ಪಟ್ಟಣ ಪಂಚಾಯತಿ ಕಛೇರಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್ ಸಮೀಕ್ಷೆ ಶಿಬಿರಕ್ಕೆ ಚಾಲನೆ

ಪಟ್ಟಣ ಪಂಚಾಯತಿ ಕಛೇರಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್ ಸಮೀಕ್ಷೆ ಶಿಬಿರಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್ ಸಮೀಕ್ಷೆಯ ಜಿಲ್ಲಾ ಸಂಚಾಲಕ ಚೆನ್ನರಾಯಪ್ಪ  ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್ ಕೆಲಸ ಮಾಡುತ್ತಿದ್ದರೇ, ಅಂತಹ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ಬಂದು ಅರ್ಜಿ ಸಲ್ಲಿಸಿ ಎಂದು ತಿಳಿಸಿದರು.ಬಳಿಕ ತಾಲೂಕು ಸಂಚಾಲಕಿ ಅಮರಾವತಿ ಮಾತನಾಡಿ, ಒಳಚರಂಡಿ/ಮಲವಿಸರ್ಜನೆ(ಪಿಟ್‌ಗಳಲ್ಲಿ) ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳು ಇಳಿಯಬಾರದು ಎಂಬ ಕಾನೂನಿದೆ. ಆದರೂ ಇನ್ನೂ ಕೆಲವೆಡೆ ಈ ಪದ್ದತಿ ಮುಂದುವರಿಯುತ್ತಿದೆ. ಈ ಕಾರ್ಯದಲ್ಲಿ ತೊಡಗಿಸಿಕೊಂಡವರು ನಿರ್ಭಯದಿಂದ ಸ್ವಯಂ ನೊಂದಣಿ ಮಾಡಿಕೊಳ್ಳಿ. ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್ ಕೆಲಸ ಮಾಡಿಸುವವರ ಮೇಲೆ ಪ್ರಕರಣ ದಾಖಲಾಗುತ್ತೆ ಎಂದರು.ಸಮೀಕ್ಷಾ ಶಿಬಿರಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಪಾಸ್ಪೋರ್ಟ್ ಅಳತೆಯ ಒಂದು ಭಾವಚಿತ್ರ ಹಾಗೂ ಕುಟುಂಬದ ಸದಸ್ಯರನ್ನೊಳಗೊಂಡ ಒಂದು ಭಾವಚಿತ್ರ, ಬ್ಯಾಂಕ್ ಖಾತೆಯ ಪಾಸ್‌ಬುಕ್ ಮುಖಪುಟದ ಪ್ರತಿ (ಮೂಲ ಪುಸ್ತಕ), ಆಧಾರ್ ಪ್ರತಿ (ಮೂಲ ಪತ್ರಿ),  ಮ್ಯಾನುವಲ್ ಸ್ಕ್ಯಾವೆಂಜಿಂಗ್ ಕಾರ್ಯನಿರ್ವಹಿಸುತ್ತಿರುವ ಅನೈರ್ಮಲ್ಯ ಶೌಚಾಲಯದ ಸ್ಥಳದ ವಿವರಗಳನ್ನು ಸಮೀಕ್ಷಾ ಶಿಬಿರಗಳಲ್ಲಿ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೇಷ್ಮೆ ಇಲಾಖೆಯ ಅಧಿಕಾರಿ ಎಸ್.ಎನ್.ಶ್ರೀನಿವಾಸ ಸಹಕಾರದಿಂದ ರೇಷ್ಮೆ ಅಭಿವೃದ್ದಿ 

Sun Dec 19 , 2021
ರೇಷ್ಮೆ ಇಲಾಖೆಯಲ್ಲಿ ಬಡ್ತಿ ಹೊಂದಿ ಶಿಡ್ಲಘಟ್ಟ ರೇಷ್ಮೆಗೂಡಿನ ಮಾರುಕಟ್ಟೆಯ ಉಪನಿರ್ದೇಶಕರಾಗಿ ವರ್ಗವಾಗಿರುವ ಎನ್.ಎನ್.ಶ್ರೀನಿವಾಸ್ರವರಿಗೆ ಬಂಗಾರಪೇಟೆ ಪಟ್ಟಣದ ಎಸ್ಎನ್ಆರ್ ಕಲ್ಯಾಣ ಮಂಟಪದಲ್ಲಿ ಬಂಗಾರಪೇಟೆ ಮತು ್ತಕೆಜಿಎಫ್ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ ಶಿಡ್ಲಘಟ್ಟ ರೇಷ್ಮೆಗೂಡಿನ ಮಾರುಕಟ್ಟೆಯ ಉಪನಿರ್ದೇಶಕರಾಗಿ ವರ್ಗವಾಗಿರುವ ಎನ್.ಎನ್.ಶ್ರೀನಿವಾಸ್ ಕಳೆದ ೧೮ ವರ್ಷಗಳಿಂದ ತಾಲೂಕಿನ ರೇಷ್ಮೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ಕೊಂಡೊಯ್ಯುವ […]

Advertisement

Wordpress Social Share Plugin powered by Ultimatelysocial