತನ್ ಟಾಟಾ ಅವರಿಗೆ ನೀಡಿದೆ. ಇದೇ ಎಲೆಕ್ಟ್ರಾ ಇವಿ ಸ್ಟಾರ್ಟ್‌ಅಪ್ ಟಾಟಾ ಮೋಟಾರ್ಸ್ ಸಂಸ್ಥೆಯ ಜನಪ್ರಿಯ ನ್ಯಾನೋ ಆಧಾರಿತ ಎಲೆಕ್ಟ್ರಿಕ್ ವಾಹನವನ್ನು ನಿರ್ಮಿಸಿದೆ.ರತನ್ ಟಾಟಾಗಾಗಿ ವಿನ್ಯಾಸ, ಒಳಭಾಗದ ಸೇರಿದಂತೆ ಹಲವು ಮಾಡಿಫಿಕೇಶನ್ ಮಾಡಲಾಗಿದೆ. ವಿಶೇಷತೆ ಏನೆಂದರೆ, ಎಲೆಕ್ಟ್ರಾ ಇವಿ ಅಭಿವೃದ್ಧಿಪಡಿಸಿದ ಕಸ್ಟಮ್ ಬಿಲ್ಟ್ ನ್ಯಾನೋ ಎಲೆಕ್ಟ್ರಿಕ್ ವಾಹನವವನ್ನು ರತನ್ ಟಾಟಾ ಅವರೇ ತೆರಳಿ ವಿತರಣೆಯನ್ನು ಪಡೆದಿದ್ದಾರೆಎಲೆಕ್ಟ್ರಾ ಇವಿ ಹಳೆ ಇಂಧನ ವಾಹನಗಳನ್ನು ಎಲಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಲು ಬೇಕಾಗ ಟೆಕ್ನಾಲಜಿ ಕಿಟ್ ಅಭಿೃದ್ಧಿಪಡಿಸುತ್ತಿದೆ. ಇದೆ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾ ಇವಿ ಟಾಟಾ ನ್ಯಾನೋ ಕಾರನ್ನು ಅಭಿವೃದ್ಧಿಪಡಿಸಿದೆ. ರತನ್ ಟಾಟಾಗೆ ನೀಡಲಾಗಿರುವ ಮಾಡಿಫಿಕೇಶನ್ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಒಂದು ಪೂರ್ತಿಯಾಗಿ ಬಾರಿ ಚಾರ್ಜ್ ಮಾಡಿದರ 160 ಕಿ.ಮೀ ಮೈಲೇಜ್ ನೀಡಲಿದೆ ಎಂದು ಹೇಳಲಾಗುತ್ತಿದೆ.ಟಾಟಾ ನ್ಯಾನೋ ಇವಿ 160 ಕಿಲೋಮೀಟರ್‌ಗಳ ಡ್ರವಿಂಗ್ ರೇಂಜ್ ಅನ್ನು ಹೊಂದುವ ನಿರೀಕ್ಷೆಯಿದೆ ಮತ್ತು ಇದು 0-60 ಕಿಮೀ ಗಂಟೆಗೆ ಕೇವಲ 10 ಸೆಕೆಂಡ್‌ಗಳಿಗಿಂತ ಕಡಿಮೆಯಿರುತ್ತದೆ. . ಟಾಟಾ ನ್ಯಾನೋ ಮತ್ತೆ ಎಲೆಕ್ಟ್ರಿಕ್ ಕಾರ್ ಆಗಿ ಬಂದರೆ, ಪರಿಸರಕ್ಕೆ ಹಾನಿಯಾಗದಂತೆ ಇದು ಪರಿಪೂರ್ಣ ಸಿಟಿ ಕಾರ್ ಎಂದು ಸಾಬೀತುಪಡಿಸುತ್ತದೆ ಎಂದು ನಾವು ಊಹಿಸುತ್ತೇವೆ.ಎಲೆಕ್ಟ್ರಾ ಇವಿ ಕಸ್ಟಮ್-ನಿರ್ಮಿತ ನ್ಯಾನೋ ಇವಿಗಾಗಿ 72V ಆರ್ಕಿಟೆಕ್ಚರ್ ಅನ್ನು ಬಳಸಿದೆ. ಈ ಆರ್ಟಿಟೆಕ್ನಚರ್ ಎಲೆಕ್ಟ್ರಾ ಇವಿ ಟಿಗೊರ್ ಇವಿ (ಟ್ಯಾಕ್ಸಿ ಆವೃತ್ತಿ) ಯಿಂದ 140 ಕಿಮೀ ರೇಂಜ್ ಅನ್ನು ವಿಸ್ತರಿಸಲು ಮತ್ತು ಡ್ರೈವಿಂಗ್ ರೇಂಜ್ ಅನ್ನು ಹೆಚ್ಚಿಸಲು ವಿನ್ಯಾಸವನ್ನು ಮಾರ್ಪಡಿಸಲು ಸಹಾಯ ಮಾಡಿತು.  ಆವೃತ್ತಿಯ ರೇಂಜ್ ಪವರ್‌ಟ್ರೇನ್‌ಗೆ ಯಾವುದೇ ಬದಲಾವಣೆಗಳನ್ನು ಮಾಡದೆಯೇ 213 ಕಿಮೀಗಳಿಗೆ ಹೆಚ್ಚಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರದಲ್ಲಿ ಮದ್ಯ ಏಕೆ ದುಬಾರಿಯಾಗಿದೆ? ಕುಡಿಯುವ ಪರವಾನಗಿ ಏಕೆ?

Sat Feb 12 , 2022
  ಟಿಪ್ಲರ್‌ಗಳಿಂದ ಹೆಚ್ಚು ಸ್ವಾಗತಿಸಲ್ಪಟ್ಟ ಮಹಾರಾಷ್ಟ್ರವು ಇತ್ತೀಚೆಗೆ ತನ್ನ ಮದ್ಯ ಖರೀದಿ ನಿಯಮಗಳಲ್ಲಿ ಕೆಲವು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಹೆಚ್ಚಿನ ರಾಜ್ಯಗಳಿಗೆ, ಕುಡಿಯುವ ವಯಸ್ಸು ಹೆಚ್ಚಿನ ಮಾನದಂಡವಾಗಿದೆ, ಮಹಾರಾಷ್ಟ್ರದಲ್ಲಿ ದೃಶ್ಯವು ತುಲನಾತ್ಮಕವಾಗಿ ವಿಭಿನ್ನವಾಗಿದೆ. ಇದರ ಶ್ರೇಯವು ರಾಜ್ಯದ ಅಬಕಾರಿ ಮತ್ತು ನಿಷೇಧ ಕಾನೂನಿಗೆ ಸಲ್ಲುತ್ತದೆ, ಇದನ್ನು ಭಾರತದಲ್ಲಿ ಅತ್ಯಂತ ಕಠಿಣವೆಂದು ಪರಿಗಣಿಸಲಾಗಿದೆ. ಉದ್ಧವ್ ಠಾಕ್ರೆ ಸರ್ಕಾರವು ಇತ್ತೀಚೆಗೆ ಗ್ರಾಹಕರಿಗೆ ವೈನ್ ಮಾರಾಟ ಮಾಡಲು ಸೂಪರ್ಮಾರ್ಕೆಟ್ಗಳು ಮತ್ತು ವಾಕ್-ಇನ್ ಸ್ಟೋರ್ಗಳಿಗೆ ಅನುಮತಿ ನೀಡಿದೆ. […]

Advertisement

Wordpress Social Share Plugin powered by Ultimatelysocial