ಯುವತಿಯರ ಮನ ಗೆದ್ದ ನಿರ್ಮಲಾ ಸೀತಾರಾಮನ್‌ ಸೀರೆ !

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸೀರೆ ಪ್ರಿಯೆ. ಸದಾ ವಿಶೇಷ ಸೀರೆಯುಟ್ಟು ಸಿಂಪಲ್‌ ಲುಕ್‌ನಲ್ಲೇ ಕಾಣಿಸಿಕೊಳ್ಳುವ ಅವರು ಈ ಬಾರಿಯ ಬಜೆಟ್‌ ಮಂಡನೆ ವೇಳೆ ಒಡಿಶಾದ “ಬೋಮ್ಕಾಯಿ’ ಸೀರೆ ಉಟ್ಟಿದ್ದು, ಅದು ಅನೇಕ ಹೆಂಗಳೆಯರ ಮನ ಗೆದ್ದಿದೆ.ಕೆಂಪು ಮತ್ತು ಬೂದು ಬಣ್ಣದಲ್ಲಿದ್ದ ಸೀರೆಗೆ ಬೆಳ್ಳಿ ಬಣ್ಣದ ಡಿಸೈನ್‌ ಇತ್ತು. ಒಡಿಶಾದ ಸೋನೆಪುರ್‌ ಜಿಲ್ಲೆ ಈ ಬೋಮ್ಕಾಯಿ ಸೀರೆಗೆ ಪ್ರಸಿದ್ಧ. ಅದಕ್ಕೆ ಸೋನೆಪುರಿ ಸಿಲ್ಕ್ ಎಂಬ ಹೆಸರೂ ಇದೆ. ಸಚಿವೆ, ಸೀರೆಗೆ ಮ್ಯಾಚ್‌ ಆಗುವಂತೆ ಬಿಂದಿ, ಬಳೆ, ಚಿನ್ನದ ಚೈನ್‌ ಮತ್ತು ಓಲೆ ಧರಿಸಿದ್ದರು.ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಮೊದಲ ಬಜೆಟ್‌ ಮಂಡನೆ ವೇಳೆ ಆಂಧ್ರಪ್ರದೇಶದ ಹೆಮ್ಮೆಯಾದ ಮಂಗಳಗಿರಿ ಸೀರೆ ಧರಿಸಿದ್ದರು. ಗುಲಾಬಿ ಬಣ್ಣದ ಸೀರೆಯಲ್ಲಿ ಚಿನ್ನದ ಬಣ್ಣದ ಬಾರ್ಡರ್‌ ಇತ್ತು. 2020ರಲ್ಲಿ ಹಳದಿ ಬಣ್ಣದ ಸೀರೆಯುಟ್ಟಿದ್ದ ಅವರು ಅದೇ ಬಣ್ಣದ ಕುಪ್ಪಸ ಧರಿಸಿದ್ದರು. 2021ರಲ್ಲಿ ತೆಲಂಗಾಣದ ಪೊಚಂಪಲ್ಲಿ ಕೈಮಗ್ಗ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಕೆಂಪು ಬಣ್ಣದ್ದಾಗಿದ್ದ ಆ ಸೀರೆಯ ಸೆರಗಿನಲ್ಲಿ ಇಕ್ಕಟ್‌ ಪ್ಯಾಟರ್ನ್ ಡಿಸೈನ್‌ ಇತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

''ಬೆಳ್ಳುಳ್ಳಿ'' ಸೇವನೆ ಹೃದಯ ರೋಗಕ್ಕೆ ರಾಮಬಾಣ: ಇನ್ನೂ ಅದರಿಂದ ಆಗುವ ಉಪಯೋಗಗಳೇನು ಗೊತ್ತಾ..?

Wed Feb 2 , 2022
ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಬೆಳ್ಳುಳ್ಳಿ ಕಂಡುಬರುತ್ತದೆ. ಇದು ತರಕಾರಿ ರುಚಿಯನ್ನು ಹೆಚ್ಚಿಸುವುದಲ್ಲದೆ, ಕಚ್ಚಾ ತಿಂದ ನಂತರ ವೂ ನಿಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆಯುರ್ವೇದದ ಪ್ರಕಾರ, ಬೆಳ್ಳುಳ್ಳಿ ನಿಮ್ಮ ರಕ್ತದೊತ್ತಡವನ್ನು ಕ ಡಿಮೆ ಮಾಡಲು, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು, ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಅನೇಕ ರೀತಿಯ ಕ್ಯಾನ್ಸ ರ್ ತಡೆಗಟ್ಟಲು ಸಹಾಯ ಮಾಡುತ್ತದೆಆಯುರ್ವೇದದ ಪ್ರಕಾರ, ಬೆಳ್ಳುಳ್ಳಿಯನ್ನು ಶತಮಾನಗಳಿಂದ ಔಷಧಿಯನ್ನಾಗಿ ಬಳಸಲಾಗುತ್ತದೆ.ಹಿತ್ತಲ ಗಿಡ ಮದ್ದಲ್ಲ ಎಂಬ ಗಾಧೆ ಮಾತು […]

Advertisement

Wordpress Social Share Plugin powered by Ultimatelysocial