ಹೊಸ ಕರೊನಾ ಪ್ರಕರಣಗಳು ಹೆಚ್ಚಳ !

ನವದೆಹಲಿ: ಚೀನಾ ಹಾಗೂ ಯುರೋಪ್​ನ ಹಲವು ದೇಶಗಳಲ್ಲಿ ಹೊಸ ಕರೊನಾ ಪ್ರಕರಣಗಳು ಹೆಚ್ಚಳ ಕಂಡು, ಆತಂಕ ಮೂಡಿಸಿರುವ ಬೆನ್ನಲ್ಲೇ, ಭಾರತದಲ್ಲೂ ದೈನಿಕ ಕೇಸ್​ಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಸೋಮವಾರ 1,150 ಕರೊನಾ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದರೆ, ಮಂಗಳವಾರ ಇದು 2,183ಕ್ಕೆ ಏರಿಕೆ ಕಂಡಿದೆ.

ಅಂದರೆ ಹೊಸ ಪ್ರಕರಣಗಳಲ್ಲಿ ಶೇಕಡ 89.8 ಏರಿಕೆಯಾಗಿದ್ದು, ನಾಲ್ಕನೇ ಅಲೆ ಏಳಬಹುದೆಂಬ ಭಯಕ್ಕೂ ಕಾರಣವಾಗಿದೆ.

ಸೋಮವಾರ ದೇಶದಲ್ಲಿ 214 ಜನರು ಮೃತಪಟ್ಟಿದ್ದು, ಆ ಪೈಕಿ ಕೇರಳದಲ್ಲೇ 212 ಮಂದಿಯ ಸಾವು ಸಂಭವಿಸಿದೆ. ಈ 212ರಲ್ಲಿ ಹಿಂದಿನ 62 ಸಾವಿನ ಪ್ರಕರಣವೂ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನರ ನಡುವೆ ಸೋಂಕು ಹರಡುವ ಪ್ರಮಾಣದ ಸೂಚಕವಾದ ದೈನಿಕ ಪಾಸಿಟಿವಿಟಿ ದರ ಶೇಕಡ 0.83ಕ್ಕೆ ಜಿಗಿದಿದೆ. ಭಾನುವಾರ ಅದು ಶೇ. 0.31 ಆಗಿತ್ತು. ಸೋಮವಾರ 11,558 ಇದ್ದ ಸಕ್ರಿಯ ಕೇಸ್ ಮಂಗಳವಾರ 11,542ಕ್ಕೆ ಇಳಿದಿದೆ.

ದೆಹಲಿ ಸಹಿತ ಕೆಲವು ನಗರಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ದೆಹಲಿ ಮತ್ತು ಆಸುಪಾಸಿನ ಗಾಜಿಯಾಬಾದ್ ಹಾಗೂ ನೋಯ್ಡಾದಲ್ಲಿ ಕೆಲ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ಕರೊನಾಗೆ ತುತ್ತಾದ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಚೀನಾದಲ್ಲಿ ಹೆಚ್ಚುತ್ತಿದೆ ಸಾವು: ಚೀನಾದ ಶಾಂಘೈಯಲ್ಲಿ ಸೋಮವಾರ ಸೋಂಕಿಗೆ ಇನ್ನೊಬ್ಬರು ಬಲಿಯಾಗಿದ್ದಾರೆ. ಲಸಿಕೆ ಪಡೆಯದ ಹಾಗೂ ಅನ್ಯವ್ಯಾಧಿಗಳಿದ್ದ ಮೂವರು ವೃದ್ಧರು ಭಾನುವಾರ ಮೃತಪಟ್ಟಿದ್ದರು ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಮಾರ್ಚ್ 1ರ ನಂತರ ಸೋಂಕಿತರಾದ 3,72,000 ಜನರ ಪೈಕಿ ಇದು ಮೊದಲ ಸಾವು ಎಂದು ಚೀನಾ ಮಾಧ್ಯಮ ವರದಿ ಮಾಡಿದೆ. ಶಾಂಘೈ ಜತೆಗೆ ಇತರ 15 ವಲಯಗಳಲ್ಲಿಯೂ ಕರೊನಾ ಸೋಂಕು ಅಬ್ಬರಿಸುತ್ತಿದೆ.

