ಶೀಘ್ರವೇ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಕಾನೂನುಬಾಹಿರವಾಗಲಿದೆ.

 

 

ನೆಟ್‌ಫ್ಲಿಕ್ಸ್, ಪ್ರೈಮ್, ಹಾಟ್‌ಸ್ಟಾರ್, ವೂಟ್ ಯಾವುದೇ ಆನ್‌ಲೈನ್ ಸ್ಟ್ರೀಮಿಂಗ್ ಆಪ್‌ಗಳಲಾಗಲಿ, ಒಮ್ಮೆ ನಾವು ಲಾಗಿನ್ ಆದರೆ ನಮ್ಮ ಕುಟುಂಬಸ್ಥರೊಗೆ ಅಥವಾ ಸ್ನೇಹಿತರಿಗೆ ಅದರ ಪಾಸ್‌ವರ್ಡ್ ನೀಡುವುದು ಅಭ್ಯಾಸವಾಗಿದೆ. ಇನ್ನೂ ಕೆಲವು ಸ್ನೇಹಿತರು ಹಣವನ್ನು ಶೇರಿಂಗ್ ಮಾಡಿಕೊಂಡು ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಕೂಡಾ ಶೇರಿಂಗ್ ಮಾಡುತ್ತಾರೆ.ಆದರೆ ಈ ಒಂದು ದೇಶದಲ್ಲಿ ಶೀಘ್ರವೇ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಕಾನೂನುಬಾಹಿರವಾಗಲಿದೆ.ಇಂಟಾಲ್ಯಾಕ್ಚುವಲ್ ಪ್ರಾಪರ್ಟಿ ಆಫೀಸ್ (ಐಪಿಒ) ಪ್ರಕಾರ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಕುಟುಂಬ ಸದಸ್ಯರೊಂದಿಗೆ ಆಗಲಿ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಯುನೈಟೆಡ್ ಕಿಂಗ್‌ಡಮ್ ಅಥವಾ ಯುಕೆಯಲ್ಲಿ ಶೀಘ್ರದಲ್ಲೇ ಕಾನೂನುಬಾಹಿರವಾಗಲಿದೆ. ಅಂದರೆ ಒಬ್ಬ ವ್ಯಕ್ತಿ ಮಾತ್ರ ನೆಟ್‌ಫ್ಲಿಕ್ಸ್‌ನ ಪಾಸ್‌ವರ್ಡ್‌ ಅನ್ನು ಹೊಂದಿರಬೇಕು.ಐಪಿಒ ಪ್ರಕಾರ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಕಾನೂನುಬಾಹಿರ ಮಾತ್ರವಲ್ಲದೆ ಅದನ್ನು ಕ್ರೈಮ್ ಎಂದು ಕೂಡಾ ಪರಿಗಣಿಸಲಾಗುತ್ತದೆ. ಹಾಗೆಯೇ ಇದು ಕಾಪಿರೈಟ್ ಕೇಸ್ ಕೂಡಾ ಆಗಲಿದೆ. ಸದ್ಯ ಈ ಕಾನೂನನ್ನು ಜಾರಿಗೆ ತರುವ ಬಗ್ಗೆ ಯುಕೆಯಲ್ಲಿ ಚರ್ಚೆ ನಡೆಯುತ್ತಿದೆ. ಶೀಘ್ರವೇ ಜಾರಿಗೆ ಬರುವ ಸಾಧ್ಯತೆಯಿದೆ.ನೆಟ್‌ಫ್ಲಿಕ್ಸ್‌ನ ಪಾಸ್‌ವರ್ಡ್ ಅನ್ನು ಶೇರಿಂಗ್ ಮಾಡಿಕೊಳ್ಳುವ ಕಾರಣದಿಂದಾಗಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಸಂಖ್ಯೆಯು ಕಡಿಮೆಯಾಗುತ್ತಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯ ಗಂಟಲು ಸೀಳಿ ಕೊಲೆ, ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ

Sat Dec 24 , 2022
  ಗುರುವಾರ ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ದಾವಣಗೆರೆ: ಗುರುವಾರ ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ಸಂತ್ರಸ್ತೆ ಚಾಂದ್ ಸುಲ್ತಾನ(28) ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ಲೆಕ್ಕ ಪರಿಶೋಧಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಸಾದತ್ ಹರಿಹರ ಮೂಲದವನಾಗಿದ್ದು, ಮೃತ ಮಹಿಳೆಯನ್ನು ಪ್ರೀತಿಸುತ್ತಿದ್ದ […]

Advertisement

Wordpress Social Share Plugin powered by Ultimatelysocial