ಇದರಲ್ಲಿ ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.

ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಇನ್ನು ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರಿಗೆ ಹಲವು ಚಂದಾದಾರಿಕೆ ಪ್ಲಾನ್‌ಗಳನ್ನು ಪರಿಚಯಿಸಿದೆ.ಚಂದಾದಾರಿಕೆಯನ್ನು ಪಾವತಿಸುವ ಮೂಲಕ ನೆಟ್‌ಫ್ಲಿಕ್ಸ್‌ ಸ್ಟ್ರೀಮಿಂಗ್‌ ಸೇವೆಯನ್ನು ಪಡೆದುಕೊಳ್ಳಬಹುದು. ಇನ್ನು ನೀವು ಆಯ್ಕೆ ಮಾಡುವ ಚಂದಾದಾರಿಕೆಗಳ ಆಧಾರದ ಮೇಲೆ ನಿಮ್ಮ ಅಕೌಂಟ್‌ನಲ್ಲಿ ನಿಮ್ಮ ಸ್ನೇಹಿತರು, ಕುಟುಂಬಸ್ಥರು ಕೂಡ ನೆಟ್‌ಫ್ಲಿಕ್ಸ್‌ ಅನ್ನು ಪ್ರವೇಶಿಸಬಹುದು.ಹೌದು, ನೆಟ್‌ಫ್ಲಿಕ್ಸ್‌ ಖಾತೆಯನ್ನು ನೀವು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಬಹುದು. ನಿಮ್ಮ ಅಕೌಂಟ್‌ ಮೂಲಕ ನಿಮ್ಮ ಸ್ನೇಹಿತರು, ಕುಟುಂಬಸ್ಥರು ಕೂಡ ನೆಟ್‌ಫ್ಲಿಕ್ಸ್‌ ಪ್ರವೇಶಿಸಬಹುದು. ಒಂದು ವೇಳೆ ನೀವು ನಿಮ್ಮ ಅಕೌಂಟ್‌ನಲ್ಲಿ ಕುಟುಂಬಸ್ಥರು ಪ್ರವೇಶಿದಂತೆ ಮಾಡಲು, ನಿಮ್ಮ ನೆಟ್‌ಫ್ಲಿಕ್ಸ್‌ ಅಕೌಂಟ್‌ನಿಂದ ಸ್ನೇಹಿತರು ರಿಮೂವ್‌ ಮಾಡುವುದಕ್ಕೆ ಅವಕಾಶವಿದೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ ಅಕೌಂಟ್‌ನಲ್ಲಿ ಬೇರೆಯವರನ್ನು ರಿಮೂವ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.ಅಕೌಂಟ್‌ನಿಮ್ಮ ಅಕೌಂಟ್‌ ಪ್ರೊಫೈಲ್ನಲ್ಲಿ ಬೇರೆಯವರು ನೆಟ್‌ಫ್ಲಿಕ್ಸ್‌ ಬಳಸುವುದನ್ನು ತಡೆಯಬೇಕೆಂದರೆ ನೀವು ಪಾಸ್‌ವರ್ಡ್‌ ಬದಲಾಯಿಸುವುದು ಮುಖ್ಯವಾಗುತ್ತದೆ. ನೀವು ನೆಟ್‌ಫ್ಲಿಕ್ಸ್‌ ಖಾತೆಯ ಪಾಸ್‌ವರ್ಡ್ ಬದಲಾಯಿಸಿದ ತಕ್ಷಣ ನಿಮ್ಮ ಅಕೌಂಟ್‌ ಬಳಸುವ ಸ್ನೇಹಿತರು, ಕುಟುಂಬಸ್ಥರು ಲಾಗ್‌ಔಟ್‌ ಆಗುತ್ತಾರೆ. ಇದರಿಂದ ನೀವು ಮಾತ್ರವೇ ನಿಮ್ಮ ನೆಟ್‌ಫ್ಲಿಕ್ಸ್‌ ಅಕೌಂಟ್‌ ಅನ್ನು ಬಳಸುವುದಕ್ಕೆ ಸಾಧ್ಯವಾಗಲಿದೆ. ಇನ್ನು ನೀವು ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಬದಲಾಯಿಸುವುದು ಕೂಡ ಸರಳವಾಗಿದೆ. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.