ನೀವೂ ಖರೀದಿಸಿದ್ದೀರಾ ಫಿಟ್‌ ಬಿಟ್‌ ಸ್ಮಾರ್ಟ್‌ ವಾಚ್‌.? ಹಾಗಾದ್ರೆ ಈ ಸುದ್ದಿ ಓದಿ

ನಿಮ್ಮ ಬಳಿ ಫಿಟ್‌ ಬಿಟ್‌ ಅಯಾನಿಕ್‌ ಸ್ಮಾರ್ಟ್‌ ವಾಚ್‌ ಇದೆಯಾ ? ಇದ್ದರೆ ತಕ್ಷಣವೇ ಅದರ ಬಳಕೆ ನಿಲ್ಲಿಸಿಬಿಡಿ. ಯಾಕಂದ್ರೆ ಈ ವಾಚ್‌ ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಅಪಾಯವಿದೆ ಅಂತಾ ಖುದ್ದು ಕಂಪನಿಯೇ ಹೇಳಿದೆ.

 

ವಾಚ್‌ ಗಳಲ್ಲಿರುವ ಬ್ಯಾಟರಿ ಅತಿಯಾಗಿ ಬಿಸಿಯಾಗುತ್ತಿರುವುದರಿಂದ ಸುಟ್ಟು ಹೋಗುವ ಸಾಧ್ಯತೆ ಇದ್ದು, 10 ಲಕ್ಷಕ್ಕೂ ಅಧಿಕ ವಾಚ್‌ ಗಳನ್ನು ಫಿಟ್‌ ಬಿಟ್‌ ಕಂಪನಿ ಮಾರುಕಟ್ಟೆಯಿಂದ ಹಿಂಪಡೆಯುತ್ತಿದೆ.ಅಮೆರಿಕದಲ್ಲೇ ಸುಮಾರು 10 ಲಕ್ಷ ಫಿಟ್‌ ಬಿಟ್‌ ವಾಚ್‌ ಗಳು ಮಾರಾಟವಾಗಿದ್ದವು. ಅದನ್ನು ಹೊರತುಪಡಿಸಿ ಜಗತ್ತಿನಾದ್ಯಂತ ಕಂಪನಿ ಸುಮಾರು 6.93 ಲಕ್ಷ ವಾಚ್‌ ಗಳನ್ನು ಸೇಲ್‌ ಮಾಡಿತ್ತು. ಈ ಪೈಕಿ ವಾಚ್‌ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಅಮೆರಿಕದಿಂದ 115 ದೂರುಗಳು ಬಂದಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ 59 ಗ್ರಾಹಕರು ಕಂಪ್ಲೇಂಟ್‌ ಮಾಡಿದ್ದಾರೆ.

ಇವರ ಪೈಕಿ ಸುಮಾರು 118 ಜನರು ಸುಟ್ಟ ಗಾಯಗಳಿಂದ ತೊಂದರೆಗೊಳಗಾಗಿದ್ದಾರೆ. ಹಾಗಾಗಿ ಫಿಟ್‌ ಬಿಟ್‌ ಕಂಪನಿ ಅಯಾನಿಕ್‌ ಸ್ಮಾರ್ಟ್‌ ವಾಚ್‌ ಗಳ ಪೈಕಿ ಸಮಸ್ಯೆ ಇರುವ ಕೆಲವು ನಿರ್ದಿಷ್ಟ ಬಣ್ಣ ಹಾಗೂ ಮಾದರಿಯ ವಾಚ್‌ ಗಳನ್ನು ಮಾತ್ರ ಹಿಂಪಡೆಯುತ್ತಿದೆ. 299 ಡಾಲರ್‌ ಹಣವನ್ನು ಗ್ರಾಹಕರಿಗೆ ಮರುಪಾವತಿ ಮಾಡಲು ನಿರ್ಧರಿಸಿದೆ. ಅಷ್ಟೇ ಅಲ್ಲ ಫಿಟ್‌ ಬಿಟ್‌ ನ ಬೇರೆ ಮಾದರಿಯ ವಾಚ್‌ ಖರೀದಿ ಮಾಡಲು ಗ್ರಾಹಕರು ಇಚ್ಛಿಸಿದಲ್ಲಿ ಅವರಿಗೆ ಶೇ.40 ರಷ್ಟು ಡಿಸ್ಕೌಂಟ್‌ ಸಹ ಸಿಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಹಮದಾಬಾದ್: ಗರ್ಭಪಾತಕ್ಕೆ ನಿರಾಕರಿಸಿದ್ದಕ್ಕೆ ಪತಿ ಪತ್ನಿಗೆ ಹಾಕಿ ಸ್ಟಿಕ್‌ನಿಂದ ಥಳಿಸಿದ್ದಾನೆ. ದೂರು ದಾಖಲಿಸಲಾಗಿದೆ

Sat Mar 5 , 2022
  ಅಹಮದಾಬಾದ್: ಕೌಟುಂಬಿಕ ಹಿಂಸೆಯ ಮತ್ತೊಂದು ಆಘಾತಕಾರಿ ಘಟನೆಯಲ್ಲಿ, ಅಹಮದಾಬಾದ್‌ನ ಸ್ಯಾಟಲೈಟ್ ಪ್ರದೇಶದಲ್ಲಿ ಗರ್ಭಪಾತಕ್ಕೆ ನಿರಾಕರಿಸಿದ ಪತ್ನಿಯ ಮೇಲೆ ಪತಿಯೊಬ್ಬ ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ್ದಾನೆ. 35 ವರ್ಷದ ಸಂತ್ರಸ್ತೆ ತನ್ನ ಪತಿ ವಿರುದ್ಧ ಪೊಲೀಸ್ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಆರೋಪಿಯು 2019 ರಲ್ಲಿ ಆಕೆಯ ಮೇಲೆ ದಾಳಿ ಮಾಡಿ ನಂತರ ಜುಲೈ 2021 ರಲ್ಲಿ ಅವಳನ್ನು ತೊರೆದರು. ಘೋರವಾದ ಅಗ್ನಿಪರೀಕ್ಷೆಯನ್ನು ವಿವರಿಸುವಾಗ, […]

Advertisement

Wordpress Social Share Plugin powered by Ultimatelysocial