ನವಗ್ರಹ ಚಾಪ್ಟರ್-2 ಬರುತ್ತಾ- ಮತ್ತೆ ಒಂದಾಗ್ತಾರಾ ವಿಲನ್ ಮಕ್ಕಳು..?

ಸ್ಯಾಂಡಲ್ ವುಡ್ ನ ಹೆಸರಾಂತ ವಿಲನ್ ಗಳ ಮಕ್ಕಳು ಒಟ್ಟಾಗಿ ನಟಿಸಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಚಿತ್ರ ಅಂದ್ರೆ ಅದು ನವಗ್ರಹ. ದರ್ಶನ್ ಸಹೋದರ ದಿನಕರ್ ತೂಗುದೀಪ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರ ರಿಲೀಸ್ ಆಗಿ 12 ವರ್ಷಗಳು ಕಳೆದಿವೆ. 2008ರ ನವೆಂಬರ್ 7 ರಂದು ರಿಲೀಸ್ ಆಗಿದ್ದ ಚಿತ್ರ ಆ ಟೈಮ್ ಅಲ್ಲಿ ಕ್ರೇಜ್ ಕ್ರಿಯೇಟ್ ಮಾಡಿತ್ತು.
ಸ್ಯಾಂಡಲ್ನಲ್ಲಿ ಸಖತ್ ಸದ್ದು ಮಾಡಿದ್ದ ನವಗ್ರಹ ಸಿನಿಮಾದ ಸೀಕ್ವೆಲ್ ಕುರಿತು ಬಹಳ ವರ್ಷದಿಂದಲೂ ಚರ್ಚೆಯಾಗುತ್ತಲೆ. ಈ ಕುರಿತು ದಿನಕರ್ ಸಹ ಸುಳಿವು ನೀಡಿದ್ದರು. 12 ವರ್ಷದ ನಂತರವೂ ಇಂತಹದೊಂದು ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಲೇ ಇದೆ.

ನವಗ್ರಹ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಜಗ್ಗು ಬೆಟ್ಟದಿಂದ ಧರೆಗೆ ಅಪ್ಪಳಿಸ್ತಾನೆ, ಜಗ್ಗು ಕಥೆ ಅಲ್ಲಿಗೆ ಮುಗಿದೇ ಹೋಯಿತು ಅನ್ಕೊಂಡಿರಬೇಕಾದ್ರೆ. ತಟ್ಟ ಅಂತ ಜಗ್ಗು ಕಣ್ಣು ಬಿಡ್ತಾನೆ. ಈ ದೃಶ್ಯ ಅದಾಗಲೇ ಸಿಕ್ವೇಲ್ ಸುಳಿವು ನೀಡಿತ್ತು.

ತೂಗುದೀಪ ಶ್ರೀನಿವಾಸ್ ಮಗ ದರ್ಶನ್, ಟೈಗರ್ ಪ್ರಭಾಕರ್ ಮಗ ವಿನೋದ್ ಪ್ರಭಾಕರ್,ಸುಧೀರ್ ಮಗ ತರುಣ್ ಸುಧೀರ್, ಕೀರ್ತಿ ರಾಜ್ ಪುತ್ರ ಧರ್ಮ ಕೀರ್ತಿ ರಾಜ್, , ಲೋಕೇಶ್ ಮಗ ಸೃಜನ್ ಲೋಕೇಶ್, ದಿನೇಶ್ ಪುತ್ರ ಗಿರಿ ದಿನೇಶ್, ಮತ್ತು ಸುಂದರ್ ಕೃಷ್ಣ ಅರಸ್ ಮಗ ನಾಗೇಂದ್ರ ಅರಸ್ ಹೀಗೆ ದಿಗ್ಗಜ ಖಳನಾಯಕರ ಮಕ್ಕಳು ಈ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ನವಗ್ರಹ ಸಿನಿಮಾ ಬಳಿಕ ದರ್ಶನ್ ಮತ್ತು ದಿನಕರ್ ಕಾಂಬಿನೇಷನ್ನಲ್ಲಿ ಸರ್ವಾಂತರ್ಯಾಮಿ ಎಂಬ ಸಿನಿಮಾ ಬರುತ್ತೆ ಎಂದು ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಬಹುಶಃ ಈ ಚಿತ್ರ ನವಗ್ರಹದ ಸೀಕ್ವೆಲ್ ಎಂದು ಸಹ ಅನೇಕರು ಮಾತನಾಡಿಕೊಂಡಿದ್ದರು. ಆದ್ರೆ, ಈವರೆಗೂ ಈ ಚಿತ್ರ ಸೆಟ್ಟೇರಲೇ ಇಲ್ಲ. ಈ ಚಿತ್ರದ ಮೇಲಿನ ಕುತೂಹಲವೂ ಕಮ್ಮಿಯಾಗಿಲ್ಲ.
ಈಗ ನವಗ್ರಹ ಚಿತ್ರ ಬಿಡುಗಡೆಯಾಗಿ 12 ವರ್ಷಗಳು ಕಳೆದಿವೆ ಮತ್ತೆ ಈ ಚಿತ್ರದ ಸಿಕ್ವೇಲ್ ಬರುತ್ತೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿವೆ. ಈ ಪ್ರಶ್ನೆಗೆ ಉತ್ತರವನ್ನ ತೂಗುದೀಪ ಶ್ರೀನಿವಾಸ್ ಅವರ ಮಕ್ಕಳೆ ನೀಡಬೇಕು.

ಇದನ್ನ ಓದಿ: ಅಪ್ಪುಗೆ ಅಭಿನಂದನಾ ಪತ್ರ ಬರೆದ ಸರ್ಕಾರಿ ಶಾಲೆ

 

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿ ಕನಕ ನೌಕರರ ಸಭೆ

Tue Nov 10 , 2020
ಜಿಲ್ಲಾ ಕನಕ ನೌಕರರ ಸಬೆ ಸ್ವಾಮಿ ವಿವೇಕಾನಂದ ತರಬೇತಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ.. ಗೌರವಾಧ್ಯಕ್ಷರು-ಅಯ್ಯಣ್ಣ ಇನಾಮ್ದಾರ್..ಅಧ್ಯಕ್ಷರಾಗಿ-ಮಲ್ಲಿಕಾರ್ಜುನ ಸಂಗ್ವಾರ,ಪ್ರಧಾನ ಕಾರ್ಯದರ್ಶಿ-ಲಿಂಗಣ್ಣ ಗೋನಾಳ,ಖಜಾಂಚಿ-ಸಾಬಣ್ಣ ಜುಬೇರ್,ಉಪಾಧ್ಯಕ್ಷರಾಗಿ ತಾಯಪ್ಪ ಜುಬೇರ್ ಹನುಮಂತ್ರಾಯ ಬಾದ್ಯಾಪುರ ಶ್ರೀಶೈಲ ಬಿರಾದರ ಸೇರಿದಂತೆ ಆರು ಜನರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.ಸಮಾಜವನ್ನು ಒಂದುಗೂಡಿಸಲು ಸಂಘಟನೆ ಅತ್ಯಗತ್ಯವಾಗಿ ಬೇಕು.ಶಿಕ್ಷಣ ಸಂಘಟನೆಯಿಂದ ನಾವೆಲ್ಲರೂ ಒಂದುಗೂಡಲು ಸಾಧ್ಯ ಎಂದು ಕನಕ ನೌಕರರ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಬಸವರಾಜ ಕೊಂಕಲ್ ರವರು ಹೇಳಿದರು.ರಾಜ್ಯದಲ್ಲಿ […]

Advertisement

Wordpress Social Share Plugin powered by Ultimatelysocial