ನಟ ದುಲ್ಖರ್ ಸಲ್ಮಾನ್ ಗೆ ಕೋವಿಡ್ ಸೋಂಕು;

 ಮಲಯಾಳಂ ಚಿತ್ರ ನಟ ದುಲ್ಖರ್ ಸಲ್ಮಾನ್ ಅವರಿಗೆ ಕೋವಿಡ್ 19 ಸೋಂಕು ದೃಢವಾಗಿದ್ದು, ರೋಗ ಲಕ್ಷಣಗಳೊಂದಿಗೆ ಐಸೋಲೇಟ್ ಆಗಿದ್ದಾರೆ. ಈ ಬಗ್ಗೆ ಸ್ವತಃ ನಟ ಸಲ್ಮಾನ್ ಖಚಿತಪಡಿಸಿದ್ದಾರೆ.

ದುಲ್ಖರ್ ಸಲ್ಮಾನ್ ತಂದೆ ಮುಮ್ಮಟ್ಟಿ ಅವರಿಗೂ ಕೆಲ ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಆಗಿತ್ತು.

‘ನನಗೆ ಕೋವಿಡ್ 19 ಸೋಂಕು ದೃಢವಾಗಿದೆ. ನಾನು ಮನೆಯಲ್ಲಿ ಪ್ರತ್ಯೇಕವಾಗಿರುತ್ತೇನೆ. ಜ್ವರ ಸಹಿತ ರೋಗಲಕ್ಷಣಗಳನ್ನು ಹೊಂದಿದ್ದು, ಆದರೆ ಆರೋಗ್ಯವಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ಚಿತ್ರೀಕರಣದ ಸಮಯದಲ್ಲಿ ನನ್ನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಜನರು, ದಯವಿಟ್ಟು ಐಸೋಲೇಶನ್ ಗೆ ಒಳಗಾಗಿ ಮತ್ತು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ನಟ ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ಪ್ಯಾರಸಿಟಮಾಲ್ ಮಾತ್ರೆ ಸೇವನೆ ಮುನ್ನ ಈ ವಿಚಾರಗಳು ಗಮನದಲ್ಲಿರಲಿ;

Fri Jan 21 , 2022
ಇತ್ತೀಚಿನ ಕೊರೊನಾ ಸನ್ನಿವೇಶ ಹಾಗೂ ಹವಾಮಾನ ಬದಲಾವಣೆಯ ಈ ಪರಿಸ್ಥಿತಿಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಒಂದು ಔಷಧಿ ಎಂದರೆ ಅದು ಪ್ಯಾರೆಸಿಟಮಾಲ್ ಮಾತ್ರೆ. ಇದನ್ನು ನೋವನ್ನು ಗುಣಪಡಿಸಲು ಮತ್ತು ಹೆಚ್ಚಿನ ಜ್ವರವನ್ನು ಕಡಿಮೆ ಮಾಡಲು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದು ತಲೆನೋವು, ಹಲ್ಲುನೋವು, ಉಳುಕು ಅಥವಾ ಶೀತ ಮತ್ತು ಜ್ವರವಾಗಿರಬಹುದು, ಈ ಎಲ್ಲಾ ಆರೋಗ್ಯ ಕಾಳಜಿಗಳಿಂದ ತ್ವರಿತ ಪರಿಹಾರವನ್ನು ಒದಗಿಸುವ ಒಂದು ಔಷಧವಾಗಿದೆ. ಅಸೆಟಾಮಿನೋಫೆನ್ ಎಂದೂ ಕರೆಯಲ್ಪಡುವ ಈ ಔಷಧವು ಸೌಮ್ಯವಾದ […]

Advertisement

Wordpress Social Share Plugin powered by Ultimatelysocial