ಡಿಆರ್‌ಡಿಒ ಹೊಸ ಡ್ರೋನ್‌

ಹಿಮಾಲಯದಲ್ಲಿ ಮಿಲಿಟರಿ ಸರಕು ಸೇವಾ ಕಾರ್ಯಾಚರಣೆಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹೊಸ ಡ್ರೋನ್‌(ಯುಎವಿ) ಅಭಿವೃದ್ಧಿ ಪಡಿಸಿದ್ದು, ಇದು ಸೇವಾ ಕಾರ್ಯಾಚರಣೆಯಲ್ಲಿ ಮಾತ್ರವಲ್ಲದೇ, ಶತ್ರುನೆಲೆ ಪುಡಿಗಟ್ಟುವಲ್ಲೂ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇತ್ತೀಚೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ 108ನೇ ವಿಜ್ಞಾನ ಸಭೆಯಲ್ಲಿ ಈ ಡ್ರೋನ್‌ ಅನ್ನು ಪ್ರದರ್ಶಿಸಲಾಗಿತ್ತು.5 ರಿಂದ 25 ಕೆಜಿ ವರೆಗಿನ ಪೇಲೋಡ್‌ಗಳನ್ನು ಹೊತ್ತು ಸಾಗುವ ಸಾಮರ್ಥ್ಯವಿರುವ ಡ್ರೋನ್‌, ಶತ್ರು ನೆಲೆಗಳ ಮೇಲೆ ಬಾಂಬ್‌ಗಳನ್ನು ಎಸೆಯಲು ಕೂಡ ಸಮರ್ಥವಾಗಿವೆ. 5 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಡ್ರೋನ್‌, ಸ್ವಯಂಚಾಲಿತವಾಗಿ ಸರಕು ತಲುಪಿಸಿ, ನೆಲೆಗೆ ಹಿಂದಿರುಗಬಲ್ಲದಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟದ ವಾಹನಗಳ ಮಾಲೀಕರಿಗೆ ಶಾಕ್

Sat Jan 7 , 2023
ಯೆಲ್ಲೋ ಬೋರ್ಡ್ ವಾಹನ ಎಫ್‌ಸಿಗೆ ಪೊಲೀಸ್ ಇಲಾಖೆಯ ಎನ್‌ಒಸಿ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಸಂಚಾರ ನಿಯಮ ಉಲ್ಲಂಘಿಸಿ ದಂಡಕಟ್ಟದ ವಾಹನಗಳಿಗೆ ಮೂಗುದಾರ ಹಾಕಲು ಚಿಂತನೆ ನಡೆದಿದ್ದು, ಕಾನೂನು ತಿದ್ದುಪಡಿಗೆ ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.ವಾಹನಗಳಿಗೆ ಎಫ್.ಸಿ. ಮಾಡಿಸುವ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಮತ್ತು ವಸೂಲಿ ಮಾಡಲು ಪೊಲೀಸ ಇಲಾಖೆ ಚಿಂತನೆ ನಡೆಸಿದೆ. ಯೆಲ್ಲೋ ಬೋರ್ಡ್ ವಾಹನಗಳ ವಾರ್ಷಿಕ ಸದೃಢ ಪ್ರಮಾಣ […]

Advertisement

Wordpress Social Share Plugin powered by Ultimatelysocial