ಮುಂದೆ ರಾತ್ರಿ ನಾಟಕಗಳಿಗೂ ಸಂಚಕಾರ ತರಲಿವೆಯೇ ಎಂಬ ಆತಂಕ ಮೂಡಿಸಿದೆ.

 

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್​-ಹಲಾಲ್​ ಬಳಿಕ ಉಂಟಾಗಿರುವ ಲೌಡ್​ಸ್ಪೀಕರ್​ ವಿವಾದ ಮತ್ತೊಂದು ಕೋಮುಸಂಘರ್ಷಕಕ್ಕೆ ಎಡೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ, ಅದು ಮುಂದೆ ರಾತ್ರಿ ನಾಟಕಗಳಿಗೂ ಸಂಚಕಾರ ತರಲಿವೆಯೇ ಎಂಬ ಆತಂಕ ಮೂಡಿಸಿದೆ.

ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಹಾಕುವ ಕುರಿತ ಉಂಟಾಗಿರುವ ವಿವಾದದ ವಿಚಾರವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್​ಪಿ ವಂಶಿಕೃಷ್ಣ, ಇದುವರೆಗೆ ಆ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಇಂದು ಜಿಲ್ಲಾಡಳಿತ ಭವನದಲ್ಲಿ ವಿವರ ನೀಡಿದರು.

ಎಲ್ಲೆಲ್ಲಿ ಲೌಡ್ ಸ್ಪೀಕರ್ ಬಳಕೆ ಮಾಡುತ್ತಾರೋ ಅವರಿಗೆಲ್ಲ ಈಗಾಗಲೇ ನೋಟಿಸ್ ನೀಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 156 ಮಸೀದಿಗಳು, 171 ದೇವಸ್ಥಾನಗಳು, 41 ಚರ್ಚ್​ಗಳು ಸೇರಿ ಒಟ್ಟು 374 ನೋಟಿಸ್ ನೀಡಲಾಗಿದೆ, ಜತೆಗೆ 14 ಬಾರ್​ಗಳು ಮತ್ತು ಒಂದು ರೆಸ್ಟೋರೆಂಟ್​ಗೂ ನೀಡಲಾಗಿದೆ ಎಂದು ಅವರು ತಿಳಿಸಿದರು.

ಧ್ವನಿವರ್ಧಕದ ಸಂಬಂಧ ಹೈಕೋರ್ಟ್ ನಿರ್ದೇಶನವಿದೆ. ಹೀಗಾಗಿ ನಿಯಮ ಮೀರುವವರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಹಳ್ಳಿಗಳಲ್ಲಿ ರಾತ್ರಿ ಹೊತ್ತು ನಡೆಯುವ ನಾಟಕಗಳ ಕುರಿತ ಪ್ರಶ್ನೆಗೂ ಪ್ರತಿಕ್ರಿಯಿಸಿದರು.

ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ರೀತಿಯ ಶಬ್ದ ಬಳಕೆ ಮಾಡಬಾರದು ಎಂದು ನಿಯಮವಿದೆ. ಹೀಗಾಗಿ ಅದರ ಬಗ್ಗೆ ಕೂಡ ಚರ್ಚೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದು, ಇನ್ನು ರಾತ್ರಿಯ ಸಂದರ್ಭದಲ್ಲಿ ನಾಟಕ ಕೂಡ ಆಡಲು ಅವಕಾಶ ಇರುತ್ತದೋ ಇಲ್ಲವೋ ಎಂಬ ಆತಂಕ ಮೂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿವಿಧ ರಾಜ್ಯಗಳ ಜನರು ಹಿಂದಿಯಲ್ಲಿ ಮಾತನಾಡಬೇಕು, ಇಂಗ್ಲಿಷ್ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ!

Fri Apr 8 , 2022
  ಬೆಂಗಳೂರು ಏಪ್ರಲ್ 8: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಮಾತೃಭಾಷೆಗಳಿಗೆ ಮಾಡಿರುವ ಅವಮಾನವಾಗಿದೆ. ಅನಗತ್ಯ ಘರ್ಷಣೆಗೆ ಎಡೆಮಾಡಿಕೊಡುವ ಈ ಬೇಜವಾಬ್ದಾರಿ ಹೇಳಿಕೆಯನ್ನು ಅಮಿತ್ ಶಾ ಅವರು ತಕ್ಷಣ ಹಿಂದೆಗೆದುಕೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ವಿವಿಧ ರಾಜ್ಯಗಳ ಜನರು ಹಿಂದಿಯಲ್ಲಿ ಮಾತನಾಡಬೇಕು, ಇಂಗ್ಲಿಷ್ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಸಿದ್ದರಾಮಯ್ಯ […]

Advertisement

Wordpress Social Share Plugin powered by Ultimatelysocial