ನಟ ಅಶ್ವಥ್ ನಾರಾಯಣ ಇಂದು ಇನ್ನಿಲ್ಲವಾಗಿದ್ದಾರೆ!

ಬೆಂಗಳೂರು: ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಸ್ಯಾಂಡಲ್ ವುಡ್ ಹಿರಿಯ ನಟ ಅಶ್ವಥ್ ನಾರಾಯಣ  ಇಂದು ಇನ್ನಿಲ್ಲವಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಹಿರಿಯ ನಟ ವಿಧಿವಶರಾಗಿದ್ದಾರೆ.ಕನ್ನಡದ ಹಲವು ನಟರೊಂದಿಗೆ, ನಟಿಯರೊಂದಿಗೆ ವಿಶಿಷ್ಠ ನಟನೆಯ ಮೂಲಕ ಗುರ್ತಿಸಿಕೊಂಡಿದ್ದಂತವರು ನಟ ಅಶ್ವಥ್ ನಾರಾಯಣ್ ಅವರಾಗಿದ್ದರು.ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಅಶ್ವಥ್ ನಾರಾಯಣ್, ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇದೀಗ ಅವರ ಬೆಂಗಳೂರಿನ ನಿವಾಸದಲ್ಲಿ ಹಿರಿಯ ನಟ ಅಶ್ವಥ್ ನಾರಾಯಣ್ ನಿಧನರಾಗಿದ್ದಾರೆ. ಈ ಮೂಲಕ ಬಾರದ ಲೋಕಕ್ಕೆ ತೆರಳಿದ್ದಾರೆ.ಅಂದಹಾಗೇ, ಕಳೆದ ಕೆಲ ದಿನಗಳ ಹಿಂದಷ್ಟೇ, ನನ್ನ ಕುಟುಂಬಸ್ಥರು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ನಟ ಅಶ್ವಥ್ ನಾರಾಯಣ್   ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ಸಂಬಂಧ ತಮ್ಮ ಎರಡನೇ ಪುತ್ರಿಯ ಜೊತೆಗೆ ಬಸವೇಶ್ವರ ನಗರ ಠಾಣೆಗೆ ತೆರಳಿದಂತ ಹಿರಿಯ ನಟ ಅಶ್ವಥ್ ನಾರಾಯಣ್ ಅವರು, ನನ್ನಗೆ ಬಂದ ಹಣವನ್ನು ಕೊಟ್ಟಿಲ್ಲ. ಕೇಳಿದ್ರೆ ಹಲ್ಲೆ ಮಾಡ್ತಾ ಇದ್ದಾರೆ. ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬುದಾಗಿ ದೂರು ನೀಡಿದ್ದರು.ಆದ್ರೇ.. ಹಿರಿಯ ನಟ ಅಶ್ವಥ್ ನಾರಾಯಣ್ ಮಾಡಿರೋ ಆರೋಪಕ್ಕೆ ಪ್ರತಿಕ್ರಿಯಿಸಿರುವಂತ ಕುಟುಂಬಸ್ಥರು, ಅವರನ್ನು ಸರಿಯಾಗಿಯೇ ನೋಡಿಕೊಳ್ಳಲಾಗುತ್ತಿದೆ. ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ. ಅವರು ನೀಡಿರುವಂತ ದೂರು ಸತ್ಯಕ್ಕೆ ದೂರವಾಗಿರೋದಾಗು ಎಂಬುದಾಗಿ ತಿಳಿಸಿದ್ದರು.ಹೀಗೆ ಕೌಟುಂಬಿಕ ಜಗಳ ಮೂಲಕ ಸುದ್ದಿಯಾಗಿದ್ದಂತ ಹಿರಿಯ ನಟ ಅಶ್ವಥ್ ನಾರಾಯಣ್ ಅವರು ಇಂದು ನಿಧನರಾಗಿರೋದಾಗಿ ತಿಳಿದು ಬಂದಿದೆ. ಈ ಮೂಲಕ ಹಿರಿಯ ನಟ ಅಗಲಿರೋದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದಂತ ನಷ್ಟವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1.07 ಲಕ್ಷ ಹೊಸ ಕೋವಿಡ್-19 ಪ್ರಕರಣಗಳು, 865 ಸಾವುಗಳು

Sun Feb 6 , 2022
    ಭಾನುವಾರ (ಫೆಬ್ರವರಿ 6, 2022) ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,07,474 ಹೊಸ ಕೋವಿಡ್ -19 ಪ್ರಕರಣಗಳು, 865 ಸಾವುಗಳು ದಾಖಲಾಗಿವೆ, ಒಟ್ಟು ಸಾವಿನ ಸಂಖ್ಯೆಯನ್ನು 5,01,979 ಕ್ಕೆ ತಳ್ಳಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 12,25,011. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್-19 ಕ್ಯಾಸೆಲೋಡ್‌ನಲ್ಲಿ 1,06,637 ಪ್ರಕರಣಗಳ ಇಳಿಕೆ ದಾಖಲಾಗಿದೆ. ದೇಶವು ಇಂದು 2,13,246 ಚೇತರಿಕೆಗಳನ್ನು ದಾಖಲಿಸಿದೆ, ಒಟ್ಟು […]

Advertisement

Wordpress Social Share Plugin powered by Ultimatelysocial