IAS ಪಾಸ್​ ಮಾಡಲು ಎಷ್ಟು ಗಂಟೆ ಓದಬೇಕು?

 

 

ವದೆಹಲಿ: ಐಎಎಸ್​ ಅಧಿಕಾರಿಯಾಗಲು ದಿನಕ್ಕೆ ಎಷ್ಟು ಗಂಟೆ ಅಧ್ಯಯನ ಮಾಡಬೇಕು ಎಂ ವಿದ್ಯಾರ್ಥಿನಿಯ ಪ್ರಶ್ನೆಗೆ ಸೆಲೆಬ್ರಿಟಿ ಐಎಎಸ್​ ಅಧಿಕಾರಿ ಟೀನಾ ಡಾಬಿ ಅವರು ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಟೀನಾ ಡಾಬಿ ಅವರು ಪ್ರಸ್ತುತ ರಾಜಸ್ಥಾನದ ಜೈಸಲ್ಮೇರ್​ನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಯೋನಿರ್​ ಜೈಸನ್ ಶಕ್ತಿ (ಮಹಿಳೆಯರು ಮೊದಲು) ಕಾರ್ಯಕ್ರಮದ ಭಾಗವಾಗಿ ಜೈಸಲ್ಮೇರ್​ನ ಇಂಧಿರಾ ಗಾಂಧಿ ಇಂದೋರ್​ ಸ್ಟೇಡಿಯಂನಲ್ಲಿ ವಿದ್ಯಾರ್ಥಿನಿಯರಿಗೆ ವೃತ್ತಿ ಸಮಾಲೋಚನೆ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಟೀನಾ ಡಾಬಿ ಅವರು ಭಾಗವಹಿಸಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.

ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಟೀನಾ ಡಾಬಿ, ಪ್ರತಿ ಯಶಸ್ಸಿಗೆ ಹೋರಾಟ ಮತ್ತು ಸಮರ್ಪಣಾ ಮನೋಭಾವ ಅತ್ಯಗತ್ಯ ಎಂದರು. ಯಾವುದೇ ವಿದ್ಯಾರ್ಥಿಗಳು ಹೋರಾಟಕ್ಕೆ ಹೆದರದೆ ಶೇ.100 ರಷ್ಟು ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು, ನೀವು ಈ ದೇಶದ ಯುವ ಐಕಾನ್, ನಿಮ್ಮ ಪ್ರೇರಣೆ ಏನು? ಎಂದು ಪ್ರಶ್ನಿಸಿದಳು. ಇದಕ್ಕೆ ಉತ್ತರಿಸಿದ ಟೀನಾ ಡಾಬಿ, ಸಾರ್ವಜನಿಕರಿಂದ ಪಡೆಯುವ ಪ್ರೀತಿಯು ಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡಲು ನನಗೆ ಪ್ರೇರೇಪಿಸುತ್ತದೆ ಎಂದು ಉತ್ತರಿಸಿದರು.

12ನೇ ತರಗತಿಗೆ ತಯಾರಿ ನಡೆಸುವಾಗ ಐಎಎಸ್ ತಯಾರಿಯನ್ನು ಮಾಡಬಹುದೇ? IAS ಆಗಲು ಎಷ್ಟು ಗಂಟೆಗಳ ಅಧ್ಯಯನದ ಅಗತ್ಯವಿದೆ? ಎಂದು ಇತರೆ ವಿದ್ಯಾರ್ಥಿನಿಯರು ಪ್ರಶ್ನಿಸಿದರು.

ವಿದ್ಯಾರ್ಥಿನಿಯರ ಪ್ರಶ್ನೆಗೆ ಇಂದಿನ ಯುಗ ಹೇಗೆ ಸ್ಪರ್ಧಾತ್ಮಕ ಯುಗವಾಗಿದೆ ಎಂಬುದನ್ನು ಪ್ರಸ್ತಾಪಿಸಿದ ಟೀನಾ ಡಾಬಿ, ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ವೃತ್ತಿಗೆ ಒಂದಕ್ಕಿಂತ ಹೆಚ್ಚು ಆಯ್ಕೆಗಳನ್ನು ಇಟ್ಟುಕೊಂಡು ಶ್ರಮಿಸಬೇಕು. ಪ್ರತಿಯೊಂದು ವಿಷಯವೂ ಉತ್ತಮ ವೃತ್ತಿ ಆಯ್ಕೆಯಾಗಿದೆ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ವೃತ್ತಿಜೀವನದ ಬಗ್ಗೆ ಗಂಭೀರವಾಗಿರಬೇಕು. ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಯಾವುದೇ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಈ ಕಾರ್ಯಾಗಾರದಲ್ಲಿ ಟ್ರೈನಿ ಐಎಎಸ್ ಅಧಿಕಾರಿ ಅವ್ಹಾದ್ ನಿವೃತ್ತಿ ಸೋಮನಾಥ್, ಎಡಿಜೆ ಸುನೀಲ್ ವಿಷ್ಣೋಯಿ ಅವರು ಏರ್‌ಫೋರ್ಸ್‌ನಲ್ಲಿ ಮಹಿಳೆಯರಿಗೆ ಅವಕಾಶಗಳ ಬಗ್ಗೆ, ಪ್ರೊಟೆಕ್ಷನ್ ಆಫೀಸರ್ ಚಂದ್ರವೀರ್ ಸಿಂಗ್ ಭಾಟಿ ಅವರು ಕ್ಲ್ಯಾಟ್ ಮತ್ತು ನ್ಯಾಯಾಂಗ ಸೇವೆಯ ಬಗ್ಗೆ, ಭನಿಯಾನ ತಹಸೀಲ್ದಾರ್ ಸುನೀಲ್ ವಿಷ್ಣೋಯ್ ಅವರು ಆರ್‌ಎಎಸ್ ಪರೀಕ್ಷೆಯ ಬಗ್ಗೆ ಮಾತನಾಡಿದರು.

