ನೈಟ್​ ಪಾರ್ಟಿ, ಕಾಕ್‍ಟೇಲ್ ಹಾಗೂ ಸಾವು, ದಿಶಾ ಸಾಲಿಯಾನ್ ಫ್ಲ್ಯಾಟ್​ನಲ್ಲಿ ಆವತ್ತು ನಡೆದಿದ್ದೇನು?

 

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣವು ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈಗ ಎಸ್‌ಐಟಿ ಈ ಬಗ್ಗೆ ತನಿಖೆ ನಡೆಸಲಿದೆ. ಹೀಗಿರುವಾಗ ದಿಶಾ ಸಾಲಿಯಾನ್‌ ಅವರ ಫ್ಲಾಟ್‌ನಲ್ಲಿ ರಾತ್ರಿ ಏನಾಯಿತು ಎಂಬ ಪ್ರಶ್ನೆ ಮತ್ತೊಮ್ಮೆ ಹುಟ್ಟಿಕೊಂಡಿದೆ.
ಈ ಪ್ರಕರಣದ ತನಿಖೆಯನ್ನು ಪೊಲೀಸರ ನಂತರ ಸಿಬಿಐ ತಂಡ ಮಾಡಿದೆ. ಇದೇ ತಂಡ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿತ್ತು. ಆಗ ದಿಶಾ ಪ್ರಕರಣದಲ್ಲಿ ಸಿಬಿಐ ನೀಡಿದ ಥಿಯರಿಯನ್ನು ಸಂಬಂಧಿಕರು ಕೂಡ ಸರಿ ಎಂದು ಒಪ್ಪಿಕೊಂಡಿದ್ದರು. ಹಾಗಾದ್ರೆ ಈಗ ಯಾವ ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಯಲಿದೆ? ಇಲ್ಲಿದೆ ವಿವರದಿಶಾಹಾಗೂ ಸುಶಾಂತ್ ಸಾವಿನ ನಡುವೆ 5 ದಿನಗಳ ಅಂತರ
28 ವರ್ಷದ ದಿಶಾ ಸಾಲಿಯಾನ್ ಅವರು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದರು. 2020 ರ ಜೂನ್ 8 ಮತ್ತು 9 ರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಕಟ್ಟಡದ 14 ನೇ ಮಹಡಿಯಿಂದ ಬಿದ್ದು ದಿಶಾ ಸಾಲಿಯಾನ್ ಸಾವನ್ನಪ್ಪಿದರು. ಐದು ದಿನಗಳ ನಂತರ, 14 ಜೂನ್ 2020 ರಂದು, ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆ ವೇಳೆ ಇಬ್ಬರ ಸಾವಿನ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಹಬ್ಬಿದ್ದವು.
ಸುಶಾಂತ್​ನಂತೆಯೇ ಜೀವನ ಕೊನೆಗೊಳಿಸೋಕೆ ನಿರ್ಧರಿಸಿದ್ದೆ ಎಂದ ವಿವೇಕ್ ಒಬೆರಾಯ್ಎರಡು ದಿನಗಳ ನಂತರ ಮರಣೋತ್ತರ ಪರೀಕ್ಷೆ
ಘಟನೆ ನಡೆದ ಎರಡು ದಿನಗಳ ನಂತರ ಅಂದರೆ ಜೂನ್ 11 ರಂದು ದಿಶಾ ಶವದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬೋರಿವಲಿ ಪೋಸ್ಟ್‌ಮಾರ್ಟಮ್ ಸೆಂಟರ್‌ನಲ್ಲಿ ದಿಶಾ ಅವರ ಶವಪರೀಕ್ಷೆ ನಡೆಸಲು ಎರಡು ದಿನಗಳ ವಿಳಂಬ ಏಕೆ ಎಂಬ ಪ್ರಶ್ನೆಯನ್ನು ಎತ್ತಲಾಯಿತು? ಶವಪರೀಕ್ಷೆ ವರದಿ ಬಂದಾಗ ದಿಶಾ ಸಾವಿಗೆ ತಲೆಗೆ ಗಾಯ ಹಾಗೂ ಇತರ ಹಲವು ಅಸ್ವಾಭಾವಿಕ ಗಾಯಗಳು ಕಾರಣ ಎಂದು ತಿಳಿದುಬಂದಿದೆ. ಏಕೆಂದರೆ ಆಕೆ 14ನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ದಿಶಾ ಅವರಿಗೆ ಹಲವು ಗಾಯಗಳಾಗಿದ್ದವು.ದೈಹಿಕ ಹಲ್ಲೆ ನಡೆಸಿದ ಸಾಕ್ಷ್ಯಾಧಾರಗಳು ಪತ್ತೆಯಾಗಿಲ್ಲ
ದಿಶಾ ಸಾಲಿಯಾನ್ ಮೇಲೆ ಯಾವುದೇ ದೈಹಿಕ ಹಲ್ಲೆ ನಡೆಸಿಲ್ಲ. 14 ನೇ ಮಹಡಿಯಿಂದ ಬಿದ್ದ ಕಾರಣದಿಂದಾಗಿ ಅವರು ಅನುಭವಿಸಿದ ಅನೇಕ ಗಾಯಗಳ ಬಗ್ಗೆ ವರದಿಯು ಹೇಳುತ್ತದೆ. ಖಾಸಗಿ ಭಾಗದಲ್ಲಿ ಎಲ್ಲಿಯೂ ಗಾಯವಾಗುವ ಪ್ರಶ್ನೆಯೇ ಇಲ್ಲ. ಹೀಗಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ದಿಶಾ ಸಾವಿನ ಹಿಂದೆ ಅನೇಕ ಪಿತೂರಿಗಳಿವೆ ಎಂದು ಹೇಳಲಾಗಿದೆ. ದಿಶಾ ಸಾವಿಗೂ ಸುಶಾಂತ್ ಸಾವಿಗೂ ನೇರ ಸಂಬಂಧವಿದೆ ಎಂದೂ ಆರೋಪಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಾಟಾಚಾರಕ್ಕೆ ಆಯೋಜಿಸಿದ ತಾಲ್ಲೂಕು ಗ್ರಾಮೀಣ ಕ್ರೀಡಾಕೂಟ ಆಯೋಜನೆ ಸಾರ್ವಜನಿಕರಿಂದ ಆರೋಪ...

