ಸಂಸತ್‌ ಭವನದ ಹೊಸ ಕಟ್ಟಡವು ಜನವರಿ ಅಂತ್ಯದ ವೇಳೆಗೆ ಸಿದ್ಧವಾಗಲಿದೆ .

ವದೆಹಲಿ: ಸಂಸತ್‌ ಭವನದ ಹೊಸ ಕಟ್ಟಡವು ಜನವರಿ ಅಂತ್ಯದ ವೇಳೆಗೆ ಸಿದ್ಧವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕಟ್ಟಡ ಕಾಮಗಾರಿ ಪೂರ್ಣವಾಗಿ ಮುಗಿದಿದ್ದು ಕಟ್ಟಡದ ಒಳಾಂಗಣ ವಿನ್ಯಾಸದ ಕೆಲಸಗಳು ಭರದಿಂದ ಸಾಗುತ್ತಿವೆ ಎಂದು ವರದಿಯಾಗಿದೆ. ಮುಂಬರಲಿರುವ ಬಜೆಟ್‌ ಅಧಿವೇಶನದ ವೇಳೆಗೆ ಸಂಸತ್‌ ಭವನ ಸಿದ್ಧವಾಗಲಿದೆ. ಅಲ್ಲಿಯೇ ಬಜೆಟ್‌ ಅಧಿವೇಶನ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬಜೆಟ್‌ ಅಧಿವೇಶನವನ್ನು ಹೊಸ ಕಟ್ಟಡದಲ್ಲಿ ಅಥವಾ ಈಗಿರುವ ಕಟ್ಟಡದಲ್ಲೇ ನಡೆಸಲಾಗುವುದೊ ಎಂಬ ಕುರಿತು ಇನ್ನಷ್ಟೇ ನಿರ್ಧಾರವಾಗಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಂಟ್ರಲ್‌ ವಿಸ್ಟಾ ಯೋಜನೆಯ ಭಾಗವಾಗಿ ಹೊಸ ಸಂಸತ್‌ ಭವನವನ್ನು ನಿರ್ಮಿಸಲಾಗುತ್ತಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಡಿಮೆ ಪ್ರಮಾಣದ ಆಲ್ಕೋಹಾಲ್ ಸೇವನೆಯೂ ಕ್ಯಾನ್ಸರ್‌ಗೆ ಕಾರಣ.

Tue Jan 10 , 2023
ಅತಿ ಕಡಿಮೆ ಪ್ರಮಾಣದ ಆಲ್ಕೋಹಾಲ್ ಸೇವನೆಯೂ ಕರುಳಿನ ಕ್ಯಾನ್ಸರ್‌(bowel cancer)ಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಎಚ್ಚರಿಕೆ ನೀಡಿದೆ.ವಿಶ್ವ ಆರೋಗ್ಯ ಸಂಸ್ಥೆಯು ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್‌ನಲ್ಲಿ ಈ ಹೇಳಿಕೆಯನ್ನು ಪ್ರಕಟಿಸಿದ್ದು, ಆಲ್ಕೋಹಾಲ್ ಸೇವನೆಯ ವಿಷಯಕ್ಕೆ ಬಂದಾಗ, ಅತಿ ಕಡಿಮೆ ಪ್ರಮಾಣದ ಆಲ್ಕೋಹಾಲ್ ಸೇವನೆಯೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದೆ.ಒಂದು ಗ್ಲಾಸ್ ವೈನ್ ಅಥವಾ ಒಂದು ಪಿಂಟ್ ಬಿಯರ್‌ನ ಪ್ರಯೋಜನಕಾರಿ ಪರಿಣಾಮಗಳ ಬಗ್ಗೆ ಸಾರ್ವಜನಿಕ ಗ್ರಹಿಕೆಗೆ ವಿರುದ್ಧವಾಗಿ, […]

Advertisement

Wordpress Social Share Plugin powered by Ultimatelysocial