ನುಗ್ಗೆಸೊಪ್ಪಿನಲ್ಲಿದೆ ʼಪೌಷ್ಟಿಕಾಂಶʼಗಳು..!

ನುಗ್ಗೆಸೊಪ್ಪಿನಲ್ಲಿದೆ ʼಪೌಷ್ಟಿಕಾಂಶʼಗಳು..!

ನುಗ್ಗೆಕಾಯಿ ಮಾತ್ರವಲ್ಲ ನುಗ್ಗೆ ಮರದ ಸೊಪ್ಪನ್ನು ಕೂಡಾ ಅಡುಗೆಗೆ ಬಳಸಬಹುದು ಮತ್ತು ಇದರಿಂದ ಹಲವು ಆರೋಗ್ಯದ ಪ್ರಯೋಜನಗಳು ಇವೆ ಎಂಬುದು ನಿಮಗೆ ತಿಳಿದಿದೆಯೇ.?

ನುಗ್ಗೆಸೊಪ್ಪಿನಿಂದ ಸಾಂಬಾರ್, ತಂಬುಳಿ, ಪಲ್ಯ ಹಾಗೂ ರೊಟ್ಟಿ ತಯಾರಿಸಬಹುದು. ಇದರಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ.

ಹೀಗಾಗಿ ಅಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಇದನ್ನು ಸೇವಿಸಬಹುದು.

ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ – ಆಕ್ಸಿಡೆಂಟ್ ಗಳು, ವಿಟಮಿನ್ ‘ ಸಿ ‘, ಜಿಂಕ್ ಮತ್ತು ಇತರ ಸಕ್ರಿಯ ವಸ್ತುಗಳಿಂದ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವಂತಹ ಕೋಶಗಳ ವಿರುದ್ಧ ಹೋರಾಡಿ ದೇಹಕ್ಕೆ ಶಕ್ತಿ ತುಂಬುತ್ತದೆ.

ನಮ್ಮ ದೇಹದಲ್ಲಿ ಲಿವರ್ ಸರಿಯಾಗಿ ಕೆಲಸ ಮಾಡುತ್ತಿರಬೇಕಾದರೆ ನುಗ್ಗೆ ಸೊಪ್ಪನ್ನು ಆಗಾಗ ತಿನ್ನುತ್ತಿರಬೇಕು. ಇದು ಲಿವರ್ ನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ.

ಸತತವಾಗಿ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಮಧುಮೇಹದಿಂದ ದೂರವಿರಬಹುದು. ಇದು ಕಣ್ಣಿನ ಆರೋಗ್ಯಕ್ಕೂ ಸಹಕಾರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳಿಗ್ಗೆ ಒಂದು ಲೋಟ ಇದನ್ನು ಕುಡಿದರೆ ತೂಕ ಇಳಿಯುತ್ತೆ

Tue Dec 28 , 2021
ಸಿಹಿ ತಿನಿಸು ಮಾಡುವಾಗ ಒಣದ್ರಾಕ್ಷಿಯನ್ನು ಬಳಸುವುದು ಹೆಚ್ಚು. ಈ ಡ್ರೈ ಫ್ರುಟ್ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ತುಂಬ ಒಳ್ಳೆಯದು. ಒಣದ್ರಾಕ್ಷಿ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ಹೋಗಲಾಡಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಣದ್ರಾಕ್ಷಿಯ ನೀರನ್ನು ನೀವು ಪ್ರತಿನಿತ್ಯ ಕುಡಿಯುವುದರಿಂದ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತೆ. ಒಣದ್ರಾಕ್ಷಿಯ ನೀರನ್ನು ಹೀಗೆ ಮಾಡಿ : 2 ಕಪ್ ನೀರಿಗೆ 150 ಗ್ರಾಂ ಒಣದ್ರಾಕ್ಷಿಯನ್ನು ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಇದನ್ನು ಸ್ವಲ್ಪ ಬಿಸಿ […]

Advertisement

Wordpress Social Share Plugin powered by Ultimatelysocial