ಪಕ್ಷೇತರ ಅಭ್ಯರ್ಥಿಯ ಬರದ ಪ್ರಚಾರದಿಂದ ಅನ್ಯ ಪಕ್ಷಗಳು ಟುಸ್,!

ಚಳ್ಳಕೆರೆ/ನನ್ನ ತಂದೆ ಹಾಗೂ ತಾತನ ಆಸ್ತಿ ಮಾರಿ ಚುನಾವಣೆ ರಂಗಕ್ಕೆ ಬಂದು ಪ್ರಚಾರ ಮಾಡುತ್ತಿದ್ದೇನೆ ನಾನು ಎರಡು ಬಾರಿ ಚುನಾವಣೆಗೆ ನಿಂತು ಸೋತಿದ್ದೇನೆ ಮತದಾರ ಪ್ರಭುಗಳು ಈ ಬಾರಿ ಕೈ ಹಿಡಿಯಲಿದ್ದಾರೆ ನನಗೆ ಭರವಸೆ ಇದೆ ಅಲ್ಲದೆ ತಂದೆಯವರು ಮಾಡಿದ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ ಆಗಲಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಹೇಳಿದರು.

ಇವರು ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಅಪಾರ ಕಾರ್ಯಕರ್ತರ ಜೊತೆ ಸಂವಾದ ನಡೆಸಿ ಮಾತನಾಡಿದರು ನಮ್ಮ ತಂದೆಯವರಾದ ದಿವಂಗತ ತಿಪ್ಪೇಸ್ವಾಮಿಯವರು ನಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸ ಮಾಡಿಸಿ ಮೆಚ್ಚುಗೆ ಪಡೆದಿದ್ದಾರೆ ಇದರಿಂದಾಗಿ ಈ ಕ್ಷೇತ್ರದ ಸ್ಥಳಿಕನಾಗಿ ನೈತಿಕ ಹೊಣೆ ಹೊತ್ತು ಮತದಾರರ ಬಳಿ ಬಂದಿದ್ದೇನೆ ಜಾತಿಭೇದ ಮೇಲು-ಕೀಳು ಏಕತೆಯೊಂದಿಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಈ ಭಾಗದ ಎಲ್ಲ ಸಮುದಾಯಗಳ ಸಮಸ್ಯೆಗಳ ಅಹವಾಲನ್ನು ಸ್ವೀಕರಿಸಿ ನಮ್ಮ ಕ್ಷೇತ್ರದ ಮತದಾರರು ಹೇಗೆ ಹೇಳುತ್ತಾರೆ ಹಾಗೆ ನಿಮ್ಮ ಕಷ್ಟ ಸುಖಗಳ ಜೊತೆಗೆ ಬೆರೆತು ಅಭಿವೃದ್ಧಿಯನ್ನು ಮಾಡಿ ತೋರಿಸುತ್ತೇನೆ ಎಂದು ಹೇಳಿದರು.

ಇನ್ನು ಈ ವೇಳೆ ನಿಕಟ ಪೂರ್ವ ತಶೀಲ್ದಾರ್ ಏನ್ ರಘುಮೂರ್ತಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜ್ಯದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ ಇತ್ತ ಬಿಜೆಪಿ ಸರ್ಕಾರ ಹಗರಣಗಳ ಸರಮಾಲೆಯಾಗಿದ್ದು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ರಾಷ್ಟ್ರ ಹಾಗು ರಾಜ್ಯದ ಜನತೆಗೆ ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯವನ್ನು ಕೊಳ್ಳೆ ಹೊಡೆದಿದ್ದಾರೆ ಇಂಥ ಸರ್ಕಾರಗಳನ್ನು ನಂಬಿ ರಾಜ್ಯದ ಜನತೆ ಮೋಸ ಹೋಗಿ ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷ ಬೇಡ ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ದೃಢ ನಿರ್ಧಾರವನ್ನು ಕೈಗೊಂಡಿದ್ದಾರೆ ಇದರಿಂದಾಗಿ ಪಕ್ಷೇತರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಅವರಿಗೆ ಸ್ಥಳೀಯರಾಗಿದ್ದು ಇವರನ್ನು ಗೆಲ್ಲಿಸಿಕೊಟ್ಟರೆ ತಾಲೂಕಿನ ಎಲ್ಲಾ ಅಭಿವೃದ್ಧಿಗಳನ್ನು ಮಾಡಿಕೊಡುತ್ತಾರೆ ಎಂದು ಹೇಳಿದರು,

ಇನ್ನು ಈ ಸಂದರ್ಭದಲ್ಲಿ ರಾಧಾ ಸ್ವಾಮಿ ಮಲ್ಲಿಕಾರ್ಜುನ್ ಕೆಟಿ ನಿಜಲಿಂಗಪ್ಪ ರಘು ಸುರೇಶ್ ಸೋಮಶೇಖರ್ ಮಧು ಕುಮಾರ್ ಶಿವಪುತ್ರಪ್ಪ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಅಜ್ಜಪ್ಪ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ನ ಇಬ್ಬರು ರಾಷ್ಟ್ರೀಯ ನಾಯಕರು ಇಂದು ಒಂದೇ ವೇದಿಕೆಯಲ್ಲಿ..!

Tue May 2 , 2023
ಜೊತೆಗೆ ಭಾರತ್ ಜೋಡೋ ಪಾದಯಾತ್ರೆ ಬಳಿಕ ಎರಡನೇ ಬಾರಿಗೆ ಜಿಲ್ಲೆಗೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನ ಇಬ್ಬರು ರಾಷ್ಟ್ರೀಯ ನಾಯಕರು ಇಂದು ಒಂದೇ ವೇದಿಕೆಯಲ್ಲಿ, ಇಂದು ಮಧ್ಯಾಹ್ನ 3.30ಕ್ಕೆ ಚಾಮರಾಜನಗರದ ರೇಷ್ಮೆಗೂಡು ಮಾರುಕಟ್ಟೆ ಸಮೀಪದ ಆವರಣದಲ್ಲಿ ಕಾಂಗ್ರೆಸ್ ಸಮಾವೇಶ. ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಕ್ಷೇತ್ರಕ್ಕೆ ದಾಂಗುಡಿ ಇಡುತ್ತಿದೆ ಕೈ ಪಡೆ. ಬಿಜೆಪಿಯಿಂದ ವಿ. ಸೋಮಣ್ಣ ಸ್ಪರ್ಧಿಸಿರುವ ಕಾರಣಕ್ಕೆ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಕಾಂಗ್ರೆಸ್. ಸೆ. […]

Related posts

Advertisement

Wordpress Social Share Plugin powered by Ultimatelysocial