Fri Dec 23 , 2022
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದ ಡಾ. ಭೀಮ್ ರಾವ್ ರಾಮ್ ಜಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಲಾಯಿತು…..ಗ್ರಾಮೀಣ ಮಟ್ಟದ ಕ್ರೀಡಾಸಕ್ತರಿಗಾಗಿ ಕ್ರೀಡಾಕೂಟಗಳನ್ನು ಸರ್ಕಾರ ಆಯೋಜನೆ ಮಾಡಿದೆ, ಆದರೆ ಸ್ಥಳದಲ್ಲಿ ಆರೋಗ್ಯ ಇಲಾಖೆ, ಕ್ರೀಡಾಕೂಟಕ್ಕೆ ಸಂಬಂದಿಸಿದ ಅದಿಕಾರಿಗಳು ಇಲ್ಲದೆ ಕಾಟಾಚಾರಕ್ಕೆ ಕ್ರೀಡಾಕೂಟ ಹಮ್ಮಿಕೊಳಲಾಗಿದೆ……ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ, ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ, ತಾಲೂಕ ಮಟ್ಟದ ಗ್ರಾಮೀಣ ಕ್ರೀಡಾಕೂಟಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಇಂದಿರಾ ಮಲ್ಲೇಶ್ ರವರು […]

Advertisement

Wordpress Social Share Plugin powered by Ultimatelysocial