ʼನೇಲ್ ಪಾಲಿಶ್ʼ ತೆಗೆಯುವುದು ಈಗ ಸುಲಭ

 

ಮ್ಯಾಚಿಂಗ್ ಉಡುಪಿಗೆ ಬೇಕಾಗಿ ನಿನ್ನೆ ಬಳಸಿದ ನೇಲ್ ಪಾಲಿಶ್ ತೆಗೆಯಬೇಕಾಗಿದೆಯೇ. ನಿಮ್ಮ ಮನೆಯಲ್ಲಿ ರಿಮೂವರ್ ಇಲ್ಲವೇ. ಅದಿಲ್ಲದೆಯೂ ನಿಮ್ಮ ಉಗುರಿಗೆ ಹಾನಿಯಾಗದಂತೆ ಹೇಗೆ ಬಣ್ಣವನ್ನು ತೆಗೆದುಹಾಕಬಹುದು ಎಂಬುದು ನಿಮಗೆ ಗೊತ್ತೇ?

ನಿಮ್ಮಲ್ಲಿರುವ ಡಿಯೋಡರೆಂಟ್ ಅನ್ನು ಎರಡು ಬಾರಿ ಉಗುರಿನ ಮೇಲೆ ಸಿಂಪಡಿಸಿ.

ಕಾಟನ್ ಬಟ್ಟೆಯ ನೆರವಿನಿಂದ ನಿಮ್ಮ ಬೆರಳನ್ನು ಉಜ್ಜಿ. ಇದು ಸ್ವಚ್ಛವಾಗಲು ಹೆಚ್ಚು ಸಮಯ ತೆಗೆದುಕೊಂಡರೂ, ಉಗುರಿಗೆ ಯಾವುದೇ ಹಾನಿ ಮಾಡುವುದಿಲ್ಲ.

ಪೇಸ್ಟ್ ಅನ್ನು ಬೆರಳಿನ ಮೇಲೆ ಹಚ್ಚಿ ಬ್ರಶ್ ನಿಂದ ಸರಿಯಾಗಿ ತಿಕ್ಕುವುದರಿಂದ ಉಗುರಿನ ಮೇಲಿನ ಬಣ್ಣ ಇಲ್ಲವಾಗುತ್ತದೆ. ನಿಮ್ಮ ಕೈಯ ಮೇಲಿರುವ ಬಣ್ಣಕ್ಕೆ ಇನ್ನೊಂದು ಲೈಟ್ ಕಲರ್ ನೈಲ್ ಪಾಲಿಶ್ ಹಚ್ಚಿ. ತಕ್ಷಣ ಕಾಟನ್ ಹತ್ತಿಯಿಂದ ಒತ್ತಿ ತೆಗೆದರೆ ಹೊಸ ಹಾಗೂ ಹಳೆಯ ಬಣ್ಣಗಳೆರಡೂ ಎದ್ದು ಬರುತ್ತವೆ. ಇದನ್ನು ಒಂದೊಂದೇ ಬೆರಳಿಗೆ ಅಪ್ಲೈ ಮಾಡಿಕೊಂಡು ಬರುವುದು ಒಳ್ಳೆಯದು.

ಹ್ಯಾಂಡ್ ಸ್ಯಾನಿಟೈಸರ್ ಅಥವಾ ಹೇರ್ ಸ್ಪ್ರೇಯಿಂದಲೂ ಇದನ್ನು ಪ್ರಯತ್ನಿಸಬಹುದು. ಆದರೆ ಇದಕ್ಕೆ ಹೆಚ್ಚು ಹೊತ್ತು ಬೇಕು ಅಷ್ಟೇ.

ಬ್ಲೇಡ್ ಅಥವಾ ಚೂರಿಯ ಸಹಾಯದಿಂದ ನೇಲ್ ಪಾಲಿಶ್ ತೆಗೆಯುವುದರಿಂದ ಉಗುರಿಗೆ ಹೆಚ್ಚಿನ ಹಾನಿಯಾಗಬಹುದು. ಇದನ್ನು ತಪ್ಪಿಸಲು ಮೇಲಿನ ವಿಧಾನಗಳನ್ನೇ ಅನುಸರಿಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ವಿರುದ್ಧ ನಿಧಾನಗತಿಯ ಓವರ್ ರೇಟ್‌ಗಾಗಿ ವೆಸ್ಟ್ ಇಂಡೀಸ್ ದಂಡ ವಿಧಿಸಿದೆ

Sun Mar 13 , 2022
ಭಾರತ ವಿರುದ್ಧದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ವೆಸ್ಟ್ ಇಂಡೀಸ್ ಆಟಗಾರರು ತಮ್ಮ ಪಂದ್ಯ ಶುಲ್ಕದ ಶೇಕಡಾ 40 ರಷ್ಟು ದಂಡವನ್ನು ವಿಧಿಸಿದ್ದಾರೆ. ICC ಇಂಟರ್‌ನ್ಯಾಶನಲ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಸ್‌ನ ಶಾಂಡ್ರೆ ಫ್ರಿಟ್ಜ್ ಅವರು ಸಮಯ ಭತ್ಯೆಗಳನ್ನು ಪರಿಗಣಿಸಿದ ನಂತರ ಸ್ಟಾಫಾನಿ ಟೇಲರ್ ಅವರ ತಂಡವು ಗುರಿಗಿಂತ ಎರಡು ಓವರ್‌ಗಳ ಕೊರತೆಯಿದೆ ಎಂದು ತೀರ್ಪು ನೀಡಿದ ನಂತರ ಮಂಜೂರಾತಿಯನ್ನು ವಿಧಿಸಿದರು. […]

Advertisement

Wordpress Social Share Plugin powered by Ultimatelysocial