‘ನಟ ಭಯಂಕರ’ ಮೊದಲ 3 ದಿನಗಳಲ್ಲಿ ಮಾಡಿದ ನಿಜವಾದ ಕಲೆಕ್ಷನ್ ಎಷ್ಟು?

ಬಿಗ್ ಬಾಸ್ ಮೂಲಕ ಖ್ಯಾತಿಯನ್ನು ಪಡೆದುಕೊಂಡ ಪ್ರಥಮ್ ನಂತರದ ದಿನಗಳಲ್ಲಿ ನಟನಾಗಿ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. 2018ರಲ್ಲಿ ಎಂಎಲ್‌ಎ ಎಂಬ ಚಿತ್ರದಲ್ಲಿ ನಟಿಸಿದ್ದ ಪ್ರಥಮ್ ಅದೇ ವರ್ಷ ದೇವ್ರಂತ ಮನುಷ್ಯ ಎಂಬ ಚಿತ್ರದಲ್ಲೂ ಸಹ ನಟಿಸಿದರು. ಈ ಎರಡೂ ಸಿನಿಮಾಗಳೂ ಸಹ ಹೇಳಿಕೊಳ್ಳುವಂತಹ ಹೆಸರು ಮಾಡಲಿಲ್ಲ.ಬಿಗ್ ಬಾಸ್ ನಂತರ ಪ್ರಥಮ್ ಹೊಂದಿದ್ದ ಜನಪ್ರಿಯತೆಗೆ ತಕ್ಕಂತ ಗೆಲುವು ಸಿಗಲಿಲ್ಲ.ಹೀಗೆ ಪ್ರಥಮ್ ನಾಯಕನಾಗಿ ನಟಿಸಿದ ಮೊದಲ ಎರಡೂ ಚಿತ್ರಗಳೂ ಸಹ ನಿರೀಕ್ಷೆ ಮುಟ್ಟುವಲ್ಲಿ ವಿಫಲ ಹೊಂದಿದ ಬಳಿಕ ಹಲವು ತಿಂಗಳುಗಳ ಕಾಲ ಪ್ರಥಮ್ ನಾಯಕನಾಗಿ ನಟಿಸಿದ ಯಾವ ಚಿತ್ರಗಳೂ ಸಹ ಸೆಟ್ಟೇರಲಿಲ್ಲ. ಮೊದಲೆರಡು ಚಿತ್ರಗಳಲ್ಲಿ ಬೇರೆಯವರ ನಿರ್ದೇಶನದಡಿಯಲ್ಲಿ ನಟಿಸಿದ್ದ ಪ್ರಥಮ್ ತಮ್ಮ ಮೂರನೇ ಚಿತ್ರವನ್ನು ತಾವೇ ರಚಿಸಿ ನಿರ್ದೇಶಿಸುವ ಸಾಹಸಕ್ಕೆ ಕೈಹಾಕಿದರು.ಪ್ರಥಮ್ ನಟ ಭಯಂಕರ ಎಂಬ ಶೀರ್ಷಿಕೆ ಅಡಿಯಲ್ಲಿ ಎಂಟರ್‌ಟೈನಿಂಗ್ ಸಿನಿಮಾವೊಂದನ್ನು ರಚಿಸಿ ಅದರಲ್ಲಿ ಸ್ವತಃ ತಾವೇ ನಾಯಕನಾಗಿಯೂ ನಟಿಸಿದರು. ಈ ಚಿತ್ರ ಕಳೆದ ಶುಕ್ರವಾರವಷ್ಟೇ ( ಫೆಬ್ರವರಿ 3 ) ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ಪ್ರಥಮ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರವನ್ನು ವೀಕ್ಷಿಸಿದ ಸಿನಿ ರಸಿಕರ ಪೈಕಿ ಕೆಲವರು ಚಿತ್ರ ಕಾಮಿಡಿ ಎಂಟರ್‌ಟೈನರ್ ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಚಿತ್ರ ಅಷ್ಟಕ್ಕಷ್ಟೇ ಎಂದು ವಿಮರ್ಶಿಸಿದ್ದಾರೆ. ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವ ನಟ ಭಯಂಕರ ಚಿತ್ರ ಮೊದಲ ಮೂರು ದಿನಗಳಲ್ಲಿ ಎಷ್ಟು ಕೋಟಿ ಗಳಿಸಿದೆ ನಟ ಭಯಂಕರ ಚಿತ್ರ ಮೊದಲ ದಿನ 15 ಲಕ್ಷ ರೂಪಾಯಿಗಳನ್ನು ಗಳಿಸಿದ್ದು, ಎರಡನೇ ದಿನ 30 ಲಕ್ಷ ರೂಪಾಯಿಗಳನ್ನು ಗಳಿಸಿದೆ ಹಾಗೂ ಮೂರನೇ ದಿನ 45 ಲಕ್ಷ ರೂಪಾಯಿಗಳನ್ನು ಗಳಿಸಿದ್ದು, ಮೊದಲ ಮೂರು ದಿನಗಳಲ್ಲಿ ಒಟ್ಟಾರೆ 90 ಲಕ್ಷ ರೂಪಾಯಿಗಳನ್ನು ಗಳಿಸಿದೆ ಎಂದು ತಿಳಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಹುಟ್ಟುಹಬ್ಬದಂದೇ ಶರಣ್ ಹೊಸ ಸಿನಿಮಾ ಘೋಷಣೆ.

Mon Feb 6 , 2023
ಹುಟ್ಟುಹಬ್ಬದಂದೇ ಶರಣ್ ಹೊಸ ಸಿನಿಮಾ ಘೋಷಣೆ – ಶರಣ್ ಮುಂದಿನ ಚಿತ್ರಕ್ಕೆ ಅರವಿಂದ್ ಕುಪ್ಲಿಕರ್ ನಿರ್ದೇಶಕ ‘ಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’ ಸಿನಿಮಾ ಖ್ಯಾತಿಯ ಅರವಿಂದ್ ಕುಪ್ಲಿಕರ್ ಶರಣ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಾರ್ಕ್ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಶರಣ್ ಪಾತ್ರ ಹಿಂದಿನ ಸಿನಿಮಾಗಳಿಗಿಂತ ಡಿಫ್ರೆಂಟ್ ಆಗಿರಲಿದ್ದು, ಎಲೆಕ್ಟ್ರಿಷಿಯನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಇಂದು ಶರಣ್ ಹುಟ್ಟುಹಬ್ಬ ಆದ್ರಿಂದ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ […]

Advertisement

Wordpress Social Share Plugin powered by Ultimatelysocial