ನೋ ಹೆಲ್ಮೆಟ್ ನೋ ಪೆಟ್ರೋಲ್’ ನಿಯಮ ಜಾರಿ

ದೇಶಾದ್ಯಂತ ವಾಹನಗಳ ಸಂಖ್ಯೆ ಹೆಚ್ಚಾದಂತೆ ನಿಯಮ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚಿನ ಮಟ್ಟದಲ್ಲಿ ಏರಿಕೆಯಾಗಿದ್ದು, ದ್ವಿಚಕ್ರ ವಾಹನಗಳ ಸವಾರಿ ವೇಳೆ ಹೆಲ್ಮೆಟ್ ಬಳಕೆ ಮಾಡದ ವಾಹನ ಸವಾರರಿಗೆ ದಂಡದ ಜೊತೆ ಮತ್ತೊಂದು ಕಡ್ಡಾಯ ನಿಯಮವನ್ನು ಜಾರಿಗೆ ತರಲಾಗಿದೆ. ಹೆಲ್ಮೆಟ್ ಬಳಕೆಯನ್ನು ಪರಿಣಾಮಕಾರಿ ಜಾರಿಗೆ ತರಲು ವಿವಿಧ ರಾಜ್ಯಗಳಲ್ಲಿ ನೋ ಹೆಲ್ಮೆಟ್, ನೋ ಪೆಟ್ರೋಲ್ ನಿಯಮವನ್ನು ಅಳವಡಿಸಿಕೊಂಡಿವೆ. ಯಾರು ಹೆಲ್ಮೆಟ್ ಬಳಕೆ ಮಾಡುವುದಿಲ್ಲವೋ ಅಂತಹ ಬೈಕ್ ಮಾಲೀಕರಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಕಲಾಗುವುದಿಲ್ಲ. ಇದು ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಅಭಿಯಾನ ಮಾದರಿಯಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಪ್ರದೇಶದಲ್ಲಿರುವ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರಿಗೂ ಸೂಚನೆ ನೀಡಲಾಗಿದೆ. ಡಿಸೆಂಬರ್ 8ರಿಂದ ಮುಂದಿನ 60 ದಿನಗಳ ತನಕ ಕಡ್ಡಾಯವಾಗಿ ಹೊಸ ನಿಯಮ ಪಾಲನೆ ಮಾಡುವಂತೆ ಪೆಟ್ರೋಲ್ ಬಂಕ್ ಮಾಲೀಕರಿಗೆ ಸೂಚನೆ ನೀಡಲಾಗಿದೆ.

ಇದನ್ನು ಓದಿ:ಬೀದರ್ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆ

Please follow and like us:

Leave a Reply

Your email address will not be published. Required fields are marked *

Next Post

ನಾಳೆ ಬಂದ್ ನಲ್ಲಿ ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಭಾಗಿ

Mon Dec 7 , 2020
ಭಾರತ್ ಬಂದ್ ಗೆ ದಲಿತ ಕಾರ್ಮಿಕ ಸಂಘಟನೆಗಳು ಹಾಗೂ ಆಲ್ ಇಂಡಿಯಾ ಅಗ್ರೇರಿಯನ್ & ರೂರಲ್ ಲೇಬರ್ ಅಸೋಸಿಯೇಷನ್ ನಿಂದ ಬೆಂಬಲ ನೀಡಲಿದ್ದಾರೆ. ದಲಿತ ಸಂಘಟನೆಗಳ ಮುಖಂಡ ಎನ್ ವೆಂಕಟೇಶ್ ನಾಳೆ ನಡೆಯುವ ರೈತರ ಅನಿರ್ದಿಷ್ಟವಾದಿ ಬಂದ್ ನಲ್ಲಿ ಭಾಗವಹಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಓದಿ:ನೋ ಹೆಲ್ಮೆಟ್ ನೋ ಪೆಟ್ರೋಲ್’ ನಿಯಮ ಜಾರಿ Please follow and like us:

Advertisement

Wordpress Social Share Plugin powered by Ultimatelysocial