ಮನೆಯಲ್ಲಿಯೇ ದೊರೆಯುವ ನಿಸರ್ಗದತ್ತವಾದ ಎಲೆಗಳನ್ನು ಬಳಸಿ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

ಸಾಮಾನ್ಯವಾಗಿ ಆರೋಗ್ಯ ಮತ್ತು ಸೌಂದರ್ಯವನ್ನು ರಕ್ಷಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತವಾದ ಕ್ರೀಮ್ ಗಳ ಮೊರೆ ಹೋಗುತ್ತೇವೆ. ಆದರೆ ಮನೆಯಲ್ಲಿಯೇ ದೊರೆಯುವ ನಿಸರ್ಗದತ್ತವಾದ ಎಲೆಗಳನ್ನು ಬಳಸಿ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.ಮುಖದ ಮೇಲೆ ಮೊಡವೆಗಳ ಕಾಟದಿಂದ ಒದ್ದಾಡುವವರು ತುಳಸಿ ಎಲೆಗಳನ್ನು ಜಜ್ಜಿ ರಸ ಹಿಂಡಿ ಪ್ರತಿದಿನ ಮುಖಕ್ಕೆ ಸವರಿಕೊಳ್ಳುತ್ತಿದ್ದರೆ ಎರಡು ತಿಂಗಳಲ್ಲಿ ಮೊಡವೆಗಳ ಕಾಟ ನಿವಾರಣೆಯಾಗುತ್ತದೆ.ಈ ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಈ ಪುಡಿಗಳ ಮಿಶ್ರಣಕ್ಕೆ ಜೇನು, ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ, ಜಿಡ್ಡು ನಿವಾರಣೆಯಾಗಿ ಮುಖ ಕಾಂತಿಯುತವಾಗುತ್ತದೆ.ತುಟಿಗಳು ಸದಾ ಕೆಂಪಗೆ ಹೊಳೆಯಬೇಕೆಂದರೆ ವೀಳ್ಯದೆಲೆ ಬಳಸಿ. ಇದು ತುಟಿಗಳನ್ನು ಒಡೆಯಲು ಬಿಡುವುದಿಲ್ಲ. ಜೊತೆಗೆ ತುಟಿಗಳ ಕಪ್ಪನ್ನು ನಿವಾರಿಸುತ್ತದೆ.ಪ್ರತಿದಿನ ಎಳೆ ಬೇವಿನೆಲೆಗಳನ್ನು ಜಗಿಯುತ್ತಿದ್ದರೆ, ದಂತಗಳು ಆರೋಗ್ಯವಾಗಿ ಧೃಢವಾಗುವುದರೊಂದಿಗೆ ಬೆಳ್ಳಗೆ ಹೊಳೆಯುತ್ತವೆ. ಹುಳುಕು ಹಲ್ಲುಗಳು ನಿವಾರಣೆಯಾಗುತ್ತವೆ. ಬೇವಿನೆಲೆಗಳ ಕಷಾಯ ಮುಖದ ಮೇಲಿನ ಮೊಡವೆಗಳನ್ನು ತಡೆಗಟ್ಟುತ್ತದೆ.ಮುಖದ ಮೇಲಿನ ಕಪ್ಪು ಮಚ್ಚೆಗಳು, ಗುಳ್ಳೆಗಳು ನಿವಾರಣೆಯಾಗಬೇಕು ಎಂದರೆ ಬೇವಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ರೋಸ್ ವಾಟರ್, ನಿಂಬೆರಸ ಬೆರೆಸಿ ಬಳಸಬಹುದು.ಈ ಎಲೆಗಳನ್ನು ಮೆತ್ತಗೆ ರುಬ್ಬಿ ರಸ ಹಿಂಡಬೇಕು. ಸ್ನಾನ ಮಾಡುವ ಮುನ್ನ ಈ ರಸವನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಚರ್ಮದ ದುರ್ಗಂಧ ನಿವಾರಣೆಯಾಗುವುದಲ್ಲದೆ ಕಾಂತಿ ಹೆಚ್ಚುತ್ತದೆ.ಕೈಗಳಿಗೆ ಗೋರಂಟಿ ಎಲೆಗಳನ್ನು ಹಚ್ಚಿಕೊಳ್ಳುವುದರಿಂದ ಅಂಗೈಗಳು ಅಂದವಾಗಿ ಮೃದುವಾಗುತ್ತವೆ. ಕೈ ಉಗುರುಗಳು ಬಿರುಕು ಬಿಡುವುದಿಲ್ಲ. ಅವುಗಳ ಬಿರುಸು ಕಡಿಮೆಯಾಗುತ್ತದೆ.ಇವುಗಳನ್ನು ಚೆನ್ನಾಗಿ ರುಬ್ಬಿ, ಸ್ವಲ್ಪ ನೀರಿನೊಂದಿಗೆ ಬೆರೆಸಿ ಆ ಮಿಶ್ರಣದಿಂದ ಕೂದಲುಗಳಿಗೆ ಚೆನ್ನಾಗಿ ಮಸಾಜ್ ಮಾಡುವುದರಿಂದ ಕೂದಲುಗಳ ಬಿರುಸುತನ ಕಡಿಮೆಯಾಗುವುದರೊಂದಿಗೆ, ಮೃದುವಾಗಿ ಆಕರ್ಷಣೀಯವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖಾರ ಅಥವಾ ಸಿಹಿ ಪದಾರ್ಥವನ್ನು ಹೆಚ್ಚಾಗಿ ಸೇವಿಸಿದಾಗ ಅದು ಹಲ್ಲಲ್ಲೇ ಉಳಿದುಕೊಂಡು ಹಲ್ಲುನೋವು ಕಾಣಿಸುತ್ತದೆ.

Fri Feb 18 , 2022
ಖಾರ ಅಥವಾ ಸಿಹಿ ಪದಾರ್ಥವನ್ನು ಹೆಚ್ಚಾಗಿ ಸೇವಿಸಿದಾಗ ಅದು ಹಲ್ಲಲ್ಲೇ ಉಳಿದುಕೊಂಡು ಹಲ್ಲುನೋವು ಕಾಣಿಸುತ್ತದೆ. ಅದನ್ನು ಪರಿಹರಿಸಲು ಹೀಗೆ ಮಾಡಿ.2 ರಿಂದ 3 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿ. ಇದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ನೋವಿರುವ ಜಾಗದಲ್ಲಿ ಇಟ್ಟುಕೊಳ್ಳಿ, ಇದರಿಂದ ಹಲ್ಲುನೋವು ಗುಣವಾಗುತ್ತದೆ.ನಾಲ್ಕೈದು ಹನಿ ನಿಂಬೆರಸಕ್ಕೆ ಇಂಗು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನೋವಿರುವ ಜಾಗದಲ್ಲಿ ಹಚ್ಚಿ.ಕಾಳುಮೆಣಸು ಪುಡಿಗೆ ಸ್ವಲ್ಪ ಉಪ್ಪನ್ನು ಸೇರಿಸಿ, ನೀರು ಸಿಂಪಡಿಸಿ […]

Advertisement

Wordpress Social Share Plugin powered by Ultimatelysocial