ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಮಹಿಳಾ ಅಧಿಕಾರಿಗಳು.

ವದೆಹಲಿ, ಜ.21: ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಮಹಿಳಾ ಅಧಿಕಾರಿಗಳನ್ನು ವಿಶೇಷ ಆಯ್ಕೆ ಮಂಡಳಿ ಶೀಘ್ರದಲ್ಲಿ ಕರ್ನಲ್ (ಆಯ್ಕೆ ದರ್ಜೆ) ಹುದ್ದೆಗೆ ಬಡ್ತಿ ನೀಡುವ ಮೂಲಕ ಕಮಾಂಡ್ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.

ಭಾರತೀಯ ಸೇನೆಯಲ್ಲಿ ಮಹಿಳಾ ಕಮಾಂಡರ್ ಗಳ ಜವಾಬ್ದಾರಿ ನಿರ್ವಹಿಸುತ್ತಿರುವುವುದು ಮಹಿಳಾ ನಾಯಕತ್ವ ಮತ್ತು ಕೌಶಲ್ಯ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

244 ಮಹಿಳಾ ಆಧಿಕಾರಿಗಳಿಗೆ ಬಡ್ತಿ ನೀಡಲು ನಿರ್ಧರಿಸಿದ್ದು ಅದರಲ್ಲು 108 ಮಂದಿ ಭಾರತೀಯ ವಾಯುಸೇನೆಗೆ ಸೇರಿದವರಾಗಿದ್ದಾರೆ. ಕೆಲವು ಮಹಿಳಾ ಆಧಿಕಾರಿಗಳಿಗೆ ಲೆಪ್ಟಿನೆಂಟ್ ಕರ್ನಲ್ ನಿಂದ ಕರ್ನಲ್ ಹುದ್ದೆಗೆ ಬಡ್ತಿ ನೀಡಲಾಗುತ್ತಿದೆ. ಬಡ್ತಿಗೆ ಆಯ್ಕೆಯಾಗಿರುವ 244 ಮಹಿಳಾ ಆಧಿಕಾರಿಗಳು 1992 ರಿಂದ 2006 ರ ತಂಡದಲ್ಲಿ ಸೇರ್ಪಡೆಗೊಂಡ ಅಧಿಕಾರಿಗಳಾಗಿದ್ದಾರೆ.

ಮೊದಲ ಬಾರಿಗೆ, ಮಹಿಳಾ ಅಧಿಕಾರಿಗಳು ಭಾರತೀಯ ಸೇನೆಯಲ್ಲಿ ಪಡೆಗಳಿಗೆ ಕಮಾಂಡ್ ಮಾಡಲು ಸಾಧ್ಯವಾಗಿದೆ. ಅವರ ನಾಯಕತ್ವದ ಕೌಶಲ್ಯಕ್ಕಾಗಿ ಮೌಲ್ಯಮಾಪನ ಮಾಡಲಾಗುತ್ತದೆ ಭಾರತೀಯ ವಾಯುಸೇನೆ ತಿಳಿಸಿದೆ. 2022ರ ಮಾರ್ಚ್ ತಿಂಗಳಲ್ಲಿ ನವದೆಹಲಿಯಲ್ಲಿ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಾಧ್ಯಮ ಸಭೆಯಲ್ಲಿ ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮಹಿಳಾ ಆಧಿಕಾರಿಗಳಿಗೆ ಆಯುಧಗಳು ಮತ್ತು ಸೇವೆಗಳಲ್ಲಿ ಕಮಾಂಡ್ ಘಟಕಗಳು ಮತ್ತು ಸೇನಾಪಡೆಗಳಿಗೆ ಮಹಿಳಾ ಅಧಿಕಾರಿಗಳಿಗೆ ಬಡ್ತಿ ನೀಡುವ ಜೊತೆಗೆ ಮುಂಚೂಣಿಯಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ. ಭಾರತೀಯ ರಕ್ಷಣಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಡೆಗಳಿಗೆ ಅದರಲ್ಲಿಯೂ ಮಹಿಳಾ ಆಧಿಕಾರಿಗಳನ್ನುಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲು ಕೂಡ ನಿರ್ಧರಿಸಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಬಿಹಾರದಲ್ಲಿ ಹಾಡಹಗಲೇ ರಸ್ತೆಯಲ್ಲಿ 'ವೃದ್ಧನಿಗೆ ಇಬ್ಬರು ಮಹಿಳಾ ಪೊಲೀಸರಿಂದ ಲಾಠಿ ಏಟು'.

Sat Jan 21 , 2023
ಪಾಟ್ನಾ: ಬಿಹಾರ ಇಬ್ಬರು ಮಹಿಳಾ ಪೊಲೀಸ್‌ ಅಧಿಕಾರಿಗಳು ರಸ್ತೆಯಲ್ಲೇ ವೃದ್ಧರೊಬ್ಬರಿಗೆ ಲಾಟಿಯಿಂದ ಥಳಿಸಿರುವ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪತ್ರಕರ್ತ ಮುಖೇಶ್ ಸಿಂಗ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ವೃದ್ಧನನ್ನು ಇಬ್ಬರು ಪೊಲೀಸ್ ಮಹಿಳೆಯರು ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಥಳಿಸುತ್ತಿರುವುದನ್ನು ಕಾಣಬಹುದು. ಅವರು ಹೊಡೆತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಮಹಿಳಾ ಪೊಲೀಸ್ ಅಧಿಕಾರಿಗಳು ಪದೇ ಪದೇ ಲಾಠಿಯಿಂದ ಹೊಡೆಯುವ ಮೂಲಕ ಪೊಲೀಸರು ದರ್ಪ ತೋರಿದ ಘಟನೆ ಬಿಹಾರದಲ್ಲಿ ನಡೆದಿದೆಂದು […]

Advertisement

Wordpress Social Share Plugin powered by Ultimatelysocial