ನಿಮ್ಮ ನೆಟ್‌ಫ್ಲಿಕ್ಸ್ ಅಕೌಂಟ್‌ ಪಾಸ್‌ವರ್ಡ್ ಅನ್ನು ಬದಲಾಯಿಸುವುದು ಹೇಗೆ?ಮೊದಲಿಗೆ ನೀವು ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯನ್ನು ತೆರೆಯಿರಿ. ಇದರಲ್ಲಿ ನೀವು ನಿಮ್ಮ ಪ್ರೊಫೈಲ್ ಆಯ್ಕೆಮಾಡಿ.ನಂತರ ಡ್ರಾಪ್-ಡೌನ್‌ನಿಂದ “ಅಕೌಂಟ್‌” ಮೇಲೆ ಟ್ಯಾಪ್ ಮಾಡಿ.ಈಗ “ಚೇಂಜ್ ಪಾಸ್‌ವರ್ಡ್ ” ಆಯ್ಕೆಮಾಡಿ ಮತ್ತು ಸೈಟ್‌ನಲ್ಲಿನ ಸೂಚನೆಗಳನ್ನು ಅನುಸರಿಸಿ. ಒಮ್ಮೆ ಅಪ್ಡೇಟ್‌ ಮಾಡಿದ ನಂತರ, ನೀವು “ಅಕೌಂಟ್‌” ವಿಭಾಗಕ್ಕೆ ಹಿಂತಿರುಗಿ, ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು “ಎಲ್ಲಾ ಡಿವೈಸ್‌ಗಳಿಂದ ಸೈನ್ ಔಟ್ ಮಾಡಿ ಇದೀಗ “ದೃಢೀಕರಿಸಿ” ಅನ್ನು ಟ್ಯಾಪ್ ಮಾಡಬಹುದು.ಹೀಗೆ ಮಾಡುವುದರಿಂದ ನೀವು ಎಲ್ಲಾ ಡಿವೈಸ್‌ಗಳಿಂದ ಲಾಗ್ ಔಟ್ ಆಗುತ್ತೀರಿ. ಇದರಿಂದ ನಿಮ್ಮ ಅಕೌಂಟ್‌ ಬಳಸುತ್ತಿದ್ದ ಸ್ನೇಹಿತರು ಕೂಡ ಲಾಗ್‌ಔಟ್‌ ಆಗಿಬಿಡುತ್ತಾರೆ, ನಂತರ ನೀವು ಹೊಸ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡುವ ಮೂಲಕ ನಿಮ್ಮ ಅಕೌಂಟ್‌ ಪ್ರವೇಶಿಸಬಹುದಾಗಿದೆ. ನೀವು ಬೇರೆಯವರಿಗೆ ಪಾಸ್‌ವರ್ಡ್‌ ಹಂಚಿಕೊಂಡಾಗ ಮಾತ್ರ ನಿಮ್ಮ ಅಕೌಂಟ್‌ ಅನ್ನು ಬೇರೆಯವರು ಪ್ರವೇಶಿಸಲು ಸಾದ್ಯವಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL ಹರಾಜು 2022: ಚಹಾರ್ 14 ಕೋಟಿಗೆ CSK ಗೆ, ಶಾರ್ದೂಲ್ 10.75 ಕೋಟಿ ರೂ;

Sat Feb 12 , 2022
ದೀಪಕ್ ಚಹಾರ್ 14.00 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮರಳಿದರು. ಹಲೋ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ IPL 2022 ಮೆಗಾ ಹರಾಜಿನ ಇಂಡಿಯಾಟಿವಿಯ ನೇರ ಪ್ರಸಾರಕ್ಕೆ ಸ್ವಾಗತ. ಫೆಬ್ರವರಿ 12, ಮಧ್ಯಾಹ್ನ 12 ರಿಂದ ಪ್ರಾರಂಭವಾಗುವ ಎರಡು ದಿನಗಳ ಬಿಡ್ಡಿಂಗ್ ವಾರ್‌ನಲ್ಲಿ ಸುಮಾರು 600 ಆಟಗಾರರು ಸುತ್ತಿಗೆಗೆ ಹೋಗುತ್ತಾರೆ. ರಾಹುಲ್ ಚಹಾರ್ – ಮೂಲ ಬೆಲೆ ರೂ 75 ಲಕ್ಷ – ಆಡಮ್ ಝಂಪಾ – ಮೂಲ ಬೆಲೆ […]

Advertisement

Wordpress Social Share Plugin powered by Ultimatelysocial