ಮಾಸ್ಕ್ ಕಡ್ಡಾಯ ನಿಯಮ ಮರುಜಾರಿದೇಶದಲ್ಲಿ ಕರೊನಾ ಹೆಚ್ಚುತ್ತಿರುವುದರಿಂದ ಲಖನೌ ಹಾಗೂ ರಾಷ್ಟ್ರ ರಾಜಧಾನಿ ವಲಯದ (ಎನ್​ಸಿಆರ್) ಜಿಲ್ಲೆಗಳ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಗೌತಮ ಬುದ್ಧ ನಗರ, ಗಾಜಿಯಾಬಾದ್, ಹಾಪುರ್, ಮೀರತ್, ಬುಲಂದ್​ಶಹರ್ ಮತ್ತು ಬಾಘಪತ್ ಜಿಲ್ಲೆಗಳಲ್ಲಿ ಕಠಿಣ ನಿಯಮ ಜಾರಿಗೆ ತರಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.

ರಾಜ್ಯದಲ್ಲಿ 53 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 5,301 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 53 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ 51 ಮಂದಿ ಹಾಗೂ ದಕ್ಷಿಣ ಕನ್ನಡದಲ್ಲಿ ಇಬ್ಬರು ಸೇರಿ 53 ಮಂದಿಗೆ ಸೋಂಕು ದೃಢಪಟ್ಟಿದೆ. ದಿನದ ಸೋಂಕು ಪ್ರಮಾಣ ದರ ಶೇ. 0.99 ತಲುಪಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕು ಕೊಂಚ ಮಟ್ಟಿಗೆ ಏರಿಕೆ ಕಂಡಂತಾಗಿದ್ದು, ಮರಣ ಪ್ರಮಾಣ ದರ ಶೂನ್ಯವಾಗಿದೆ. ಕಳೆದ 24 ಗಂಟೆಗಳಲ್ಲಿ 44 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 39.04 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,473 ತಲುಪಿದೆ. ರಾಜ್ಯದಲ್ಲಿ ಈವರೆಗೆ 40,057 ಮಂದಿ ಸೋಂಕಿಗೆ ಬಲಿಯಾಗಿದ್ದು, 39.46 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂತೋಷ್ ಪಾಟೀಲ್ ಕೇಸ್ ತಕ್ಷಣವೇ ಎಫ್‌ಐಆರ್ ಮಾಡಿ ಕೆಲಸ ಮಾಡುತ್ತಿದ್ದೇವೆ. ಸಿಎಂ ಬೊಮ್ಮಾಯಿ

Tue Apr 19 , 2022
ಚಿಕ್ಕಮಗಳೂರು: ನಾನು ಯಾವುದರಲ್ಲೂ ಸಾಫ್ಟ್ ಕಾರ್ನರ್ ತೋರಿಲ್ಲ. ಖಡಕ್ ಎಂದರೆ ಏನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷಗಳಿಗೆ ಪ್ರಶ್ನಿಸಿದರು. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಕೇಸ್ ತಕ್ಷಣವೇ ಎಫ್‌ಐಆರ್ ಮಾಡಿ ಕೆಲಸ ಮಾಡುತ್ತಿದ್ದೇವೆ. ಹುಬ್ಬಳ್ಳಿ ಘಟನೆಗೂ ಕ್ರಮ ತೆಗೆದುಕೊಂಡಿದ್ದೇವೆ. ಶಿವಮೊಗ್ಗ ಕೇಸಲ್ಲೂ ಕ್ರಮ ತೆಗೆದುಕೊಂಡಿದ್ದೇವೆ. ಹಣ್ಣಿನ ಅಂಗಡಿ ವಿಚಾರದಲ್ಲೂ ಕ್ರಮ ತೆಗೆದುಕೊಂಡಿದ್ದೇವೆ. ಯಾವುದೂ ವಿಳಂಬ ಮಾಡಿಲ್ಲ. ಇದಕ್ಕಿಂತ ಬೇರೆ ಇನೇನು ಬೇಕು ನಿಮಗೆ ಎಂದು […]

Advertisement

Wordpress Social Share Plugin powered by Ultimatelysocial