ಯಾರು ಈ ಟೀನಾ ಡಾಬಿ
2015ರ ಬ್ಯಾಚ್​ನ ಐಎಎಸ್​ ಪರೀಕ್ಷೆಯಲ್ಲಿ ಟೀನಾ ಡಾಬಿ ಟಾಪರ್ ಆದರೆ, ಕಾಶ್ಮೀರ ಮೂಲದ ಅಥರ್​​ ಖಾನ್​ ಅವರು ಎರಡನೇ ರ್ಯಾಂಕ್​ ಪಡೆದಿದ್ದರು. ತರಬೇತಿ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು 2018ರಲ್ಲಿ ವಿವಾಹವಾಗಿದ್ದರು. ಇಬ್ಬರು ಸಹ ರಾಜಸ್ಥಾನ ಕೇಡರ್​ನ ಅಧಿಕಾರಿಗಳಾಗಿದ್ದು, ಜೈಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಯಾದ ಎರಡು ವರ್ಷಗಳ ಬಳಿಕ ಕಳೆದ ನವೆಂಬರ್​ (2020) ತಿಂಗಳದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. 2021ರ ಆಗಸ್ಟ್​ ತಿಂಗಳಲ್ಲಿ ದಂಪತಿಯ ಡಿವೋರ್ಸ್​ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿತು. ಇದೀಗ ಇಬ್ಬರು ಮಾಜಿ ದಂಪತಿಗಳಾಗಿದ್ದಾರೆ. ಇವರಿಬ್ಬರ ವಿವಾಹ ಸಾಕಷ್ಟು ಸುದ್ದಿಯಾಗಿತ್ತು. ಲವ್​ ಜಿಹಾದ್​ ಎಂದು ಹೇಳಲಾಗಿತ್ತು. ಆದರೆ, ಭಾರಿ ವಿರೋಧದ ನಡುವೆಯೂ ಮದುವೆಯಾಗಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದ ಇಬ್ಬರು ಡಿವೋರ್ಸ್​ ಆಗಿದ್ದಾರೆ. ಇದರ ಬೆನ್ನಲ್ಲೇ ಟೀನಾ ಡಾಬಿ ಅವರು ಏಪ್ರಿಲ್​ 22ರಂದು ಎರಡನೇ ವಿವಾಹವಾಗಿದ್ದಾರೆ. ತನಗಿಂತ ಮೂರು ವರ್ಷ ಹಿರಿಯರಾದ ಐಎಎಸ್​ ಅಧಿಕಾರಿ ಪ್ರದೀಪ್​ ಗಾವಂಡೆ ಅವರನ್ನು ಜೈಪುರದಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಟೀನಾ ಡಾಬಿ ಕೈಹಿಡಿದರು. ಗಾವಂಡೆ ಸಹ 2013ನೇ ಸಾಲಿನ ರಾಜಸ್ಥಾನ ಕೇಡರ್​ನ ಐಎಎಸ್​ ಅಧಿಕಾರಿಯಾಗಿದ್ದು, ಜೈಪುರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಟೀನಾ ಡಾಬಿ ಅವರು ಎರಡನೇ ವಿವಾಹವಾದ ಬೆನ್ನಲ್ಲೇ ಅವರ ಮಾಜಿ ಪತಿ ಹಾಗೂ ಐಎಎಸ್​ ಅಧಿಕಾರಿ ಅಥರ್​ ಅಮೀರ್​ ಖಾನ್​ ಕೂಡ ಎರಡನೇ ಮದುವೆ ಆಗಿದ್ದಾರೆ. ತಮ್ಮದೇ ಸಮುದಾಯದ ಡಾ. ಮೆಹ್ರೀನ್​ ಖಾಜಿ ಎಂಬುವರನ್ನು ವರಿಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಲಿವುಡ್‌ ನಲ್ಲಿ ವರ್ಷದ ಮೊದಲ ದೊಡ್ಡ ಹಿಟ್‌ಗಳತ್ತ ಸಾಗುತ್ತಿದೆ.

Sun Jan 15 , 2023
ಚೆನ್ನೈ: ದಳಪತಿ ವಿಜಯ್‌ ʼವಾರಿಸುʼ ಹಾಗೂ ಅಜಿತ್‌ ಕುಮಾರ್ ʼತುನಿವುʼ ಕಾಲಿವುಡ್‌ ನಲ್ಲಿ ವರ್ಷದ ಮೊದಲ ದೊಡ್ಡ ಹಿಟ್‌ಗಳತ್ತ ಸಾಗುತ್ತಿದೆ. ನಿರೀಕ್ಷೆಯಂತೆ ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಪೊಂಗಲ್ ಹಬ್ಬವನ್ನು ಗುರಿಯಾಗಿಸಿಕೊಂಡು ಜ.11 ರಂದು ವಿಶ್ವದಾದ್ಯಂತ ತೆರೆಗೆ ಬಂದ ʼವಾರಿಸುʼ ಮೊದಲ ದಿನದಲ್ಲೇ ವರ್ಲ್ಡ್‌ ವೈಡ್‌ 45 ಕೋಟಿ ಗಳಿಕೆ ಕಂಡಿತ್ತು. ನಿರೀಕ್ಷೆಯಂತೆ ವಿಜಯ್‌ ಸಿನಿಮಾ 100 ಕೋಟಿ ಗಳಿಕೆಯನ್ನು ಕಂಡಿದೆ. ರಿಲೀಸ್‌ ಆದ ಐದೇ ದಿನದಲ್ಲೇ […]

Advertisement

Wordpress Social Share Plugin powered by Ultimatelysocial