ವಿಶ್ವದಲ್ಲೇ ಅತಿ ಹೆಚ್ಚು ಅಪಘಾತವಾಗುವುದು ಭಾರತದಲ್ಲಿ:

ನವದೆಹಲಿ: ಎಂಟು ಸೀಟಿನ ವಾಹನಗಳಿಗೆ ಆರು ಏರ್​ಬ್ಯಾಗ್​ ಇರಲೇಬೇಕೆಂದು ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ತಿಳಿಸಿದ್ದಾರೆ. ವಾಹನಗಳನ್ನು ಮತ್ತಷ್ಟು ಸುರಕ್ಷತೆ ಹೆಚ್ಚಿಸುವ ಅನಿವಾರ್ಯವಿದ್ದು, ದೇಶದಲ್ಲಿ ಪ್ರತಿವರ್ಷ ರಸ್ತೆ ಅಪಘಾತದಿಂದಲೇ 5 ಲಕ್ಷಕ್ಕೂ ಅಧಿಕ ಮಂದಿ ಮೃತಪಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವದಲ್ಲೇ ಭಾರತದಲ್ಲೇ ಅಧಿಕ ಮಂದಿ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ಅಧಿಕವಾಗಿದ್ದು, ಇದಕ್ಕೆ ವಾಹನಗಳು ಸುರಕ್ಷತಾ ಕ್ರಮ ವೈಫಲ್ಯವೂ ಆಗಿವೆ. ವಾಹನ ತಯಾರಿಕಾ ಕಂಪನಿಗಳು ಈ ಬಗ್ಗೆ ಹೆಚ್ಚು ಒತ್ತು ನೀಡಬೇಕಿದೆ ಎಂದುಉ ಅವರು ಹೇಳಿದ್ದಾರೆ.

ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ವಾಹನಗಳ ಸಂಖ್ಯೆಯೂ ಅಧಿಕವಾಗಿದ್ದು, ಶೇ.11ರಷ್ಟು ಸಾವಿನ ಪ್ರಮಾಣವೂ ಇದೆ. ಪ್ರತಿ ಗಂಟೆಗೆ 17ಮಂದಿ ಮೃತಪಡುತ್ತಿದ್ದು, 10 ಅಪಘಾತ ಪ್ರಕರಣದಲ್ಲಿ 6 ವಾಣಿಜ್ಯ ವಾಹನಗಳು ಸೇರಿದ್ದು, ಇದರಿಂದ ವರ್ಷಕ್ಕೆ 48,000ಕೋಟಿ ರೂ. ನಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಮುಂದೆ ತಯಾರಾಗುವ ವಾಹನಗಳಿಗೆ ರೇಟಿಂಗ್​ ಕೂಡ ನೀಡಲಾಗುವುದು. ಜನರ ಸುರಕ್ಷತೆಯ ಮಾನದಂಡವನ್ನು ಆಧರಿಸಿ ಈ ರೇಟಿಂಗ್​ ಸಿಗಲಿದೆ. ಇದರಿಂದ ಅಪಘಾತವನ್ನು ತಡೆಗಟ್ಟುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ವಾಹನ ತಯಾರಕಾ ಖಂಪನಿಗಳು ಅಗತ್ಯವಾಗಿ ಈ ನಿಯಮ ಪಾಲಿಸಬೇಕು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರತಿ 2 ತಿಂಗಳಿಗೊಮ್ಮೆ ರಾಜ್ಯಕ್ಕೆ ಬರಲಿದ್ದಾರೆ ಪಿಎಂ ಮೋದಿ!

Tue Jun 28 , 2022
  ಬೆಂಗಳೂರು: ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟದ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಜ್ಯದ ಹಲವಾರು ಯೋಜನೆಗಳನ್ನು ಪ್ರಾರಂಭಿಸಲು, ಶಂಕುಸ್ಥಾಪನೆ ಅಥವಾ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಚಿಂತನೆ ನಡೆಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾದ ಬೆಂಗಳೂರು ಸಂಸ್ಥಾಪಕ ಕೆಂಪೇಗೌಡರ 108 ಅಡಿ ಬೃಹತ್ ಪ್ರತಿಮೆ ಮತ್ತು ವಸ್ತುಸಂಗ್ರಹಾಲಯ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿದ್ದು ಪ್ರಧಾನಿ […]

Advertisement

Wordpress Social Share Plugin powered by Ultimatelysocial